ಪುನಿತ್_ಅರಸ್_ನನ್ನ_ಅತಿಥಿ
ಬಹುಮುಖ ಆಸಕ್ತಿಯ ಪೇಸ್ ಬುಕ್ ಗೆಳೆಯರಾದ ಪುನಿತ್ ಅರಸ್ ಅವರ ಬೇಟಿ ಸಾಧ್ಯವೇ ಆಗಿರಲಿಲ್ಲ ಆದರೆ ಗುರುವಾರ 17- ಸೆಪ್ಟೆಂಬರ್-2026ರಲ್ಲಿ ಅವರು ನನ್ನ ಅತಿಥಿ ಆಗಿ ನನ್ನ ಆಫೀಸಿನಲ್ಲಿ ಬೇಟಿ ಆಗಿದ್ದು ಖುಷಿಯ ವಿಷಯ ಇವರ ಈ ಪ್ರವಾಸದಲ್ಲಿ ಇವರ ಜೊತೆ ಇತಿಹಾಸ ಆಸಕ್ತರಾದ ವೈದ್ಯಕೀಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮಹಿಳಾ ವೈದ್ಯರೂ ಬಂದಿದ್ದರು ಅವರು ಕೆಳದಿ ರಾಜ ವೆಂಕಟಪ್ಟ ನಾಯಕರು ಮತ್ತು ಚಂಪಕ ರಾಣಿ ಬಗ್ಗೆ ನಾನು ಬರೆದ ಕಾದಂಬರಿ ಬೇಕೆಂದು ಪಡೆದರು.
ಪುನೀತ್ ಸ್ವಂತ ಊರು ಅರಸಿಕೆರೆ, ಇವರ ತಾಯಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆ ಅವರ ಜೊತೆ ಪುನಿತ್ ಇದ್ದಾರೆ.
MBBS ವ್ಯಾಸಂಗ ಮಾಡುವಾಗಲೇ ಕೆಲವು ವಿಚಾರಗಳಿಂದ ಪ್ರಭಾವಿತರಾಗಿ ಓದಿನಿಂದ ದೂರ ಸಾಗಿದ್ದವರು ಪುನಃ ವ್ಯಾಸಂಗ ಮುಂದುವರಿಸಿದ್ದಾರೆ.
ಅಡುಗೆ, ಛಾಯಾಗ್ರಹಣ, ಡ್ರೈವಿಂಗ್, ಸೈಕ್ಲಿಂಗ್, ಪ್ರವಾಸ, ಇತಿಹಾಸ ಸಂಶೋಧನೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಸದಾ ಕ್ರಿಯಾಶೀಲರಾಗಿದ್ದಾರೆ.
ಇವರ ಅಡುಗೆಯ ಪೇಸ್ ಬುಕ್ ಲೇಖನಗಳಿಂದ ನಾನು ಇವರ ಅಭಿಮಾನಿ ಆಗಿದ್ದೇನೆ.
ಅತ್ಯುತ್ತಮ ಸೈಕ್ಲಿಸ್ಟ್ ಆಗಿರುವ ಪುನಿತ್ ದೂರ ದೂರದ ಸ್ಥಳಗಳಿಗೆ ತಮ್ಮ ದುಬಾರಿ ಸೈಕಲ್ ನಲ್ಲಿ ಸವಾರಿ ಮಾಡುತ್ತಾರೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಜಲಪಾತಗಳನ್ನ, ಇತಿಹಾಸದ ಸ್ಥಳಗಳನ್ನ ನೋಡಿದ್ದಾರೆ.
ನಮ್ಮ ಊರಿನ ಚಂಪಕ ಸರಸ್ಸು ವೀಕ್ಷಿಸಿ ಅವಿನಹಳ್ಳಿ ಸಮೀಪದ ಗೆಣಸಿನಕುಣಿ ಎಂಬಲ್ಲಿರುವ ಗೇರುಸೊಪ್ಟೆಯ ರಾಣಿ ಚೆನ್ನಬೈರಾದೇವಿ ಅವರ ಸಮಾದಿ ಸ್ಥಳ ವೀಕ್ಷಣೆಗೆ ಹೊರಟಿದ್ದರು.
ಗಜಾನನ ಶರ್ಮರು ಬರೆದ ಚೆನ್ನಬೈರಾದೇವಿ ಕಾದಂಬರಿ ನಾನು ಖರೀದಿಸಿದ್ದೆ, ಆ ಸಮಯದಲ್ಲೇ ಸಾಗರದ #ರವೀಂದ್ರ_ಪುಸ್ತಕಾಲಯದ #ದಂತಿ ಅವರು ಕೂಡ ಗಜಾನನ ಶರ್ಮರ ಇನ್ನೆರೆಡು ಪುಸ್ತಕ ಕಳಿಸಿದ್ದರು ಅದರಲ್ಲಿ ಒಂದನ್ನ ಉತ್ಸಾಹಿ ಯುವಕ ಪುನೀತ್ ಅರಸರಿಗೆ ನನ್ನ ಅವರ ಮೊದಲ ಬೇಟೆಯ ನೆನಪಿನ ಕಾಣಿಕೆ ಆಗಿ ನೀಡಿದೆ.
#puneethurs #cyclist #hosanagara #shivamogga #arasikere #foodbloger #doctor #historian
#digitalcreator
Comments
Post a Comment