Skip to main content

Posts

Showing posts with the label Wild Honeybee nest honey extraction is very difficult job but these Bihari traditional tribal easily extracted my lodge big nest of wild honey bee

Blog number 989. ದೂರದ ಬಿಹಾರ ರಾಜ್ಯದ ಭಾಗಲ್ಪುರದ ಜೇನುಕುರುಬರ ರೋನಿ & ರೈಸ್ ತಂಡ ನಮ್ಮ ಲಾಡ್ಜ್ ಕಟ್ಟಡದಲ್ಲಿ ಕಟ್ಟಿದ ಹೆಜ್ಜೇನು ತಟ್ಟಿ ನಡು ಮದ್ಯಾಹ್ನ ಹೊಗೆ ಹಾಕಿ ಕ್ಷಣಾರ್ದದಲ್ಲಿ 17 ಕೇಜಿ ಜೇನು ತುಪ್ಪ ಸಂಪಾದಿಸಿದರು.

#ಹೆಜ್ಜೇನಿನ_ಜೊತೆ_ಸರಸವಾಡುವ_ಬಿಹಾರದ_ಜೇನುಕುರುಬರು #ಎಂತಹ_ದೊಡ್ಡ_ಕಟ್ಟಡ_ದೊಡ್ಡ_ನೀರಿನ_ಟ್ಯಾಂಕ್_ಆಕಾಶದೆತ್ತರದ_ಮರದಲ್ಲಿನ_ಹೆಜ್ಜೇನು_ಇವರಿಗೆ_ಲೆಕ್ಕಕ್ಕಿಲ್ಲ. #ಕಟ್ಟಡದ_ಮಾಲಿಕರಿಗೆ_ಒಂದು_ಜೇನು_ತಟ್ಟಿಯಲ್ಲಿ_ಒಂದು_ಕೇಜಿ_ಜೇನುತುಪ್ಪ_ನೀಡಿ_ಉಳಿದದ್ದು_ಅವರಿಗೆ. #ಇವರ_ಸಾಹಸಮಯ_ಜೀವನದ_ಪ್ರತ್ಯಕ್ಷ_ದರ್ಶನ.    ನಿನ್ನೆ ಮಧ್ಯಾಹ್ನ ಊಟಕ್ಕೆ ಹೊರಟಿದ್ದೆ ತಲೆಗೆ ಜುಟ್ಟು ಕಟ್ಟಿದ ಯುವಕ ಓರ್ವ ಬಂದು, ನಿಮ್ಮ ಲಾಡ್ಜ್ ಮೇಲಿನ ಅಂತಸ್ತಿನ ಹೊರ ಬಾಗದಲ್ಲಿ ದೊಡ್ಡ ಹೆಜ್ಜೇನು ತಟ್ಟಿಯ ಜೇನು ತೆಗೆಯಲು ಅನುಮತಿ ಕೇಳಿದ ಅವನ ಹೆಸರು ರೈಸ್.    ನನಗೆ ವರ್ಷದಲ್ಲಿ ಅನೇಕ ಬಾರಿ ಈ ಹೆಜ್ಜೇನು ಗೂಡು ಕಟ್ಟುವುದು, ಅದನ್ನು ನಿವಾರಿಸಲು ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ್ ತಿಳಿಸಿದಂತೆ ಅಡಿಕೆ ಸಿಪ್ಪೆ ಹೊಗೆ ಹಾಕುವುದು ಅದಕ್ಕೂ ಹೋಗದಿದ್ದರೆ ನನ್ನ ಶಿಷ್ಯ ಗೇರುಬೀಸಿನ ಚೆನ್ನಪ್ಪನ ಕರೆಸಿ ದೊಡ್ಡ ಹೊಗೆ ಹಾಕಿ ಜೇನು ಓಡಿಸುತ್ತೇನೆ ಇದರಿಂದ ಹೆಚ್ಚು ಹಣ, ಸಮಯ ಖರ್ಚಾದರೂ ಇನ್ನೊಂದು ಸಮಸ್ಯೆ ಏನೆಂದರೆ ಈ ಹೊಗೆಯಿಂದ ಬಿಳಿ ಬಣ್ಣದ ಸೀಲಿಂಗ್ ಕಪ್ಪಾಗಿ ಅಸಹ್ಯ ಆಗಿ ಕಾಣುವುದು ಅದನ್ನು ಸರಿಪಡಿಸಲು ಪೈಂಟರ್ ಗಳನ್ನು ಪದೇ ಪದೇ ಕರೆಸಿ ಅವರಿಗೆ ಕೂಲಿ ಮತ್ತು ದುಭಾರಿ ಬಣ್ಣದ ಹೆಚ್ಚುವರಿ ಖಚು೯ ಆಗುತ್ತದೆ.   ಆದ್ದರಿಂದ ನಡು ಮದ್ಯಾಹ್ನ ಆಪತ್ಬಾಂದವನಂತೆ ಬಂದ ಈ ಬಾಲಕನಿಗೆ ಜೇನು ತೆಗೆಯಲು ಅನುಮತಿ ನೀಡಿಯೇ ಬಿಟ್ಟ...