Skip to main content

Posts

Showing posts with the label Core walking and Marchpast

4146.ಕೇವಲ_ನಡಿಗೆಯಲ್ಲಇದು_ದೇಹದ_ಸಮತೋಲನದ_ಕಲೆ.ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.

ಕೇವಲ_ನಡಿಗೆಯಲ್ಲ ಇದು_ದೇಹದ_ಸಮತೋಲನದ_ಕಲೆ. ಕೋರ್_ವಾಕಿಂಗ್_ಮಾರ್ಚ್_ಫಾಸ್ಟ್.   2020ರ ಕೊರಾನಾ ಲಾಕ್ ಡೌನ್ ಮೊದಲ ದಿನದಿಂದ ಪ್ರಾರಂಭಿಸಿದ ನನ್ನ ವಾಕಿಂಗ್ ಗೆ ಇವತ್ತಿಗೆ ಆರು ವರ್ಷ ದಾಟಿದೆ.      ಪ್ರಾರಂಭಿಸುವಾಗ ನನ್ನ ವಯಸ್ಸು 55 ಈಗ 61 ಇದರ ಮಧ್ಯೆ ನನ್ನ ನಡಿಗೆ ಶೈಲಿ ಬದಲಾಗಿ ಬಿಟ್ಟಿತ್ತು, ನನ್ನ ಬೆನ್ನು ಬಾಗಿದೆ ಅಂತ ಮಕ್ಕಳು ಗುರುತಿಸಿದ್ದರು ಆದರೆ ಇದು ವಯೋ ಸಹಜ ಅಂತ ಸುಮ್ಮನಾಗಿದ್ದೆ.    ಮೊನ್ನೆ ಭಾರತಿ ಬಿ.ವಿ ಎಂಬುವರು ಬರೆದ ಪೇಸ್ ಬುಕ್ ಪೋಸ್ಟ್ ನೋಡಿದೆ ಅವರದ್ದು ನನ್ನದೇ ರೀತಿ ಸಮಸ್ಯೆ ಅವರು ಅದನ್ನು ಕೋರ್ ವಾಕಿಂಗ್ ಮೂಲಕ ಸರಿ ಪಡಿಸಿಕೊಂಡಿದ್ದು ವಿಡಿಯೋ ಸಹಿತ ಪೋಸ್ಟ್ ಮಾಡಿದ್ದರು ಅವರ ಪೋಸ್ಟ್ ಗೆ ನ #ಬಾ_ನಲ್ಲೆ_ಮದು_ಚಂದ್ರಕೆ ಕಥೆ ಬರೆದ ಸಾಹಿತಿ ಮತ್ತು ಪೋಲಿಸ್ ಅಧಿಕಾರಿ ಜೇಬರ್ ಅವರು ಪ್ರತಿ ನಿತ್ಯ ವಾಕಿಂಗ್ ನಲ್ಲಿ ಮಾರ್ಚ್ ಪಾಸ್ಟ್ ಶೈಲಿ ಅಳವಡಿಸಿಕೊಳ್ಳವಂತೆ ಪ್ರತಿಕ್ರಿಯೆ ನೀಡಿದ್ದರು ಅದರ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.   ನಾನು ಇವರಿಬ್ಬರ ಸಲಹೆಯಿಂದ ಪ್ರೇರಿತನಾಗಿ ಪ್ರತಿ ದಿನದ ನನ್ನ ಒಂದು ಗಂಟೆ ವಾಕಿಂಗ್ ನಲ್ಲಿ ಕೆಲವು ನಿಮಿಷ ಕೋರ್ ವಾಕಿಂಗ್ ಮತ್ತು ಮಾರ್ಚ್ ಫಾಸ್ಟ್ ಎರೆಡೂ ಪ್ರಾರಂಬಿಸಿದ್ದೇನೆ.   ಕೋರ್ ಮಸಲ್ಸ್ ಅಂದರೆ ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳು.   ನಡೆಯುವಾಗ ಕೋರ್ ಮಸಲ್ಸ್‌ಗಳನ್ನು (ಹೊಟ್ಟೆ ಮತ್ತು ಬೆನ್ನಿನ ಸ...