ಶಿವಮೊಗ್ಗದಲ್ಲೇ_ತಯಾರಿಸಿ_ಮಾರಾಟ_ಮಾಡುತ್ತಿದ್ದಾರೆಕಟ್ಟಿಗೆ_ಸ್ಟವ್_LPG_ಸ್ಟವ್_ಕಾರ್ಯಕ್ಷಮತೆಯಲ್ಲಿ
ದೂರದ ಜಿಲ್ಲೆಗಳಲ್ಲಿ ಮಾತ್ರ ಕಟ್ಟಿಗೆ ಒಲೆ ಸ್ಟವ್ ತಯಾರಾಗುತ್ತಿತ್ತು ಮುಂಗಡ ಅಡ್ವಾನ್ಸ್ ನೀಡಿ ಡೆಲಿವರಿಗೆ ಕಾಯಬೇಕಾಗಿತ್ತು.
ಇರಾನ್ ಅಮೇರಿಕಾ ಯುದ್ಧದಿಂದ LPG ವಿತರಣೆ ವ್ಯತ್ಯಾಸ ಆದಾಗ ಅನೇಕ ರೆಸ್ಟೋರೆಂಟ್ ಬಾಗಿಲು ಹಾಕಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಈಗ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಯುವ ಉದ್ಯಮಿ ಮನ್ಸೂರ್ ತಮ್ಮ ನ್ಯಾಷನಲ್ ಸ್ಟೀಲ್ ಪರ್ನಿಚರ್ ಮತ್ತು ವೆಲ್ಡಿಂಗ್ ವರ್ಕ್ ಸಂಸ್ಥೆಯಲ್ಲಿ 3 ಸಾವಿರದಿಂದ 40 ಸಾವಿರ ತನಕದ ತರಹಾವಾರಿ ಕಟ್ಟಿಗೆ ಸ್ಟವ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮನೆಗಳಿಗೆ, ಹೋಟೆಲ್ ಗಳಿಗೆಗೆ ಮತ್ತು ಕಲ್ಯಾಣ ಮಂಟಪಗಳಿಗೆ ಇವರು ಕಟ್ಟಿಗೆ ಸ್ಟವ್ ತಯಾರಿಸಿ ನೀಡಿದ್ದಾರೆ.
ಈ ಸ್ಟವ್ ಹೊಗೆ ಇಲ್ಲದೆ ಕೆಲಸ ಮಾಡುವ ಮುಖ್ಯ ತಂತ್ರ ಇದರಲ್ಲಿರುವ ಅತ್ಯಂತ ಚಿಕ್ಕದಾದ ಬ್ಯಾಟರಿ ಚಾಲಿತ ಪ್ಯಾನ್ ಇದು ಹಾಳಾದರೆ ಇವರೆ ಬದಲಿಸಿಕೊಡುತ್ತಾರೆ ಆದ್ದರಿಂದ ಇವರ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡ್ ಜಾಸ್ತಿ.
ನಮ್ಮ ಕಲ್ಯಾಣ ಮಂಟಪಕ್ಕೆ ಮತ್ತು ರೆಸ್ಟೋರೆಂಟ್ ಗೆ ಇವರ ಕಟ್ಟಿಗೆ ಒಲೆ ಖರೀದಿಸುವ ಆಲೋಚನೆ ಇದೆ ಆದ್ದರಿಂದ ಇವರ ಬೇಟಿ ಆಯಿತು, ಆ ದಿನ ಅವರು ಸಾಗರಕ್ಕೆ ಕೆಲವು ಕಟ್ಟಿಗೆ ಓಲೆ ಡಿಲವರಿ ಕೊಟ್ಟು ಬರುವಾಗ ನನ್ನ ಆಫೀಸಿನಲ್ಲಿ ಅವರ ಸಂದರ್ಶನ ಮಾಡಿದ್ದೇನೆ ನೋಡಿ.
ಇವರ ಕಟ್ಟಿಗೆ ಒಲೆ ಬಗ್ಗೆ ಮಾಹಿತಿ - ಬೆಲೆ ಇತ್ಯಾದಿಗಾಗಿ ಇವರ
ವಿಸಿಟಿಂಗ್ ಕಾರ್ಡ್ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ.
#stove #LPG #firewood #shivamogga #nationalsteel #furniture #mansoor
#restaurante
Comments
Post a Comment