Blog number 965.ಎಲ್ಲಾ ಧರ್ಮಿಯರ ವಿವಾಹ ಮಹೋತ್ಸವಕ್ಕೆ ಅತ್ಯಂತ ಕಡಿಮೆ ಬಾಡಿಗೆ ಧರದಲ್ಲಿ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಸಸ್ಯಹಾರ ಮತ್ತು ಮಾಂಸಹಾರಕ್ಕಾಗಿ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಲಭ್ಯವಿದೆ.
#ಇನ್ನು_ಮುಂದೆ_ಎಲ್ಲಾ_ದರ್ಮಿಯರಿಗೆ_ಅವಕಾಶ.
#ಅತ್ಯ೦ತ_ಕಡಿಮೆ_ಬಾಡಿಗೆಯಲ್ಲಿ_ಲಭ್ಯ.
ನನ್ನ ತಂದೆ ತಾಯಿ ಅವರ ಹುಟ್ಟು-ಸಾವಿನ ಮದ್ಯದ ಕಷ್ಟದ ಜೀವನಗಳು ಕೇಳಿದ್ದ ಮತ್ತು ನೋಡಿದ್ದ ನನಗೆ ಅವರಿಬ್ಬರ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟುವ ಕನಸು 23-ಡಿಸೆಂಬರ್_2007 ರಲ್ಲಿ ನನಸಾಯಿತು.
#ಶ್ರೀ_ಕೃಷ್ಣ_ಸರಸ_ಕನ್ವೆನ್ಷನ್_ಹಾಲ್ (ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ) ಇಬ್ಬರ ಹೆಸರನ್ನು ಸೇರಿಸಿ ನಾಮಕರಣ ಮಾಡಿದವರು ಬೆಂಗಳೂರಿನ ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಜಿ ಅವರು ಇದು ಪ್ರಾರಂಭವಾಗಿ 15 ವಷ೯ ಆಗುತ್ತಿದೆ ಇಲ್ಲಿ ತನಕ ಸಸ್ಯಹಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು ಈ ವರ್ಷದಿಂದ ನಮ್ಮ ಕಲ್ಯಾಣ ಮಂಟಪದಲ್ಲಿ ಮಾ೦ಸಹಾರದ ಅಡುಗೆ ಮಾಡಿ ಬಡಿಸಲು ಪ್ರತ್ಯೇಕ ಅಡುಗೆ ಮನೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕೆಲಸ ಆಗುತ್ತಿದೆ.
ನನ್ನ ಹಿರಿಯ ಮಿತ್ರರಾಗಿದ್ದ ದಿವಂಗತ ಹಾಜಿ ಗನ್ನಿಸಾಹೇಬರ ಪುತ್ರ ಸಹೃದಯಿ ಗೆಳೆಯ #ಜಿಯಾವುಲ್ಲಾ ಇದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ.
ಬಾಡಿಗೆ ಕೂಡ ಕಡಿಮೆಯಲ್ಲಿ ನೀಡಬೇಕೆಂಬ ಅವರ ಮನವಿ ನಾನು ನಿರಾಕರಿಸಲಿಲ್ಲ ಆದ್ದರಿಂದ ಹಾಲ್ ಬಾಡಿಗೆ- ಸಭಾಂಗಣದ ಕುರ್ಚಿಗಳು - ಊಟದ ಟೇಬಲ್ - ಊಟದ ಸ್ಟೂಲ್ ಗಳು - ಅಡಿಗೆ ಪಾತ್ರೆಗಳು - ಗ್ರೈಂಡರ್ ಗಳು - ಗ್ಯಾಸ್ ಒಲೆಗಳು -ಸ್ವಚ್ಚತಾ ಸಿಬ್ಬಂದಿ ಸಂಬಳ ಎಲ್ಲಾ ಸೇರಿ ಕೇವಲ #ಇಪ್ಪತ್ತೈದುಸಾವಿರ ಮಾತ್ರ ಅವರ ನಿರೀಕ್ಷೆಯಂತೆ ನಿಗದಿ ಮಾಡಿದ್ದೇವೆ.
Comments
Post a Comment