Blog number 888,ಜಾತಿ ಧರ್ಮ ಮೀರಿದ ಮನುಷ್ಯತ್ವದ ಇಂತಹ ಯುವಕರು ಪ್ರತಿ ಹಳ್ಳಿಯಲ್ಲಿರಬೇಕು, ಜಾತ್ಯಾತೀತ ನಾಯಕರಾಗಿದ್ದ ದಿವಂಗತ ಹಾಜಿ ಗನ್ನಿ ಸಾಬರ ಕಿರಿಯ ಪುತ್ರ ಜಿಯಾವುಲ್ಲಾ ನಮ್ಮ ಊರಿನ ಸರ್ವ ಜನಾಂಗದ ಸರ್ವಪ್ರಿಯ ಯುವ ಮುಂದಾಳು
#ಹಾಜಿ_ಗನ್ನಿ_ಸಾಬರ_ಸದ್ಗುಣಗಳಿರುವ_ಅವರ_ಪುತ್ರ_ಜಿಯಾವುಲ್ಲಾ #ನಮ್ಮ_ಊರ_ಜಾತ್ಯಾತೀತ_ಯುವ_ಮುಂದಾಳು. #ಹಿಂದೂ_ಮುಸ್ಲಿಂ_ಸೌಹಾರ್ದತೆಗೆ_ಮುಂದುವರಿದ_ಕುಟುಂಬ_ಸದಸ್ಯ. #ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರು. ಜಿಯಾ ಉಲ್ಲಾ ನಮ್ಮ ಆತ್ಮೀಯರಾಗಿದ್ದ ದಿವಂಗತ ಹಾಜಿ ಗನ್ನಿ ಸಾಹೇಬರ ಕಿರಿಯ ಪುತ್ರ, ಇಪ್ಪತ್ತು ವಷ೯ದ ಹಿಂದೆ ಸಾಗರ ತಾಲ್ಲೂಕಿನಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳಾದಾಗ ಅದು ಸಾಗರ ಪಟ್ಟಣದಿಂದ ಶುರುವಾಗಿ ತಾಲ್ಲೂಕಿನ ತಾಳಗುಪ್ಪ ಮತ್ತು ತ್ಯಾಗರ್ತಿ ಅಂತ ಊರುಗಳಿಗೆ ಹಬ್ಬಿತ್ತು ಆದರೆ ಆ ಕಾಲದಲ್ಲಿ ಆರು ಮಸೀದಿಗಳಿರುವ ಆನಂದಪುರಂ ಹೋಬಳಿಯಲ್ಲಿ ಇಂತಹ ಘಟನೆ ಉದ್ಭವಿಸದಿರಲು ಗನ್ನಿಸಾಹೇಬರಂತವರ ಯೋಗ್ಯ ನಾಯಕತ್ವ. ಮರುದಿನ ಅಂತಹ ಗಲಾಟೆಯ ಕಿಡಿ ಹತ್ತುವ ಸೂಚನೆ ಗೊತ್ತಾಗಿ ತಡ ರಾತ್ರಿಯಲ್ಲಿ ಎರೆಡೂ ಗುಂಪಿನ ಯುವಕರನ್ನು ಒಂದು ಗೂಡಿಸಿ ಅವರಿಗೆ ಗನ್ನಿಸಾಹೇಬರು ಹೇಳಿದ ಬುದ್ದಿ ಮಾತು ಮರುದಿನ ಇಡೀ ಹೋಬಳಿ ಶಾಂತಿ ಕಾಪಾಡಿತು, ಯುವಕರ ಹಿಂದಿದ್ದ ಕಿಡಿಗೇಡಿಗಳಿಗೆ ನಿರಾಶೆ ಆಗಿತ್ತು. ಈಗ ಗನ್ನಿ ಸಾಹೇಬರು ಇಲ್ಲ, ಅವರ ಕಿರಿಯ ಪುತ್ರ ಜೀಯಾವುಲ್ಲಾನಲ್ಲಿ ತಂದೆಯ ಈ ಗುಣಗಳು ನೋಡಿ ನನಗೆ ಸಂತೋಷ ಆಗಿದೆ. S.S. L.C ನಂತರ ಅವರ ದಮ೯ದ ಪಾಠ ಕಲಿತು ಕೆಲ ಕಾಲ ಮಸೀದಿ ಹಜರತ್ ಆಗಿ ನಂತರ ವಿದೇಶದಲ್ಲಿ ಕೆಲಸ ಮಾಡಿ ಊರಿಗೆ ಬಂದು ಕೆಲ ಕಾಲ ಹೋಟೆಲ್ ನಡೆಸಿ ಕೊರಾನ ಕಾಲದಲ್ಲಿ ಅದನ್ನು ನಿಲ್ಲ...