Blog number 987. ಶಿವಮೊಗ್ಗ ಸಮೀಪ ಎರೆಡು ಕಾಡಿನ ಗಂಡಾನೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ.ವನ್ಯಜೀವಿ ಸಂರಕ್ಷಣಾ ಅಭಯಾರಣ್ಯದ ಅಂಚಿನಲ್ಲಿ ಬಗರ್ ಹುಕುಂ ಜಮೀನು ಮಾಡಿ ಜೋಳ ಬೆಳೆಯುವ ರೈತರು ಪಸಲು ರಕ್ಷಣೆಗಾಗಿ ಜಮೀನಿನ ಬೇಲಿಗೆ ನೇರವಾಗಿ ವಿದ್ಯುತ್ ಅಕ್ರಮ ಸಂಪರ್ಕ ನೀಡುವುದು ಇಂತಹ ಅನಾಹುತಕ್ಕೆ ಕಾರಣ ಇದು ಮರುಕಳಿಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
#ಶಿವಮೊಗ್ಗ_ಸಮೀಪದಲ್ಲಿ_ಎರೆಡು_ಕಾಡಾನೆ_ಜೋಳದ_ಬೆಳೆಗೆ_ರೈತ
#ಬೇಲಿಗೆ_ಹರಿಸಿದ_ವಿದ್ಯುತ್_ಸ್ಪರ್ಷಿಸಿ_ಸಾವು.
#ಬೇಲಿಗೆ_ವಿದ್ಯುತ್_ನೇರ_ಸಂಪರ್ಕ_ಮಾಡುವ_ಬುದ್ದಿಗೇಡಿಗಳು.
#ಸ್ಥಳಿಯವಾಗಿ_ಇಂತಹ_ಅಕ್ರಮ_ತಡೆಯ_ಬೇಕು.
ಅಭಯಾರಣ್ಯದ ಅಂಚಿನಲ್ಲಿ ಕಬ್ಬು, ಬಾಳೆ ಮತ್ತು ಜೋಳ ಬೆಳೆದರೆ ಕಾಡು ಪ್ರಾಣಿಗಳು ಅದನ್ನು ತಿನ್ನುವ ಆಸೆಗೆ ಜಮೀನಿಗೆ ನುಗ್ಗಿ ಪಸಲು ನಷ್ಟ ಮಾಡುತ್ತದೆ ಅದನ್ನು ತಪ್ಪಿಸಲು ಮಲೆನಾಡಿನ ರೈತರು ತುಂಬಾ ಕಷ್ಟ ಪಡುತ್ತಾರೆ ಆದರೆ ಈಗ ಕೆಲವರು ಪಸಲಿನ ಭೂಮಿಯ ಸುತ್ತಲೂ ತಂತಿ ಎಳೆದು ನೇರವಾಗಿ ವಿದ್ಯುತ್ ಕಂಬದಿಂದ ಕರೆಂಟು ಕೊಡುವ ಅಯೋಗ್ಯ ಕೆಲಸ ಮಾಡುತ್ತಾರೆ.
ರಾತ್ರಿ 11 ರ ನಂತರ ಈ ರೀತಿ ಅಕ್ರಮ ಸಂಪರ್ಕ ನೀಡಿ ಸೂಯೋ೯ದಯಕ್ಕೆ ಮೊದಲೇ ಸಂಪರ್ಕ ತೆಗೆಯುತ್ತಾರೆ, ರಾತ್ರಿ ಪಸಲು ತಿನ್ನಲು ಬರುವ ಹಂದಿ, ಜಿಂಕೆ ವಿದ್ಯುತ್ ನಿಂದ ಸತ್ತರೆ ಇವರಿಗೆ ಹೆಚ್ಚು ಲಾಭ ಕೆಲವೊಮ್ಮೆ ಮನುಷ್ಯರೂ ಇಂತಹ ವಿದ್ಯುತ್ ಹರಿಸಿದ ಬೇಲಿಗೆ ಬಲಿಯಾಗಿದ್ದಾರೆ.
ಆದರೂ ದುರಾಸೆಯ ಕೆಲ ರೈತರು (ಇವರನ್ನು ರೈತರೆನ್ನ ಬಾರದು) ಇದನ್ನು ಮುಂದುವರಿಸಿದ್ದಾರೆ ಅಕ್ಕ ಪಕ್ಕದವರು ಮಾಹಿತಿ ನೀಡಿದರೆ ಅವರ ಹೆಸರನ್ನು ಗುಪ್ತವಾಗಿಡದೆ ಬಹಿರಂಗ ಮಾಡುವ ಇಲಾಖಾ ಸಿಬ್ಬಂದಿಗಳಿಂದ ರೋಸಿ ಹೋಗಿರುವ ಅನೇಕರು ಮಾಹಿತಿ ನೀಡದೆ ಉಳಿಯುತ್ತಾರೆ.
ಈ ಎರೆಡು ಹತ್ತು ವರ್ಷ ಪ್ರಾಯದ ಗಂಡು ಕಾಡಾನೆ ನಿನ್ನೆ ಕಾಡಂಚಿನ ಬಗರ್ ಹುಕುಂ ಜಮೀನಿನಲ್ಲಿ ಬೆಳೆದ ಜೋಳ ತಿನ್ನುವ ಆಸೆಯಿಂದ ಬಂದು ಅಕ್ರಮ ವಿದ್ಯುತ್ ನೀಡಿದ ಬೇಲಿ ಸ್ಪರ್ಷಿಸಿ ಸತ್ತಿರುವುದು ನೋಡಿದ ಯಾರಿಗಾದರೂ ಹೃದಯ ಹಿಂಡದೆ ಇರಲು ಸಾಧ್ಯವಿಲ್ಲ.
ಅಕ್ರಮ ವಿದ್ಯುತ್ ನೀಡಿದ ರೈತನ ಬಂದನ ಕೇಸು, ಜೈಲು, ಜಾಮೀನು, ಬಿಡುಗಡೆ ಎಲ್ಲಾ ಸಹಜ ಪ್ರಕ್ರಿಯೆ ಆದರೆ ಅಸಂಖ್ಯ ರೈತರು ಈಗಲೂ ಈ ರೀತಿ ಪಸಲು ರಕ್ಷಣೆಗೆ ನೇರವಾಗಿ ವಿದ್ಯುತ್ ಸಂಪರ್ಕ ನೀಡುವುದು ನಿಲ್ಲಿಸಲು ಏನು ಮಾಡಬೇಕು? ಇಲ್ಲಿ ಕಾಡಾನೆ ಪಸಲು ತಿಂದು ರೈತನ ನಷ್ಟ ಮಾಡುತ್ತಿದೆ ಇತ್ಯಾದಿ ರಕ್ಷಣಾತ್ಮಕ ಹೇಳಿಕೆಗಳನ್ನು ಬದಿಗಿಟ್ಟು ಎಲ್ಲರೂ ಯೋಚಿಸಬೇಕು.
ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಮಾಹಿತಿದಾರರ ಗೋಪ್ಯತೆ ಕಾಪಾಡುವ ಖಾತ್ರಿ ನೀಡಿ ಇಂತಹ ಅಕ್ರಮಗಳು ಇರುವಲ್ಲಿ ಸೂಕ್ತ ಕ್ರಮ ಕೈಗೊಂಡು ಇಂತಹ ಅನಾಹುತ ಆಗದಂತೆ ತಡೆಯಬೇಕು.
ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಬೆಳೆಯ ಬೇಲಿಗೆ ವಿದ್ಯುತ್ ನೀಡುವುದು ಅಕ್ರಮ ಇದರಿಂದ ಜನ - ಜಾನುವಾರು ಮತ್ತು ಅಮೂಲ್ಯವಾದ ಕಾಡು ಪ್ರಾಣಿಗಳ ಜೀವಕ್ಕೆ ಕುತ್ತು ಬರುತ್ತದೆ ಇಂತಹ ಪ್ರಕರಣ ನಡೆದರೆ ಅದು ದೊಡ್ಡ ಅಪರಾದ ಪ್ರಕರಣ ಆಗುತ್ತದೆ ಅದಕ್ಕೆ ವಿದಿಸುವ ಶಿಕ್ಷೆ ಕೂಡ ಜಾಸ್ತಿ ಎನ್ನುವುದನ್ನು ಪ್ರಚಾರ ಮಾಡಿಸಬೇಕು.
ವನ್ಯಜೀವಿ ಸಂರಕ್ಷಣಾ ಮೀಸಲು ಅರಣ್ಯ ವ್ಯಾಪ್ತಿಯ ಅಂಚಿನ ರೈತರು ಕಾಡು ಪ್ರಾಣಿಯ ಆಕರ್ಷಿಸುವ ಕಬ್ಬು, ಜೋಳದ ಬೆಳೆಗೆ ಪರ್ಯಾಯವಾಗಿ ಬೆಳೆ ಬೆಳೆಯಬೇಕು.
ಮೃತ ವನ್ಯಜೀವಿ ಕಳೆ ಬರ ಹಾಗೇ ಬಿಡಬೇಕು ಎಂಬ ಕಾಯ್ದೆ ಇದೆ ಈ ಆನೆ ಕಳೆಬರ ಏನು ಮಾಡುತ್ತಾರೆ ಅಂತ ಶಿವಾನಂದ ಕಳವೆ ಅಖಿಲೇಶ್ ಚಿಪ್ಪಳಿ ಈ ಮೃತ ಆನೆಯ ಬಾಲದ ಕೂದಲು ಈಗಾಗಲೇ ಕಳ್ಳತನ ಮಾಡಿದ ಬಗ್ಗೆ ಬರೆದ ಪೇಸ್ ಬುಕ್ ಪೋಸ್ಟ್ ಲ್ಲಿ ಕೇಳಿದ್ದಾರೆ ಹಾಗೆ ಬಿಟ್ಟರೆ ಅನೇ ದಂತ ಏನು ಮಾಡುತ್ತಾರೋ?
#ನಿಜಕ್ಕೂ_ಇದು_ದುಃಖದ_ವಿಚಾರ_ಆದರೆ_ಇದಕ್ಕೆ_ಪರಿಹಾರ_ಏನು?
Comments
Post a Comment