BLOG ARTICLES 956. ಆನಂದಪುರಂ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ಪ್ರಾಚೀನ ಭಾರತೀಯ ಆಯುರ್ವೇದ ಚಿಕಿತ್ಸೆ ಶಿರೋದಾರ ಚಿಕಿತ್ಸೆ ದಿನಾಂಕ 10- ಸೆಪ್ಟೆಂಬರ್ -2022 ಶನಿವಾರದಿಂದ ದನ್ವಂತರಿ ಹೋಮದೊಂದಿಗೆ ಪ್ರಾರಂಭವಾಗಲಿದೆ.
#ದಿನಾಂಕ_10_ಸೆಪ್ಟೆಂಬರ್_2022_ಶನಿವಾರ__ನಮ್ಮ_ಶಿರೋದಾರ_ಕೇಂದ್ರ_ಉದ್ಘಾಟನೆ.
#ಭಾರತೀಯ_ಪ್ರಾಚೀನ_ಆಯುರ್ವೇದ_ಚಿಕಿತ್ಸೆ.
ಶಿರೋದಾರ ಅಂದರೆ ಮನುಷ್ಯನ ಹಣೆಗೆ (ಮೂರನೆ ಕಣ್ಣು) ಕ್ಷೀರಾಬಲ ತೈಲದ ದಾರಣೆ (ನಿರ್ದಿಷ್ಟ ಪ್ರಮಾಣದಲ್ಲಿ ತೈಲ ಬಿಡುತ್ತಾರೆ) ಮಾಡುವುದು.
ಇದು ಭಾರತೀಯ ಪ್ರಾಚೀನ ಆಯುರ್ವೇದ ಗ್ರಂಥ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ನಿರ್ದಿಷ್ಟ ಅಳತೆ - ಆಕೃತಿಯ ಮತ್ತು ನಿರ್ದಿಷ್ಟ ಜಾತಿಯ ಮರದ ಟೇಬಲ್ (ಅದಕ್ಕೆ ದೋಣಿ ಎಂದು ಹೆಸರು) ಅನೇಕ ಪರಿಕರಗಳು ಬೇಕು.
ಆಯುರ್ವೇದ ವೈದ್ಯರ ಶಿಪಾರಸ್ಸಿನಂತೆ ನಿರ್ದಿಷ್ಟ ಕ್ರಮದಲ್ಲಿ ಆಯುರ್ವೇದ ವೈದ್ಯರು ಶಿರೋದಾರ ಮಾಡುತ್ತಾರೆ.
ಶಿರೋದಾರ ಏಕೆ ಮಾಡುತ್ತಾರೆಂದರೆ ಇದು ಮೆದುಳಿನ ನರ ಮಂಡಳದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ, ಮನಸ್ಸಿನ ಸ್ಥಿತಿ ನಿಯಂತ್ರಿಸುತ್ತದೆ ಆದ್ದರಿಂದ ಶಿರೋದಾರ ಮನಸ್ಸು ಶಾಂತಗೊಳಿಸಿ ವಿಶ್ರಾಂತ ಸ್ಥಿತಿಗೆ ತಲುಪಿಸಲು ಭಾರತೀಯ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ.
ಶಿರೋದಾರ ಮತ್ತು ಇದಕ್ಕೆ ಬಳಸುವ ತೈಲವು ತಲೆ ಕೂದಲು ಮತ್ತು ನೆತ್ತಿಯನ್ನು ಪೋಷಿಸುತ್ತದೆ, ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ, ಆತಂಕ - ಭಯ ಕಡಿಮೆ ಮಾಡುತ್ತದೆ, ಸ್ಮರಣೆಯ ಸಮಸ್ಯೆಗೆ ಕೂಡ ಇದು ಅತ್ಯುತ್ತಮ ಚಿಕಿತ್ಸೆ.
ಇವತ್ತಿನ ಪೈಪೋಟಿಯ ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರತಿಯೊಬ್ಬರು ನಿದ್ರಾಹೀನತೆ - ಟೆನ್ಷನ್- ಆತಂಕಗಳಲ್ಲಿರುವುದು ಸಹಜ, ಇದೇ ರೀತಿ ಗೃಹಿಣಿಯರು ಅನೇಕ ಹಾರ್ಮೋನ್ ವ್ಯತ್ಯಾಸಗಳಿಂದ ಮತ್ತು ವಿದ್ಯಾರ್ಥಿಗಳು ಪರೀಕ್ಷೆಗಳ ಆತಂಕ ಗಳಿಂದ ಇಂತಹದ್ದೇ ಸಮಸ್ಯೆಯಲ್ಲಿ ಬಳಲುತ್ತಾರೆ.
ದುರ್ಬಲ ಮನಸ್ಥಿತಿಯಲ್ಲಿ ಕೆಲವರು ಆತ್ಮಹತ್ಯೆಯಂತ ಪ್ರಯತ್ನಕ್ಕೂ ದುಮುಕುತ್ತಾರೆ ಅವರಿಗೆಲ್ಲ ಈ ಚಿಕಿತ್ಸೆಯಿಂದ ಪರಿಣಾಮಕಾರಿ ಪರಿಹಾರ ಇದೆ.
ಇವತ್ತಿನ ಪ್ರವಾಸೋದ್ಯಮ ಉದ್ಯಮದಲ್ಲಿ ಭಾರತೀಯ ಆಯುರ್ವೇದದ ಶಿರೋದಾರ ಕೇಂದ್ರಗಳು ಒಂದು ಅವಿಬಾಜ್ಯ ಅಂಗವೇ ಆಗಿದೆ ಆದ್ದರಿಂದ ನನ್ನ ಲಾಡ್ಜ್ & ರೆಸ್ಟೋರೆಂಟ್ ಪ್ರಾಜೆಕ್ಟ್ ಲ್ಲಿ ಈ ಶಿರೋದಾರ ಚಿಕಿತ್ಸೆ ಸೇರಿದೆ.
ದಿನಾಂಕ 10- ಸೆಪ್ಟೆಂಬರ್ -2022ರ ಶನಿವಾರ ಬೆಳಿಗ್ಗೆ #ದನ್ವಂತರಿ_ಹೋಮದೊಂದಿಗೆ ಶಿರೋದಾರ ಕೇಂದ್ರ ಪ್ರಾರಂಭ ಆಗಲಿದೆ, ಮೊದಲ ಶಿರೋದಾರ ಶಿವಮೊಗ್ಗದ ನಮ್ಮ ಆತ್ಮೀಯರಾದ ಹಿರಿಯರಾದ ಸಮಾಜವಾದಿ ಪ್ರಕೃತಿ ಮುದ್ರಣಾಲಯದ ಪಿ. ಪುಟ್ಟಯ್ಯನವರಿಗೆ ಪ್ರಸಿದ್ದ ಸಿದ್ಧಾಪುರದ ಆಯುವೇ೯ದ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರಖ್ಯಾತ ಆಯುವೇ೯ದ ತಜ್ಞ ವೈದ್ಯರಾದ ಡಾಕ್ಟರ್ ಪ್ರಸಾದ್ ಜನ್ನೆ ಶಿರೋದಾರ ಚಿಕಿತ್ಸೆ ನೀಡಲಿದ್ದಾರೆ ಜೊತೆಗೆ ಇನ್ನೊಬ್ಬ ಪ್ರಖ್ಯಾತ ಆಯುವೇ೯ದ ವೈದ್ಯರಾದ ಡಾಕ್ಟರ್ ಸಂತೋಷ್ ಕೂಡ ಜೊತೆ ಸೇರಲಿದ್ದಾರೆ.
ನಮ್ಮ ಲಾಡ್ಜ್ ನ ಹವಾನಿಯಂತ್ರಿತ ರೂಂನಲ್ಲಿ ತಂಗಿ ಇಲ್ಲಿನ ಊಟ ಉಪಚಾರದ (ಎರೆಡು ಹಗಲು ಮತ್ತು ಒಂದು ರಾತ್ರಿ) ಜೊತೆ ಶಿರೋದಾರ ಚಿಕಿತ್ಸೆ ಸೇರಿದ ಪ್ಯಾಕೇಜ್ ಘೋಷಣೆ ಮಾಡಲಿದ್ದೇವೆ.
ಸ್ಥಳಿಯರು ಮತ್ತು ಸಮೀಪದವರಿಗೆ ಯಾವುದೇ ಲಾಭ-ನಷ್ಟವಿಲ್ಲದೆ ಶಿರೋದಾರ ಚಿಕಿತ್ಸೆ ನೀಡುವ ಯೋಜನೆಯೂ ನಮ್ಮದಿದೆ ಹಾಗೆಯೆ ಮು೦ದಿನ ದಿನದಲ್ಲಿ ಅಭ್ಯಂಗ - ಪಂಚಕರ್ಮ- ತೂಕ ಇಳಿಸುವ - ವಿವಿದ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನೂ ಆಯೋಜನೆ ಮಾಡಲಿದ್ದೇವೆ.
Comments
Post a Comment