Blog number 989. ದೂರದ ಬಿಹಾರ ರಾಜ್ಯದ ಭಾಗಲ್ಪುರದ ಜೇನುಕುರುಬರ ರೋನಿ & ರೈಸ್ ತಂಡ ನಮ್ಮ ಲಾಡ್ಜ್ ಕಟ್ಟಡದಲ್ಲಿ ಕಟ್ಟಿದ ಹೆಜ್ಜೇನು ತಟ್ಟಿ ನಡು ಮದ್ಯಾಹ್ನ ಹೊಗೆ ಹಾಕಿ ಕ್ಷಣಾರ್ದದಲ್ಲಿ 17 ಕೇಜಿ ಜೇನು ತುಪ್ಪ ಸಂಪಾದಿಸಿದರು.
#ಎಂತಹ_ದೊಡ್ಡ_ಕಟ್ಟಡ_ದೊಡ್ಡ_ನೀರಿನ_ಟ್ಯಾಂಕ್_ಆಕಾಶದೆತ್ತರದ_ಮರದಲ್ಲಿನ_ಹೆಜ್ಜೇನು_ಇವರಿಗೆ_ಲೆಕ್ಕಕ್ಕಿಲ್ಲ.
#ಕಟ್ಟಡದ_ಮಾಲಿಕರಿಗೆ_ಒಂದು_ಜೇನು_ತಟ್ಟಿಯಲ್ಲಿ_ಒಂದು_ಕೇಜಿ_ಜೇನುತುಪ್ಪ_ನೀಡಿ_ಉಳಿದದ್ದು_ಅವರಿಗೆ.
#ಇವರ_ಸಾಹಸಮಯ_ಜೀವನದ_ಪ್ರತ್ಯಕ್ಷ_ದರ್ಶನ.
ನಿನ್ನೆ ಮಧ್ಯಾಹ್ನ ಊಟಕ್ಕೆ ಹೊರಟಿದ್ದೆ ತಲೆಗೆ ಜುಟ್ಟು ಕಟ್ಟಿದ ಯುವಕ ಓರ್ವ ಬಂದು, ನಿಮ್ಮ ಲಾಡ್ಜ್ ಮೇಲಿನ ಅಂತಸ್ತಿನ ಹೊರ ಬಾಗದಲ್ಲಿ ದೊಡ್ಡ ಹೆಜ್ಜೇನು ತಟ್ಟಿಯ ಜೇನು ತೆಗೆಯಲು ಅನುಮತಿ ಕೇಳಿದ ಅವನ ಹೆಸರು ರೈಸ್.
ನನಗೆ ವರ್ಷದಲ್ಲಿ ಅನೇಕ ಬಾರಿ ಈ ಹೆಜ್ಜೇನು ಗೂಡು ಕಟ್ಟುವುದು, ಅದನ್ನು ನಿವಾರಿಸಲು ಜೇನು ಕೃಷಿ ತಜ್ಞ ನಾಗೇಂದ್ರ ಸಾಗರ್ ತಿಳಿಸಿದಂತೆ ಅಡಿಕೆ ಸಿಪ್ಪೆ ಹೊಗೆ ಹಾಕುವುದು ಅದಕ್ಕೂ ಹೋಗದಿದ್ದರೆ ನನ್ನ ಶಿಷ್ಯ ಗೇರುಬೀಸಿನ ಚೆನ್ನಪ್ಪನ ಕರೆಸಿ ದೊಡ್ಡ ಹೊಗೆ ಹಾಕಿ ಜೇನು ಓಡಿಸುತ್ತೇನೆ ಇದರಿಂದ ಹೆಚ್ಚು ಹಣ, ಸಮಯ ಖರ್ಚಾದರೂ ಇನ್ನೊಂದು ಸಮಸ್ಯೆ ಏನೆಂದರೆ ಈ ಹೊಗೆಯಿಂದ ಬಿಳಿ ಬಣ್ಣದ ಸೀಲಿಂಗ್ ಕಪ್ಪಾಗಿ ಅಸಹ್ಯ ಆಗಿ ಕಾಣುವುದು ಅದನ್ನು ಸರಿಪಡಿಸಲು ಪೈಂಟರ್ ಗಳನ್ನು ಪದೇ ಪದೇ ಕರೆಸಿ ಅವರಿಗೆ ಕೂಲಿ ಮತ್ತು ದುಭಾರಿ ಬಣ್ಣದ ಹೆಚ್ಚುವರಿ ಖಚು೯ ಆಗುತ್ತದೆ.
ಆದ್ದರಿಂದ ನಡು ಮದ್ಯಾಹ್ನ ಆಪತ್ಬಾಂದವನಂತೆ ಬಂದ ಈ ಬಾಲಕನಿಗೆ ಜೇನು ತೆಗೆಯಲು ಅನುಮತಿ ನೀಡಿಯೇ ಬಿಟ್ಟಿ ಅವನು ಹೊರ ಹೋಗಿ ತನ್ನ ತಂಡದ ನಾಯಕನನ್ನು ಕರೆತಂದ ಅವರ ಹೆಸರು ರೋನಿ ಅಂತ ಆತನನ್ನು ಮಾತಿಗೆಳೆದಾಗ ಇವರೆಲ್ಲ ಬಿಹಾರದ ಬಾಗಲ್ಪುರದ ಜೇನು ಕುರುಬರು ಈಗ ಇವರೆಲ್ಲ ಮತಾಂತರವಾಗಿ ಕ್ರಿಶ್ಚಿಯನ್ ಆಗಿದ್ದರಿಂದ ಇವರ ಹೆಸರೇ ಇವರ ನೂತನ ದಮ೯ ಸೂಚಿಸುತ್ತದೆ.
ಇವರ ತಂದೆ ತಾಯಿಯಿಂದ ಈ ಹೆಜ್ಜೇನು ಕೀಳುವ ಕಲೆ ಇವರಿಗೆ ಮನೆತನದಿಂದ ಬಂದಿದೆ, ಇವರು ಹಗಲಿನಲ್ಲೇ ಹಸಿ ಎಲೆಗಳನ್ನು ಜೋಡಿಸಿ (ಯಾವುದೇ ಎಲೆಯನ್ನು ಬಳಸಬಹುದು) ಹೊಗೆ ಹಾಕುತ್ತಾರೆ, ಹೊಗೆಯಿಂದ ಹೆಜ್ಜೇನು ಮಂದವಾಗಿ ಹಾರಿ ಹೋಗುತ್ತದೆ, ಹೊಗೆಯ ಪರಿಣಾಮದಿಂದ ಹೆಜ್ಜೇನು ಕೆರಳುವ, ಕುಟುಕುವ ಶಕ್ತಿ ಕಳೆದುಕೊಳ್ಳುತ್ತದಂತೆ.ಆಗ ಕೈಯಲ್ಲಿ ಹಿಡಿದರೂ ಕಚ್ಚುವುದಿಲ್ಲವಂತೆ ಅದೇ ಹೊಗೆ ಇಲ್ಲದೆ ಜೇನು ಗೂಡಿಗೆ ಕೈ ತಾಗಿಸಿದರೆ ಮಾತ್ರ ಜೇನು ವಿಪರೀತ ಕೆರಳಿ ಮನುಷ್ಯನನ್ನ ಹುಡುಕಿ ಹುಡುಕಿ ಕಚ್ಚುತ್ತದಂತೆ.
ಹೊಗೆ ಹಾಕಿದ ತಕ್ಷಣ ಕ್ಷಣ ಮಾತ್ರದಲ್ಲಿ ಜೇನು ತಟ್ಟಿಗಳನ್ನು ಕತ್ತರಿಸಿ ಬಕೇಟು ಅಥವ ಡಬ್ಬದಲ್ಲಿ ತುಂಬಿ ತಂದು, ತೆಳು ಬಟ್ಟೆಯಿಂದ ಸೋಸಿ ಬಾಟಲಿಯಲ್ಲಿ ತುಂಬಿ ಜೇನು ತಟ್ಟಿ ಕಟ್ಟಿದ ಕಟ್ಟಡದ ಮಾಲಿಕನಾದ ನನಗೆ ಒಂದು ಕೇಜಿ ತಕ್ಕಡಿಯಲ್ಲಿ ತೂಗಿ ನೀಡಿದರು.
ನಮ್ಮಲ್ಲಿನ ಜೇನು ತಟ್ಟಿಯಲ್ಲಿ ಒಟ್ಟು 17 ಕೇಜಿ ಜೇನು ತುಪ್ಪ ಸಿಕ್ಕಿತವರಿಗೆ, ಸ್ಥಳದಲ್ಲೇ ಇವರ ಸಾಹಸ ನೋಡಲು ನೆರೆದವರು ಅದ೯ -ಒಂದು ಕೇಜಿ ಖರೀದಿಸಿದರು.
ಕೇಜಿಗೆ 350 ರಂತೆ ಜೀನುತುಪ್ಪ ಮಾರಾಟದಿಂದ ಸುಮಾರು 5000 ರೂಪಾಯಿ ಕೇವಲ ಅದ೯ಗಂಟೆಯಲ್ಲಿ ಗಳಿಸಿದರು.
ರೋನಿ ಮುಂಬೈ ಶಹರದ ಬಹುಮಹಡಿ ಕಟ್ಟಡಗಳ ಜೇನು ತೆಗೆದ ವಿಡಿಯೋ ತೋರಿಸಿದರು ಆದರೆ ದೊಡ್ಡ ಶಹರದಲ್ಲಿ ಬಹುಮಹಡಿ ಕಟ್ಟಡಗಳ ಜೇನು ತೆಗೆಯಲು ಅವಕಾಶ ನೀಡುವುದಿಲ್ಲ ಕಾರಣ ಕಟ್ಟಡ ಮಾಲಿಕರಿಗೆ ಅಥವ ಸೊಸೈಟಿಯವರಿಗೆ ಭಯ ಅಂದರು.
ಅರಣ್ಯದಲ್ಲಿ ಜೇನು ತೆಗೆಯಲು ಈಗ ಅವಕಾಶ ನೀಡುವುದಿಲ್ಲ, ಅರಣ್ಯ ಇಲಾಖೆ ಅನುಮತಿ ಇಲ್ಲ ಆದ್ದರಿಂದ ಊರ ಮಧ್ಯದ ಜನವಸತಿ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡ, ನೀರಿನ ಟ್ಯಾಂಕ್ ಗಳ ಹೆಜ್ಜೇನು ಗೂಡುಗಳೆ ಇವರಿಗೆ ಆದಾಯದ ಮೂಲ.
ಇನ್ನು ಹತ್ತು ದಿನ ಆನಂದಪುರಂನಲ್ಲೇ ಇರುತ್ತಾರಂತೆ ಇವರ ಪೋನ್ ನಂಬರ್ 9689978503 ಗೆ ಕರೆ ಮಾಡಿ ನಿಮ್ಮ ಕಟ್ಟಡದ ಎತ್ತರದಲ್ಲಿ ಕಟ್ಟಿದ ಹೆಜ್ಜೇನು ಗೂಡು ತೋರಿಸಿದರೆ,ಇವರು ಹೆಜ್ಜೇನು ಗೂಡು ಹೊಗೆಯಿಂದ ಜೇನು ಹುಳಗಳನ್ನು ಓಡಿಸಿ ಗೂಡು ತೆಗೆದು ಜೇನುತುಪ್ಪ ತೆಗೆದು ಅದರಲ್ಲಿ ಒಂದು ಕೇಜಿ ನಿಮಗೆ ಕೊಟ್ಟು ಉಳಿದದ್ದು ಒಯ್ಯುತ್ತಾರೆ.
Comments
Post a Comment