ನಮ್ಮೂರು_ಆನಂದಪುರಂನ_ಐತಿಹಾಸಿಕ
ಕೋಟೆ_ಅಂಜನೇಯ_ಸನ್ನಿದಿಯಲ್ಲಿ_ರುದ್ರಾಭಿಷೇಕ.
ಕೆಳದಿ ಅರಸರ ಆನಂದಪುರಂ ಕೋಟೆ ನಾಲ್ಕು ನೂರು ವರ್ಷಗಳ ಹಿಂದೆ #ಯಡೇಹಳ್ಳಿ_ಕೋಟೆ ಎಂಬ ಹೆಸರಿನಲ್ಲಿ ಹರತಾಳಿನ ಕಿರಾತಕರಿಂದ ರಾಜ ವೆಂಕಟಪ್ಟ ನಾಯಕರು ವಶಪಡಿಸಿಕೊಂಡು ಈ ಕೋಟೆ ಅಭಿವೃದ್ಧಿ ಮಾಡಿದರು ಮತ್ತು ಅವರು ಆನಂದಪುರಂನ #ಗಂಗಾಮಠದ_ಗುತ್ಯಮ್ಮ ದೇವರ ದೇವಸ್ಥಾನದ ಎದರು ನಿತ್ಯ ಸುಂದರವಾದ ರಂಗೋಲಿ ಬಿಡಿಸುತ್ತಿದ್ದ #ಬೆಸ್ತರ_ಸುಂದರಿ_ಚಂಪಕಳ ಮೇಲೆ ಮೋಹಗೊಂಡು ವಿವಾಹ ಆಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ಇಡುತ್ತಾರೆ.
ಈ ಅಂತರ್ಜಾತಿ ವಿವಾಹ ವಿರೋಧಿಸಿ ಪಟ್ಟದ ರಾಣಿ #ಭದ್ರಮ್ಮಾಜಿ ಆಹಾರ ನೀರು ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಇದರಿಂದ ಪ್ರಜೆಗಳಿಗೆ ರಾಜ ವೆಂಕಟಪ್ಪ ನಾಯಕರ ಮೇಲೆ ಅಸಮದಾನ ಉಂಟಾಗುತ್ತದೆ ಇದೆಲ್ಲ ರಾಜ ತನ್ನನ್ನ ಮದುವೆ ಆದ್ದರಿಂದ ತನ್ನ ಜಾತಿ ಕಾರಣದಿಂದ ಎಂದು ನೊಂದ ಚಂಪಕ ರಾಣಿ ಹಾಲಿನಲ್ಲಿ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಕೋಟೆಗೆ ಸಮೀಪದಲ್ಲಿನ ತನ್ನ ಪ್ರೀತಿಯ ರಾಣಿಯ #ಸಮಾದಿ_ಸ್ಥಳವನ್ನು ಸ್ಮಾರಕವಾಗಿ ಕೆಳದಿ ರಾಜ ವೆಂಕಟಪ್ಪ ನಾಯಕರು #ಚಂಪಕ_ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಆನಂದಪುರಂ ಎಂದು ನಾಮಕರಣ ಮಾಡಿದರು ಎಂಬ ದಾಖಲೆ ಗೆಜೆಟಿಯರ್ ನಲ್ಲಿದೆ.
ಆನಂದಪುರಂನ ಚ೦ಪಕ ಸರಸ್ಸು ಈಗ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ವೀಕ್ಷಣೆಗೆ ಬರುತ್ತಾರೆ.
ಈ ಆನಂದಪುರಂ ಕೋಟೆ ಮಧ್ಯದಲ್ಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ನಿರ್ಮಾಣ ಮಾಡಿದ್ದರಿಂದ ಕೋಟೆ ಸಂಪೂರ್ಣ ನಾಶವಾಗಿ ಅಳಿದುಳಿದ ಅವಶೇಷ ಇದೆ.
ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಕೋಟೆ ಆಂಜನೇಯ ದೇವಾಲಯ ಈಗಲೂ ಕಾಲ ಕಾಲಕ್ಕೆ ಭಕ್ತರಿಂದ ನವೀಕರಣವಾಗಿ ಪೂಜಿಸಲ್ಪಡುತ್ತಿದೆ.
ಈ ದೇವಾಲಯದ ಅರ್ಚಕರಾದ #ಬಳ್ಳಿಬೈಲು_ಮದುಜೊಯಿಸರು ಆನಂದಪುರಂನ ಮೂಲ ಪುರೋಹಿತರ ವಂಶಸ್ಥರು.
ಆನಂದಪುರಂನ ಕೋಟೆ ಆಂಜನೇಯನಿಗೆ ನಾನು ಸಮರ್ಪಿಸಿದ ರುದ್ರಾಭಿಷೇಕ ಫೂಜೆಯ ವಿಡಿಯೋ ನೋಡಿ.
ಹನುಮಂತನು ಶಿವನ 11ನೇ ರುದ್ರಾವತಾರವೆಂದು ಪುರಾಣಗಳಲ್ಲಿ ಉಲ್ಲೇಖವಿರುವುದರಿಂದ ಶನಿವಾರದಂದು ಆಂಜನೇಯನಿಗೆ ರುದ್ರಾಭಿಷೇಕ ಮಾಡಿಸುವುದು ಅತ್ಯಂತ ಶ್ರೇಷ್ಠ ಹಾಗೂ ಫಲಪ್ರದವಾದ ಸೇವೆ.
ಹನುಮಂತನು ಶಿವನ ಅಂಶಸಂಭೂತ (ಏಕಾದಶ ರುದ್ರ)ಆದ್ದರಿಂದ ಶಿವನಿಗೆ ಪ್ರಿಯವಾದ ‘ಶ್ರೀ ರುದ್ರಂ’ ಪಠಣೆಯೊಂದಿಗೆ ಹನುಮಂತನಿಗೆ ಅಭಿಷೇಕ ಮಾಡುವುದು ವಿಶೇಷ ಫಲ ನೀಡುತ್ತದೆ.
#ಶನಿ_ಮಹಾತ್ಮನ ಬಾಧೆ ಅಥವಾ ಪ್ರಭಾವ ಇರುವವರು ಶನಿವಾರ ಹನುಮಂತನಿಗೆ ಪೂಜೆ ಮತ್ತು ರುದ್ರಾಭಿಷೇಕ ಮಾಡಿಸುವುದರಿಂದ ಶನಿ ದೋಷದ ತೀವ್ರತೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.
ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ (ಪಂಚಾಮೃತ), ಎಳನೀರು ಹಾಗೂ ಶುದ್ಧ ಗಂಧದ ನೀರು.
ಅಭಿಷೇಕದ ನಂತರ ಸಿಂಧೂರ ಧಾರಣೆ.ವೀಳ್ಯದೆಲೆಯ ಮಾಲೆ ಅಥವಾ ತುಳಸಿ ಮಾಲೆ ಅರ್ಪಣೆ.
ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯ ದೀಪ ಹಚ್ಚುವುದು.
ರುದ್ರಾಭಿಷೇಕ ನಡೆಯುವಾಗ ಶ್ರೀ ರುದ್ರ ಪ್ರಶ್ನ (ನಮಕ-ಚಮಕ), ಹನುಮಾನ್ ಚಾಲೀಸಾ ಅಥವಾ ‘ಓಂ ನಮೋ ಭಗವತೇ ರುದ್ರಾಯ / ಓಂ ಹಂ ಹನುಮತೇ ನಮಃ’ ಜಪಿಸುವುದು ಉತ್ತಮ.
ಲಭಿಸುವ ಫಲಗಳು
ಗ್ರಹದೋಷ (ಮುಖ್ಯವಾಗಿ ಶನಿದೋಷ, ಸಾಡೇಸಾತಿ) ಶಮನ.ಮಾನಸಿಕ ಭಯ, ನಕಾರಾತ್ಮಕ ಶಕ್ತಿ ಹಾಗೂ ಆತಂಕ ದೂರವಾಗಿ ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿ, ದೀರ್ಘಕಾಲದ ಅನಾರೋಗ್ಯ ಮತ್ತು ಸಂಕಷ್ಟಗಳಿಂದ ಮುಕ್ತಿ.
ಹತ್ತಿರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಚಕರ ಮೂಲಕ ಸಂಕಲ್ಪ ಮಾಡಿ ಈ ರುದ್ರಾಭಿಷೇಕ ಸೇವೆಯನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಬಹುದು.
ಆಂಜನೇಯ ಸ್ವಾಮಿಗೆ ಶನಿವಾರ ರುದ್ರಾಭಿಷೇಕ ನೆರವೇರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಸಂಕಲ್ಪದ ಕ್ರಮಬದ್ಧ ವಿಧಾನ:
ಬೇಕಾಗುವ ಪೂಜಾ ಸಾಮಗ್ರಿಗಳು
ಅಭಿಷೇಕ ದ್ರವ್ಯಗಳು (ಪಂಚಾಮೃತ ಮತ್ತು ಶುದ್ಧೋದಕ)
ಹಸುವಿನ ಹಸಿಹಾಲು, ಮೊಸರು, ಶುದ್ಧ ತುಪ್ಪ, ಜೇನುತುಪ್ಪ, ಕಲ್ಲುಸಕ್ಕರೆ / ಬೆಲ್ಲ.
ಎಳನೀರು, ಗಂಗಾಜಲ ಅಥವಾ ಶುದ್ಧ ನೀರು, ಸೇದಿದ ಶ್ರೀಗಂಧದ.
ಅಲಂಕಾರ ಮತ್ತು ಪೂಜೆಗೆ
ಸಿಂಧೂರ (ಕೇಸರಿ ಬಣ್ಣದ ಸಿಂಧೂರ),
ತುಳಸಿ ದಳಗಳು ಅಥವಾ ತುಳಸಿ ಮಾಲೆ.ವೀಳ್ಯದೆಲೆಯ ಮಾಲೆ (ವೀಳ್ಯದೆಲೆ, ಅಡಿಕೆ, ದಾರ).
ಬಿಲ್ವಪತ್ರೆ (ಶಿವನ ಅಂಶವಾದ್ದರಿಂದ ಹನುಮಂತನಿಗೆ ರುದ್ರಾಭಿಷೇಕದ ಸಮಯದಲ್ಲಿ ಬಿಲ್ವಪತ್ರೆ ಅರ್ಪಿಸುವುದು ಶ್ರೇಷ್ಠ).
ಕೆಂಪು/ಹಳದಿ ಬಣ್ಣದ ಹೂಗಳು ಅಥವಾ ಹೂವಿನ ಹಾರ.
ದೀಪಾರಾಧನೆ ಮತ್ತು ನೈವೇದ್ಯಕ್ಕೆ
ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆ (ಶನಿವಾರದ ದೀಪಕ್ಕೆ ಪ್ರಶಸ್ತ) ಮತ್ತು ಹತ್ತಿಯ ಬತ್ತಿಗಳು.
ಧೂಪ, ಅಗರಬತ್ತಿ, ಕರ್ಪೂರ.
ನೈವೇದ್ಯಕ್ಕೆ ಬಾಳೆಹಣ್ಣು, ಕಡಲೆಬೇಳೆ-ಬೆಲ್ಲ ಅಥವಾ ವಡೆ (ಉದ್ದಿನ ವಡೆ).
ಸಂಕಲ್ಪ ಮಾಡುವ ಕ್ರಮ
ಪೂಜೆ ಅಥವಾ ಅಭಿಷೇಕವನ್ನು ಪ್ರಾರಂಭಿಸುವ ಮುನ್ನ ಆಚಮನ ಮಾಡಿ, ಕೈಯಲ್ಲಿ ಅಕ್ಷತೆ, ಹೂವು ಹಾಗೂ ಸ್ವಲ್ಪ ನೀರನ್ನು ಇಟ್ಟುಕೊಂಡು ಈ ಕೆಳಗಿನಂತೆ ಸಂಕಲ್ಪ ಮಾಡಬೇಕು.
#ಆಚಮನ....
ಓಂ ಕೇಶವಾಯ ಸ್ವಾಹಾ (ಒಂದು ಚಮಚ ನೀರು ಕುಡಿಯುವುದು)
ಓಂ ನಾರಾಯಣಾಯ ಸ್ವಾಹಾ (ಎರಡನೇ ಚಮಚ ನೀರು ಕುಡಿಯುವುದು)
ಓಂ ಮಾಧವಾಯ ಸ್ವಾಹಾ (ಮೂರನೇ ಚಮಚ ನೀರು ಕುಡಿಯುವುದು)
ನಂತರ ಓಂ ಗೋವಿಂದಾಯ ನಮಃ... ಎಂದು ಕೈ ತೊಳೆದುಕೊಳ್ಳಿ.
#ಸಂಕಲ್ಪ_ವಾಕ್ಯ...
"ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಏಕಾದಶ ರುದ್ರಾವತಾರ ಶ್ರೀ ಆಂಜನೇಯ ಸ್ವಾಮಿ ಪ್ರಸಾದ ಸಿದ್ಧ್ಯರ್ಥಂ, ಮಮ (ನಿಮ್ಮ ಗೋತ್ರ) ಗೋತ್ರೋದ್ಭವಸ್ಯ, (ನಿಮ್ಮ ಹೆಸರು) ನಾಮಧೇಯಸ್ಯ, ಮಮ ಸಹಕುಟುಂಬಸ್ಯ ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ, ಐಶ್ವರ್ಯಾಭಿವೃದ್ಧರ್ಥಂ, ಶನಿಗ್ರಹ ಪೀಡಾ ನಿವಾರಣಾರ್ಥಂ, ಸರ್ವಾಭೀಷ್ಟ ಫಲಸಿದ್ಧ್ಯರ್ಥಂ ಶ್ರೀ ಆಂಜನೇಯ ಸ್ವಾಮಿನೇ ರುದ್ರಾಭಿಷೇಕ ಪೂಜಾಂ ಕರಿಷ್ಯೇ."
ಸಂಸ್ಕೃತ ಶ್ಲೋಕ ಕಷ್ಟವಾದರೆ ಕನ್ನಡದಲ್ಲಿ ...
"ನನ್ನ ಹಾಗೂ ನನ್ನ ಕುಟುಂಬದ ಸಮಸ್ತ ಸಂಕಷ್ಟಗಳು, ಶನಿ ದೋಷಗಳು ಪರಿಹಾರವಾಗಿ, ಆಯುಷ್ಯ-ಆರೋಗ್ಯ ಹಾಗೂ ಸುಖ-ಶಾಂತಿ ಪ್ರಾಪ್ತಿಯಾಗಲೆಂದು ಭಕ್ತಿಯಿಂದ ಶ್ರೀ ಆಂಜನೇಯನಿಗೆ ಈ ರುದ್ರಾಭಿಷೇಕವನ್ನು ಸಮರ್ಪಿಸುತ್ತಿದ್ದೇನೆ" ಎಂದು ಮನಸ್ಸಿನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ಕೈಯಲ್ಲಿದ್ದ ಅಕ್ಷತೆ-ನೀರನ್ನು ತಟ್ಟೆಗೆ ಬಿಡಿ).
ಅಭಿಷೇಕದ ಸಂಕ್ಷಿಪ್ತ ಹಂತಗಳು
ಶುದ್ಧೋದಕ ಸ್ನಾನ.
ಮೊದಲು ಗಂಗಾಜಲ/ಶುದ್ಧ ನೀರಿನಿಂದ ಅಭಿಷೇಕ.
ಪಂಚಾಮೃತ ಅಭಿಷೇಕ.
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆಯಿಂದ ಕ್ರಮವಾಗಿ ಅಭಿಷೇಕ ಮಾಡುವುದು (ಈ ಸಮಯದಲ್ಲಿ ‘ಶ್ರೀ ರುದ್ರ ಪ್ರಶ್ನ’ ಅಥವಾ ‘ಓಂ ನಮೋ ಭಗವತೇ ರುದ್ರಾಯ’ / ‘ಓಂ ಹಂ ಹನುಮತೇ ನಮಃ’ ಜಪಿಸಿ).
ಎಳನೀರು ಮತ್ತು ಗಂಧೋದಕ.
ಕೊನೆಯಲ್ಲಿ ಎಳನೀರು ಹಾಗೂ ಶ್ರೀಗಂಧ ಬೆರೆಸಿದ ನೀರಿನಿಂದ ಅಭಿಷೇಕ.
#ಅಲಂಕಾರ.
ಪ್ರತಿಮೆಯನ್ನು ಸ್ವಚ್ಛ ಬಟ್ಟೆಯಿಂದ ಒರೆಸಿ, ಹಣೆಗೆ ಸಿಂಧೂರವಿಟ್ಟು, ತುಳಸಿ ಹಾಗೂ ವೀಳ್ಯದೆಲೆ ಮಾಲೆ ಧಾರಣೆ ಮಾಡುವುದು.
#ಮಹಾಮಂಗಳಾರತಿ. ಎಳ್ಳೆಣ್ಣೆಯ ದೀಪ ಹಾಗೂ ಕರ್ಪೂರದಿಂದ ಆರತಿ ಬೆಳಗಿ, ನೈವೇದ್ಯ ಅರ್ಪಿಸಿ ಪ್ರಾರ್ಥಿಸುವುದು.
ಶಾಸ್ತ್ರೋಕ್ತವಾಗಿ,ಭಕ್ತಿ ಪೂರ್ವಕವಾಗಿ, ಕಡಿಮೆ ಸಂಭಾವನೆ ಪಡೆದು ಎಲ್ಲಾ ಪೂಜಾ ವಿದಿ ನೆರವೇರಿಸುವ
ಪುರೋಹಿತರಾದ #ಮಧುಭಟ್ಟರು / ಮದುಜೋಯಿಸರ ಸೆಲ್ ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ
#anandapura #koteanjaneyatemple #keladikings #madhujoice #ballibylu #rudrabhisheka
Comments
Post a Comment