Blog number 861, ಸಾಗರ ತಾಲ್ಲೂಕಿನ ಕುಗ್ರಾಮದ ಯುವಕ ಈಗ ದೇಶ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಪತ್ರಕರ್ತ, ಡಿ.ಪಿ. ಸತೀಶ್ ಇವತ್ತು ನನ್ನ ಕಛೇರಿಯಲ್ಲಿ ನನ್ನ ಅತಿಥಿ
#ಏಷಿಯನ್_ಕಾಲೇಜ್_ಆಫ್_ಜನ೯ಲಿಸಂನಲ್ಲಿ_ಮೊದಲ_ರಾ೦ಕ್_ಪಡೆದ #ಈಗ_TV18_ಬ್ರಾಡ್_ಕಾಸ್ಟ್_ಲಿಮಿಟೆಡ್_ದಕ್ಷಿಣಬಾರತದ_ಗ್ರೂಪ್_ಎಡಿಟೋರಿಯಲ್_ಅಡ್ವೈಸರ್_ಆಗಿರುವ #ನಮ್ಮ_ಸಾಗರ_ತಾಲ್ಲೂಕಿನವರೇ_ಆದ_ಡಿಪಿ_ಸತೀಶ್_ಬೇಟಿ_ಇವತ್ತು. ದೇಶದ ಪತ್ರಿಕೋದ್ಯಮದಲ್ಲಿ #ಡಿ_ಪಿ_ಸತೀಶ್ ರವರದ್ದು ದೊಡ್ಡ ಹೆಸರು, ತಮ್ಮ 24ನೇ ವಯಸ್ಸಲ್ಲಿ ಪಾರ್ಲಿಮೆಂಟ್ ನಲ್ಲಿ ವರದಿಗಾರರಾಗಿದ್ದವರು, ದೇಶದ ಪ್ರದಾನಮಂತ್ರಿ, ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಯಾವುದೇ ಸಂದರ್ಭದಲ್ಲೂ ಬೇಟಿ ಮಾಡುವಂತ ಪ್ರಬಾವಶೀಲ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಅಷ್ಟೆ ಅಲ್ಲ ಅವರ ಚಾನಲ್ ಗಳ ಶ್ರೀಲಂಕಾ, ಮಾರಿಷಸ್ ಗಳ ಉಸ್ತುವಾರಿಯೂ ಇವರದ್ದು. CNN NEWS-18,IBN-7,CNBC TV -18, HISTORY TV-18,Forbes,HOME SHOP-18,Moneycontrol.com,FIRSTPOST.Viacom-18 ಮತ್ತು ಕಲರ್ TV ಕೂಡ ಇವರ ವೃತ್ತಿಯ ವ್ಯಾಪ್ತಿಯ ಭಾರತದ ಅತ್ಯಂತ ದೊಡ್ಡ ಉದ್ದಿಮೆದಾರರಾದ ರಿಲಯನ್ಸ್ ಗುಂಪಿಗೆ ಸೇರಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಶರಾವತಿ ಹಿನ್ನೀರಿನ ಕೊಳಚಗಾರು ಎಂಬ ಕುಗ್ರಾಮದ ಯುವಕ ತಾಳಗುಪ್ಪದ ನಲಂದಾ ವಿದ್ಯಾ ಸಂಸ್ಥೆ ನಂತರ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಒದಿದವರು ಇವರು ಶರಾವತಿ ಮುಳುಗಡೆ ಸಂತ್ರಸ್ಥರು...