Blog number 981. ರಬ್ಬರ್ ಗಿಡದ ಮದ್ಯದ ಹೋಕಿನ ಸ್ಥಳದಲ್ಲಿ ವೆಂಗುರಲಾ ಗೇರು ಗಿಡ ನಾಟಿ ಮಾಡಲು ಪೆಟ್ರೋಲ್ ಪಿಟ್ ಮೇಕಿಂಗ್ ಮೆಷಿನ್
#ನಾಗೇಂದ್ರಸಾಗರ್_ಶಿಪಾರಸ್ಸಿನ_ವಿಶ್ವನಾಥರ_ಯಂತ್ರಬಳಕೆ.
ನಮ್ಮ ರಬ್ಬರ್ ತೋಟದಲ್ಲಿ ಮಧ್ಯ ಮದ್ಯ ರಬ್ಬರ್ ಗಿಡ ಇಲ್ಲದ ಜಾಗದಲ್ಲಿ ಪುನಃ ರಬ್ಬರ್ ನಾಟಿ ಮಾಡಿದರೆ ಅದು ಬದುಕುವುದಿಲ್ಲ ಇದಕ್ಕೆ ಯಾವುದೇ ಪರಿಹಾರ ಇಲ್ಲ ರಬ್ಬರ್ ಸಸಿ ನಾಟಿ ಮಾಡಿದ 2 ವರ್ಷದಲ್ಲಿ ಬೇರೆ ಸಸಿ ನಾಟಿ ಮಾಡಿದರೆ ಮಾತ್ರ ಸಾಧ್ಯ ಅನ್ನುತ್ತಾರೆ.
ರಿಪ್ಪನ್ ಪೇಟೆಯ #ಅನಂತಮೂರ್ತಿಜವಳಿ ಪ್ರಕಾರ ಗೊಬ್ಬರದ ಗಿಡ ನೆಟ್ಟು ಅದಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಬಹುದು ಅಂತ 3 ವಷ೯ದ ಹಿಂದೆ ಈ ರೀತಿ ಗೊಬ್ಬರದ ಗಿಡ ನೆಟ್ಟರೂ ಸರಿ ಬರಲಿಲ್ಲ.
ನಮ್ಮ ಊರಲ್ಲೇ #ಇರುವಕ್ಕಿ_ಕೃಷಿ_ವಿಶ್ವವಿದ್ಯಾಲಯ ಆಗಿದೆ ಇಲ್ಲಿನ ಕೃಷಿ ವಿಜ್ಞಾನಿ #ಡಾಕ್ಟರ್_ಗಣಪತಿ ಯವರ ಮಾರ್ಗದರ್ಶನದಲ್ಲಿ ವೆಂಗುರಲಾ - 3 ಮತ್ತು -7 ತಳಿಯ ಕಸಿ ಗೇರು ಗಿಡಗಳು 35 ರೂ ನಂತೆ ಮಾರಾಟಕ್ಕೆ ಇಟ್ಟಿದ್ದಾರೆ ಅವರ ಪ್ರಕಾರ ರಬ್ಬರ್ ತೋಟದ ಮಧ್ಯದಲ್ಲಿ ಇದನ್ನು ನಾಟಿ ಮಾಡಲು ಶಿಪಾರಸ್ಸು ಮಾಡಿದ ಪ್ರಕಾರ 200 ಗಿಡ ಖರೀದಿಸಿದ್ದೆ.
ಇದನ್ನು ನಾಟಿ ಮಾಡಲು ಜನ ಹುಡುಕುವಾಗಲೇ ನಾಗೇಂದ್ರ ಸಾಗರರು ಹೊಸಗುಂದದ ವಿಶ್ವನಾಥರ ಸಸಿ ನೆಡುವ ಗುಂಡಿ ತೆಗೆಯುವ ಯಂತ್ರ ಮತ್ತು ಅವರೇ ಗಿಡ ನಾಟಿ ಮಾಡಿಕೊಡುವ ವ್ಯವಸ್ಥೆ ಬಗ್ಗೆ ಪೇಸ್ ಬುಕ್ ಲ್ಲಿ ಅವರ ಸಂಪರ್ಕ್ ನಂಬರ್ ಸಹಿತ ಬರೆದಿದ್ದರು.
ನಿನ್ನೆ ಸುಮಾರು 5 ಗಂಟೆ ಕಾಲಾವದಿಯಲ್ಲಿ 12 ಇಂಚಿನ ಅಗಲದ 2 ಅಡಿ ಆಳದ ಗುಂಡಿಗಳನ್ನು ಅವರ ಯಂತ್ರದಲ್ಲಿ ತೆಗೆದು ಪುನಃ ಹುಡಿ ಮಣ್ಣು ತುಂಬಿ ವೆಂಗುರುಲಾ ಗೇರು ಗಿಡ ನಾಟಿ ಮಾಡಿಕೊಟ್ಟಿದ್ದಾರೆ, ಗುಂಡಿ ತೆಗೆದು ಗಿಡ ನಾಟಿಗೆ ತಲಾ ಒಂದಕ್ಕೆ 20 ರೂಪಾಯಿಗೆ ಮಾತಾಡಿಕೊಂಡಿದ್ದೆ.
ಇದು ಮಾನವ ಶಕ್ತಿ ಬಳಸಿ ಮಾಡುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಆಯಿತು, ಕಡಿಮೆ ಸಮಯದಲ್ಲಿ ಆಯಿತು. ಜನರಿಂದ ಇಷ್ಟು ಆಳದ ಗುಂಡಿ ಸಾಧ್ಯವಿರಲಿಲ್ಲ.
ಹೊಸಗುಂದ ವಿಶ್ವನಾಥರ ಸಂಪರ್ಕ 9483023244. ಇವರ ತಂದೆ ಚಂದ್ರಶೇಖರ ಗೌಡರು ಆನಂದಪುರಂನಲ್ಲಿ ಶ್ರೀ ವೀರಭದ್ರ ಲಗೇಜ್ ರಿಕ್ಷಾ ಮಾಲಿಕರು ಮತ್ತು ಲಗೇಜ್ ರಿಕ್ಷಾ ಮಾಲಿಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ.
Comments
Post a Comment