#ನಾನೇ_ನನ್ನ_ಕೇಶವಿನ್ಯಾಸಗಾರ. #ನನ್ನ_ಕೊನೆಯ_ಸಲೂನ್_ಕ್ಷೌರ_ಮಾರ್ಚ್_2020. #ಕೊರಾನದಿಂದ_ಬದಲಾದ_ಪದ್ದತಿಗೆ_ಮೂರು_ವರ್ಷ_ಆಯಿತು. ಬಾಲ್ಯದಿಂದಲೇ ಆನಂದಪುರಂನ ಆ ಕಾಲದ ಅದುನಿಕ ಸಲೂನ್ ರಾಮಣ್ಣರಿಂದ ತಲೆಗೂದಲ ಕ್ಷೌರ ಅಂದರೆ ಅಕ್ಷರಶಃ ನೋವಿನ ನರಕ, ಆ ಕಾಲದಲ್ಲಿ ಇಂಗ್ಲೆಂಡ್ ನಿಂದ ಆಮದಾಗುತ್ತಿದ್ದ ಕ್ಲಿಪ್ಪರ್ ಗಳ೦ತು ಜೀವ ತೆಗೆದಂತೆ ಆಗುತ್ತಿತ್ತು ಆದರೂ ಅದನ್ನು ಬಳಸುವುದು ಸಲೂನ್ ಮಾಲಿಕರ ಪ್ರತಿಷ್ಟೆ ಆಗಿತ್ತು. ನಂತರ ಗಾಂಧೀಜಿ ಆತ್ಮಚರಿತ್ರೆ ಸತ್ಯಾನ್ವೇಷಣೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಕ್ಕೆ ಅನುವಾದಿಸಿದ ಪುಸ್ತಕ 5 ನೇ ತರಗತಿಯಲ್ಲೇ ನಮ್ಮ ತಂದೆ ಆನ೦ದಪುರಂನ ವೇದನಾರಾಯಣ ಭಟ್ಟರ ಮನೆಯಿಂದ ತಂದುಕೊಟ್ಟಿದ್ದರು ಅದರಲ್ಲಿ ಅವರ ಸ್ವಂತ ಕ್ಷೌರದ ಬಗ್ಗೆ ಓದಿ ವಿಪಲ ಪ್ರಯತ್ನವೂ ಆಗಿತ್ತು. 2020 ರ ಮಾರ್ಚ್ 24 ರಿಂದ ಕೊರಾನಾ ಲಾಕ್ ಡೌನ್ ಸ್ವಯಂ ಕ್ಷೌರಕ್ಕೆ ಪ್ರೇರಣೆ ಆಯಿತು, ನನ್ನ ಖಾಯಂ ಕ್ಷೌರ ಮಾಡುತ್ತಿದ್ದ ಕೃಷ್ಣ ( ಅವರ ಅಜ್ಜ ನಾರಾಯಣಪ್ಪ, ಅವರ ತಂದೆ ಮುನಿಯಣ್ಣ, ಅವರ ಮಗ) ಮತ್ತು ಅವರ ನಾಲ್ಕು ತಲೆಮಾರಿನ ಸಂಬಂದ ಈ ರೀತಿ ಮುಕ್ತಾಯವಾದೀತೆಂದು ಗೊತ್ತೇ ಇರಲಿಲ್ಲ. ಈಗಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ರಿಮ್ಮರ್ ಗಳಿಂದ ಮೂರು ವರ್ಷದಲ್ಲಿ ನಾನೇ ಸ್ವಯಂ ಕ್ಷೌರ ಮಾಡಿಕೊಳ್ಳುವ ಅಭ್ಯಾಸ ಆಗಿದೆ. ...