Skip to main content

Blog article 960. ಆನಂದಪುರಂನಲ್ಲಿ ನಮ್ಮ ಹೊಂಬುಜ ಲಾಡ್ಜ್ ನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಯುರ್ವೇದ ಶಿರೋದಾರ ಕೇಂದ್ರ ವೈದ್ಯೋ ನಾರಾಯಣೋ ಹರಿಃ ಆಯುರ್ವೇದ ಕ್ಲೀನಿಕ್

#ಶಿರೋದಾರ_ಕೇಂದ್ರದ_ಶುಭಾರಂಭದಲ್ಲಿ_ವಿಶೇಷ_ಅತಿಥಿಗಳು.

#ಹೊಸ_ರೀತಿಯ_ಸಭಾ_ಕಾರ್ಯಕ್ರಮ_ಆಗಮಿಸಿದವರ_ಮೆಚ್ಚುಗೆ_ಪಡೆಯಿತು.

#ಶಿರೋದಾರ_ಮಾಡಿದ_ವೈದ್ಯರು_ಚಿಕಿತ್ಸೆ_ಪಡೆದವರಿಗೆ_ಆಗಮಿಸಿ_ಶುಭಹಾರೈಸಿದವರಿಗೆ_ಅನಂತಾನಂತ_ವಂದನೆಗಳು.

#ಸಾಮಾಜಿಕ_ಜಾಲತಾಣದಿಂದ_ಸುದ್ದಿ_ತಿಳಿದು_ಬಂದು_ಶುಭಹಾರೈಸಿದ_ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದ_ದೀವಾಕರ್_ವಕೀಲರು.
  ಪ್ರವಾಸೋದ್ಯಮ ಉದ್ಯಮದಲ್ಲಿ ಲಾಡ್ಜ್ - ಕಾಟೇಜ್-ವೆಜ್ ರೆಸ್ಟೋರಾಂಟ - ನಾನ್ ವೆಜ್ ರೆಸ್ಟೋರಾಂಟ್-ವೆಡ್ಡಿಂಗ್ ಹಾಲ್ ಗಳ ನಡೆಸಿದ ನಮ್ಮ ಅನುಭವ ವಿಸ್ತಾರವಾಗುತ್ತಾ ನಿನ್ನೆ #ವ್ಯೆದ್ಯೋ_ನಾರಾಯಣೊ_ಹರಿಃ_ಆಯುರ್ವೇದ_ಚಿಕಿತ್ಸಾ_ಕೇಂದ್ರದ ಪ್ರಾರಂಭದೊಂದಿಗೆ ಪ್ರವಾಸೋದ್ಯಮದ ಉದ್ಯಮ  ಸೇರಿಕೊಂಡಿತು.
  ಧನ್ವಂತರಿ ಹೋಮದೊಂದಿಗೆ ಸಿದ್ದಾಪುರದಲ್ಲಿನ ರಾಮಕೃಷ್ಣ ಹೆಗ್ಗಡೆಯವರ ಕುಟುಂಬದ ಆಯುವೇ೯ದ ವೈದ್ಯ ಕಾಲೇಜಿನಲ್ಲಿ ಪ್ರಾ೦ಶುಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರಸಿದ್ದ ಡಾಕ್ಟರ್ ಪ್ರಸಾದ್ ಜನ್ನೆಯವರು ಆಯುರ್ವೇದ -ಶಿರೋದಾರಗಳ ಬಗ್ಗೆ ಮಾಹಿತಿ ನೀಡಿದರು.
  ಖ್ಯಾತ ಸಾಹಿತಿಗಳು ಸಂಶೋದಕರು ಆದ ಶ್ರೀಕಂಠ ಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕನಾ೯ಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರಾಜ್ ಇವತ್ತಿನ ದಿನಗಳಲ್ಲಿ ಆಯುರ್ವೇದದ ಅವಶ್ಯಕತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
  ನನ್ನ ಎಲ್ಲಾ ಕಾರ್ಯಕ್ರಮಗಳು ಆತ್ಮೀಯವಾಗಿಸುವ ನನ್ನ ಪ್ರಯತ್ನದಲ್ಲಿ ಈ ಕಾರ್ಯಕ್ರಮ ವಿಬಿನ್ನವಾಗಿ ಹೊಸ ಪ್ರಯೋಗ ಮಾಡಿದೆ.
  ಅದೇನೆಂದರೆ ಅತಿಥಿಗಳಾಗಿ ಬಂದಿದ್ದ ನಮ್ಮ ಸಿದ್ಧ ಸಮಾದಿ ಯೋಗದ ಪ್ರಖ್ಯಾತ ಗಾಯಕರೂ ಆದ ಗಣೇಶ್ ಗುರೂಜಿ ಪ್ರಾರ್ಥನೆ ನಂತರ ನಾನು ಬಂದವರೆಲ್ಲರನ್ನೂ ಸಂಕ್ಷಿಪ್ತವಾಗಿ ಪರಿಚಯ -ಸ್ವಾಗತ ಮಾಡುವಾಗ ನನ್ನ ಸಹೋದರ ನಾಗರಾಜ್ ಅವರಿಗೆ ಪುಷ್ಪ ಮಾಲೆ ಸಮರ್ಪಿಸಿದರು ನನ್ನ ಕಿರಿಯ ಬಾವ ನಿವೃತ್ತ ಸೈನ್ಯಾದಿಕಾರಿ ಸಂಜೀವ್ ರಾವ್ ಸಿಹಿ ತಿಂಡಿ ಪೊಟ್ಟಣ - ಶಿರೋದಾರದ ಮಾಹಿತಿಯ ಕರಪತ್ರ - ಮತ್ತು ಹೋಮ ನೆರವೇರಿಸಿದ ಸಿಸಿ೯ ತಾರಗೋಡಿನ ಪುರೋಹಿತರಾದ ರಾಮಚಂದ್ರ ಭಟ್ಟರು ಪೂಜಿಸಿ ಕೊಟ್ಟ ಪವಿತ್ರಾ ಭಗವದ್ಗೀತಾ ಗ್ರಂಥಗಳನ್ನು ನೀಡಿದರು.
   ನನ್ನ ಪರಿಚಯ - ಸ್ವಾಗತ ಹೀಗಿತ್ತು....
  ನನ್ನ ಮತ್ತು ನನ್ನಣ್ಣನ ಕುಟುಂಬಕ್ಕೆ ಸಿದ್ಧ ಸಮಾದಿ ಯೋಗದ ತರಬೇತಿದಾರರಾಗಿದ್ದ ಗಣೇಶ್ ಗುರೂಜಿ ಸುಶ್ರಾವ್ಯ ಹಾಡುಗಾರರು, ಪ್ರಭಾಕರ್ ಗುರೂಜಿಯವರ ಆತ್ಮೀಯರಾಗಿದ್ದವರು, ತುಮಕೂರಿನಿಂದ ಅನೇಕಬಾರಿ ಪಾದಯಾತ್ರೆಯಲ್ಲಿ ಶಭರಿ ಮಲೈ ಯಾತ್ರೆ ಮಾಡಿದವರು.
  ಶಿರೋದಾರ ಮಾಡಲು ಬಂದ ಡಾ. ಪ್ರಸಾದ್ ಜನ್ನೆಯವರು ಸಾಗರದ ಕರ್ಕಿಕೊಪ್ಪದವರು, ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಸಹೋದರ ಗಣೇಶ್ ಹೆಗ್ಗಡೆಯವರ ಸಿದ್ಧಾಪುರದ ಪ್ರಸಿದ್ದ ಆಯುವೇ೯ದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ತಜ್ಞ ಆಯುವೇ೯ದ ವೈದ್ಯರು.
  ಶಿರೋದಾರ ಚಿಕಿತ್ಸೆ ಪಡೆಯುವ ಪಿ. ಪುಟ್ಟಯ್ಯನವರು ಮಲ್ಲಾಡಳ್ಳಿ ರಾಘವೇಂದ್ರ ಸ್ವಾಮಿಗಳ ಒಡನಾಡಿಗಳಾಗಿದ್ದವರು ಮಲ್ಲಾಡಳ್ಳಿಯ ಕಿರಿಯ ಸ್ವಾಮಿಗಳಾಗುವ ಅರ್ಹತೆ ಇದ್ದವರು, ಆಹ್ವಾನಿಸಿದರೂ ಅದನ್ನು ನಿರಾಕರಿಸಿ ಬ್ರಹ್ಮಚಾರಿಗಳಾಗೆ ಉಳಿದವರು, ಅವರ ಶಿವಮೊಗ್ಗದ ಎರಡನೆ ತಿರುವಿನ ಪ್ರಕೃತಿ ಮುದ್ರಣಾಲಯ ಜಿಲ್ಲೆಯಿಂದ ಮುಖ್ಯಮಂತ್ರಿ - ಮಂತ್ರಿ - ಶಾಸಕರಾದವರಿಗೆಲ್ಲ ಒಂದು ರಾಜಕೀಯ ಚಿಂತನೆಯ ಕೇಂದ್ರವಾಗಿತ್ತು ಆವರೆಲ್ಲ ಶಿವಮೊಗ್ಗ ಕೇಂದ್ರಕ್ಕೆ ಬಂದರೆ ತಪ್ಪದೆ ಅಲ್ಲಿಗೆ ಬೇಟಿ ಮಾಡುತ್ತಿದ್ದರು.
   ಜನಪದ ಸಂಶೋದಕರು - ಸಾಹಿತಿಗಳು - ರಾಜ್ಯ ಸರ್ಕಾರದ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಶ್ರೀಕಂಠ ಕುಡಿಗೆಯವರು ನಮ್ಮ ಜಿಲ್ಲೆಯ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ ತರಲು ಶ್ರಮಿಸಿದವರು ಮತ್ತು ಮೈಸೂರಿನಿಂದ ಲಾರಿ ಮೇಲೆ ಈ ವಿಶ್ವವಿದ್ಯಾಲಯದ ಪರಿಕರಗಳ ಜೊತೆಗೆ ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟನ ಗಾಜನೂರಿಗೆ ಬಂದ ಮೊದಲ ಪ್ರೋಪೆಸರ್.
  ಕುವೆಂಪು ಮಾಸ್ತಿ ವೆಂಕಟೇಶ್ ಅಯ್ಯಂಗಾರರ ಪ್ರೇರಣೆಯಿಂದ ಮತ್ತು  ಹೊಸೋಡಿಯ ಶಾಸ್ತ್ರೀಗಳ ದೊಡ್ಡ ಮೊತ್ತದ ದಾನದಿಂದ ನಿಮಾ೯ಣವಾಗಿರುವ ಶಿವಮೊಗ್ಗದ ಪ್ರತಿಷ್ಠಿತ ಕನಾ೯ಟಕ ಸಂಘದ ಅದ್ಯಕ್ಷರಾದ ಎಂ.ಎನ್. ಸುಂದರ್ ರಾಜ್ ಕನ್ನಡದ ಮೊದಲ  ದಿವಾನ್ ಪೂರ್ಣಯ್ಯ ಪುಸ್ತಕ ಮತ್ತು ಅನೇಕ ಕೃತಿ - ಅಂಕಣ ಬರೆದವರು.
  ಶಿವಮೊಗ್ಗದ ಆರ್. ಕೆ. ಪ್ಯಾಬ್ರಿಕ್ ಸಂಸ್ಥೆಯ ಮಾಲಿಕರು  ಆದ ತಮಿಳುನಾಡಿನ ಮೂಲದ ಕನ್ನಡಿಗ ಸಾಹಿತಿ ಕುಮಾರ್ ಅನೇಕರಿಗೆ ಉದ್ಯೋಗ ನೀಡಿ ಉದ್ಯಮಿ ಆಗಿದ್ದಾರೆ ಅವರ ಕನ್ನಡದ ಸಾಹಿತ್ಯಾಸಕ್ತಿ ವಿಶೇಷ.
  ಗಂಗಾದರ್ ಹಂದಿಗೋಳ್ ಶಿವಮೊಗ್ಗದ ಅಬ್ಬಲಗೆರೆಯಲ್ಲಿ ಪೆಟ್ರೋಲ್ ಬಂಕ್ ಮಾಲಿಕರು, ಸಾಗರ ತಾಲ್ಲೂಕಿನ ಬೀಮನ ಕೋಣೆ, ಸೊರಬ ತಾಲ್ಲೂಕಿನಲ್ಲಿ ಪಿ ಎಲ್ ಡಿ ಬ್ಯಾಂಕ್ ವ್ಯವಸ್ಥಾಪಕರಾಗಿ, ಜಿಲ್ಲಾ ವ್ಯವಸ್ಥಾಪಕರಾಗಿ ನಂತರ ರಾಜ್ಯದ  ಕೇಂದ್ರದಲ್ಲಿ ಸೇವೆ ಸಲ್ಲಿಸಿದವರು ಆಗೆಲ್ಲ ರಾಷ್ಟ್ರೀಯ ಬ್ಯಾಂಕ್ ಕೃಷಿಕರಿಗೆ ಒಂದು ರೂಪಾಯಿ ಸಾಲವೂ ಕೊಡದ ಕಾಲದಲ್ಲಿ ಇವರು ರೈತರಿಗೆ ಸಹಾಯ ಮಾಡಿದವರು.
  ಸಾಗರದ ಚಿಪ್ಪಳಿಯಲ್ಲಿ ರೈತ ಉದ್ದಿಮೆದಾರರನ್ನು ತಯಾರಿಸುವ ಮೂಲಕ ಅವರಿಗೆ ಆರ್ಥಿಕವಾಗಿ ಸದೃಡರಾಗಿಸುವ ಸ್ವತಃ ತಾವು ಎರೆ ಹುಳ ಗೊಬ್ಬರ-ಪಶು-ಆಹಾರ- ಜೇನು ಕೃಷಿ- ಹಣ್ಣು ಸಂಸ್ಕರಣೆ ಮಾಡುವ ನಾಗೇಂದ್ರ ಸಾಗರ್ ಒಂದು ಕಾಲದಲ್ಲಿ ಬೆಂಗಳೂರಿನ ಪತ್ರಕರ್ತ ಪಿತಾಮಹರೆಂದು ಹೆಸರಾಗಿದ್ದ ಖ್ಯಾತ ಪತ್ರಕರ್ತರಾದ ವಿ.ಎನ್. ಸುಬ್ಬರಾಯರ ಶಿಷ್ಯ ಹಾಯ್ ಬೆಂಗಳೂರು ರವಿ ಬೆಳೆಗೆರೆ - ಪ್ರಸಿದ್ದ ನಟರಾಗಿರುವ ಪ್ರಕಾಶ್ ರೈ - ಪಬ್ಲಿಕ್ ಟೀವಿ ರಂಗನಾಥರ ಸಹಪಾಠಿಗಳಾಗಿದ್ದವರು ಬೆಂಗಳೂರು ಬಿಟ್ಟು ಹಳ್ಳಿ ಸೇರಿದವರು.
  ಜೇನಿ ಮಂಜುಶ್ರೀ ನರ್ಸರಿಯ ಮಾಲಿಕ ಜೇನಿ ಮ೦ಜುನಾಥ ಭಟ್ಟರು ಪಶ್ಚಿಮ ಘಟ್ಟದ ಎಲ್ಲಾ ಸಸ್ಯ ಸಂಕುಲದ ಜ್ಞಾನ ಭಂಡಾರ ಹೊಂದಿರುವ ವಿಜ್ಞಾನಿ, ಅವರು ತಮ್ಮ ನರ್ಸರಿಯಲ್ಲಿ ಎಲ್ಲೂ ಸಿಗದ ಅಪರೂಪದ ಸಸ್ಯಗಳ ಸಸಿಗಳ ಬೆಳೆಸಿ ಆಸಕ್ತರಿಗೆ ನೀಡುತ್ತಾರೆ, ಮಲೆನಾಡಿನಲ್ಲಿ 35 ರೂಪಾಯಿಗೆ ಅಡಿಕೆ ಸಸಿ ಮಾರಾಟವಾಗುತ್ತಿದ್ದರೆ ಇವರು ಕೇವಲ 12 ರೂಪಾಯಿಗೆ ಮಾರುತ್ತಾರೆ ಇವರ ಕೃಷಿ ವಿಧಾನವೂ ವಿಬಿನ್ನ ಇವರ ಗ್ರಾಮೀಣ ಬದುಕಿನ ಅನುಭವಗಳ ಅನೇಕ ಸಂದರ್ಶನಗಳ ಸರಣಿಯನ್ನು ಸಂವಾದ ಚಾನಲ್ ಪ್ರಕಟಿಸಿದೆ ಪ್ರತಿಯೊಂದು ಕೋಟಿ ಕೋಟಿ ವೀವ್ಸ್ ಆಗಿದೆ.
  ಬಟ್ಟೆ ಮಲ್ಲಪ್ಪದ ರಾಜಶೇಖರ್ ಗೌಡರು ಆನಂದಪುರಂನಲ್ಲಿ  ನನ್ನ ಸಹೋದರನ ಸಹಪಾಠಿ ಆಗ ಶಾಲಾ ಶಿಕ್ಷಕರು ಆರ್ಕಮಿಡಿಸ್ ಎಂದು ಕರೆಯುತ್ತಿದ್ದರು, ಈಗಲೂ ಒಂದಲ್ಲ ಒ೦ದು ಹಳ್ಳಿ ಸಂಶೋದನೆ ಮಾಡುತ್ತಾರೆ.
  ನಿವೃತ್ತ ಆರೋಗ್ಯ ಇಲಾಖಾ ಅಧಿಕಾರಿಗಳು, ಸಾಗರ ತಾಲ್ಲುಕಿನ ಒಂದು ಕಾಲದ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದ ಸಾಹಿತಿಗಳೂ ಆದ ಸತ್ಯನಾರಾಯಣ್ ಸದಾ ಚಟುವಟಿಗೆಯಿಂದ ಇರುವವರು ಮುಂದಿನ ದಿನದಲ್ಲಿ ನಮ್ಮ ಆಯುವೇ೯ದ ಸಂಸ್ಥೆಯ ಆಡಳಿತ ಜವಾಬ್ದಾರಿ ವಹಿಸುವವರು.
  ರಮೇಶ್ ವ್ಯವಸ್ಥಾಪಕರು ಆನಂದಪುರಂ ಕೆನರಾ ಬ್ಯಾ೦ಕ್ ಹೊಸದಾಗಿ ಆಂಧ್ರ ಪ್ರದೇಶದಿಂದ ವರ್ಗಾವಣೆಯಾಗಿ ಬಂದವರು ನಮ್ಮ ಸಂಸ್ಥೆಗೆ ಸಾಲ ಸೌಲಭ್ಯ ನೀಡಿದ ಬ್ಯಾಂಕಿನವರು.
 ತೀನಾ. ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದವರು, ಸಾಗರ ಪುರಸಭಾ ಅಧ್ಯಕ್ಷರಾಗಿದ್ದ ಜನಪರ ಹೋರಾಟಗಾರರು ನನ್ನ ವಿವಾಹ ನೊಂದಣಿಯಲ್ಲಿ ನನ್ನ ಪೋಷಕರಾಗಿ ಸಹಿ ಮಾಡಿದವರು.
  ತೀರ್ಥಹಳ್ಳಿಯ ಸುಹಾಸ್ ಮತ್ತು ಕೋಣಂದೂರಿನ ನವೀನ್ ಜೋಡಿಯ ಇನ್ಪೊಪೈನಟ್ ಸಂಸ್ಥೆ ಗ್ರಾಮೀಣ ಪ್ರದೇಶದ ಹೊಸ ಉದ್ದಿಮೆದಾರರಿಗೆ ಈಗಿನ ನವೀನ ತಂತ್ರಜ್ಞಾನದಲ್ಲಿ ಮಾರ್ಗದರ್ಶನ ನೀಡುವ ಸಂಸ್ಥೆ ಇವರು ಸಿರ್ಸಿಯ ಡಾ.ಮದುಕರ್ ಭಟ್ಟರ ಜೇನು ಉತ್ಪನ್ಗಳ ಪ್ರಚಾರ ಮತ್ತು ಮಾರುಕಟ್ಟೆಗೆ ತಂತ್ರಜ್ಞಾನದ ಮೂಲಕ ಸಹಕರಿಸಿದ್ದರು ಕಳೆದ ತಿಂಗಳು ಪ್ರದಾನ ಮಂತ್ರಿಗಳಾದ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಮದುಕರ್ ಭಟ್ಟರ ಉಲ್ಲೇಖಿಸಿದ್ದಾರೆ.
  ಶೃಂಗೇಶ್ ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದವರು, ಜನ ಹೋರಾಟ ದಿನಪತ್ರಿಕೆ ಸಂಪಾದಕರು ರವಿ ಬೆಳೆಗೆರೆಯವರ ಹಾಯ್ ಬೆಂಗಳೂರು ಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದೇ ಹೆಸರಾದವರು, ಅವರ ಮುದ್ರಣ ಸಂಸ್ಥೆಯಲ್ಲೇ ನನ್ನ ಎರೆಡು ಪುಸ್ತಕ ಮುದ್ರಣ ಆಗಿದ್ದು, ಕಳೆದ ಹತ್ತು ವಷ೯ದಿಂದ ನಮ್ಮ ಸಂಸ್ಥೆಯ ಎಲ್ಲಾ ಮುದ್ರಣ ಅವರಲ್ಲಿಯೇ ಆಗುತ್ತಿದೆ.
  ಕಲ್ಮಕ್ಕಿ ಬೂದ್ಯಪ್ಪ ಗೌಡರು ನನ್ನ ಆಸ್ಥಾನದ ಜೋತಿಷಿಗಳು ಅವರು ಸದಾ ನಮ್ಮ ಜೊತೆ ಇರುವವರು, ಸಾವಿರಾರು ಕನ್ನಡ ಪುಸ್ತಕ ಖರೀದಿಸಿ ಓದುವ ಹವ್ಯಾಸ ಅವರದ್ದು ಅವರು ಹೇಳಿರುವ ಅನೇಕ ನನ್ನ ಭವಿಷ್ಯ ಸದಾ ಖಚಿತವಾಗಿರುವ ಅನುಭವ ನನ್ನದು... ಹೀಗೆ ಪರಿಚಯ ಸಾಗಿತ್ತು.
  ಇದರ ಜೊತೆ ಸ್ಥಳಿಯ ಪತ್ರಕರ್ತರೂ ಮತ್ತು ಶುಭ ಹಾರೈಸಲು ಬಂದ ಹಿತೈಷಿಗಳನ್ನು ಪರಿಚಯಿಸಿದೆ.
  ಇದರಿಂದ ಅಂತಿಮವಾಗಿ ಬಂದ ಪಲಿತಾಂಶ ಏನೆಂದರೆ ಇಡೀ ಸಭೆ ಆತ್ಮೀಯವಾಯಿತು,ಎಲ್ಲರೂ ಪರಿಚಿತರಾದರೂ, ಸಭೆಯಲ್ಲಿ ಸ್ವಾಭಾವಿಕವಾಗಿ ಇರುವ ಅಂತರದ ವ್ಯಾಕ್ಯೂಮ್ ನಿವಾರಣೆ ಆಗಿ ಅವರವರೆ  ಪರಸ್ಪರ ಪೋನ್ ನಂಬರ್ ವಿನಿಮಯ ಆಯಿತು, ಪರಸ್ಪರ ಅವರವರ ಸ್ಥಳಕ್ಕೆ ಆಹ್ವಾನವೂ ಆಯಿತು.
   ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರೂ ವಚೂ೯ಯಲ್ ಗೆಳೆಯರೆ ಈಗ ನಿಜ ಗೆಳೆಯರಾದರು.
   ನಮ್ಮ ಮಲ್ಲಿಕಾ ವೆಜ್ ನ ಹಲಸಿನ ಎಲೆ ಕೊಟ್ಟೆ ಕಡಬು, ಹೆಸರು ಕಾಳಿನ ಪಲ್ಯ, ಕೆಂಪು ಚಟ್ನಿ, ಶಿವಮೊಗ್ಗದ ಅಭಿಷೇಕ್ ಸ್ಪೀಟ್ ನ ಚಂಪಾಕಲಿ ಎಂಬ ಸಿಗ್ನೇಚರ್ ಸ್ವೀಟ್, ಪಿಲ್ಟರ್ ಕಾಪಿಯ ಉಪಹಾರ ಮತ್ತು ಮಧ್ಯಾಹ್ನ ತಂದೂರಿ ರೋಟಿ, ಪನೀರ್ ಬಟರ್ ಮಸಾಲ, ದಾಲ್ ತಡಕ, ಅನ್ನ, ಸಾಂಬರ್, ತಿಳಿ ಸಾರು ಮತ್ತು ಮೊಸರು ಬಡಿಸಲಾಯಿತು.
  ನನ್ನ ಕುಟುಂಬದವರು, ಸಿಬ್ಬಂದಿಗಳೂ ಸಹಕರಿಸಿದರು.
  ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಕಾನೂನು ಸಲಹೆಗಾರರಾಗಿದ್ದ, ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿದ್ದ ಪ್ರಸಿದ್ಧ ಉಚ್ಚನ್ಯಾಯಾಲಯದ ವಕೀಲರಾದ ದಿವಾಕರ್ ಅವರು ಬಂದು ಶುಭ ಹಾರೈಸಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರುರವರು ಬರೆದ ಪುಸ್ತಕ ನೀಡಿದರು.
  ಇನ್ನೊಬ್ಬ ಖ್ಯಾತ ನಟರು ನನ್ನ ಆತ್ಮೀಯ ಗೆಳೆಯರೂ ಆದ ದೊಡ್ಡಣ್ಣ ಪೋನ್ ಮಾಡಿ ಶುಭ ಹಾರೈಸಿ ಸದ್ಯದಲ್ಲೇ ಬಂದು ಶಿರೋದಾರ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದರು.
  ನಿದ್ದೆಯ ಸಮಸ್ಯೆಯಲ್ಲಿ ಬಳಲುತ್ತಿದ್ದ ಪುಟ್ಟಯ್ಯನವರು ಈ ಚಿಕಿತ್ಸೆ ನಂತರ ಸ್ವಲ್ಪ ನಿದ್ದೆಯ ಜೋಮು ಬಂದ ಅವರ ಅನುಭವ ಹೇಳಿದರು.
  ಹೀಗೆ ಇಡೀ ದಿನ ಕಳೆದದ್ದೇ ಗೊತ್ತಾಗಲಿಲ್ಲ 🙏

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ