#ಹೆಚ್_ಗಣಪತಿಯಪ್ಪರ_ನೆನಪು
ನಾನು ಗುರು ಅಂತ ಕರೆದಿದ್ದು ಇವರೊಬ್ಬರಿಗೆ ಅದಕ್ಕೆ ಹಲವು ಕಾರಣ ಇದೆ, ನಿನ್ನೆ ರಾತ್ರಿ ಕನಸಿನಲ್ಲಿ ಗಣಪತಿಯಪ್ಪನವರು ಅವರ ಶಿಸ್ತಿನ ವಸ್ತ್ರ ಅಲಂಕರಿಸಿ ಬಂದಿದ್ದರು.
ಬಿಳಿ ಜುಬ್ಬಾ ಕಚ್ಚೆ ಪಂಜೆ ಮೇಲೆ ಕ್ಯಾಮೆಲ್ ಕಲರ್ ನ ವೇಸ್ಟ್ ಕೋಟ್ ಬಗಲ ಚೀಲದೊಂದಿಗೆ ಬಂದಿದ್ದರು.
ಅವರು ಇಹ ಲೋಕ ತ್ಯಜಿಸಿದ ನಂತರ ಯಾವತ್ತೂ ಕನಸಿಗೆ ಬಂದಿರಲಿಲ್ಲ.
ಗೂಗಲ್ ನಲ್ಲಿ ಅವರ ಬಗ್ಗೆಯ ಮಾಹಿತಿಗಾಗಿ ಕ್ಷಿಕ್ ಮಾಡಿದರೆ ಮೊದಲಿಗೆ ಬಂತು ದಿ ಹಿಂದೂ ಪತ್ರಿಕೆಯ ಅವರ ಇಹ ಲೋಕ ತ್ಯಜಿಸಿದ ವರದಿ.
ಕಾಕತಾಳಿಯ / ಆರನೇ ಇಂದ್ರಿಯಾ/ಸುಪ್ತ ಮನಸ್ಸಿನ ಪುನರ್ ಜ್ಞಾಪಕ ಹೀಗೆ ಯಾವುದೋ 2014 ಸೆಪ್ಟೆಂಬರ್ 30 ರಂದು ಅವರು ವಿದಿವಶರಾದ ದಿನ.
ಇವತ್ತು #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ಪುಣ್ಯತಿಥಿ.
ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರಿಸಿದ್ದು, ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನ, ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನ, ಕೆಟ್ಟ ವಿಮಶೆ೯ ಬರೆದ ವಿಮರ್ಶಕರು,ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ ಕಡಿದಾಳಿನ ಕಡಿದಾಳು ಮಂಜಪ್ಪರ ಸಮಾದಿವರೆಗೆ ಒಯ್ದ ಕಾಗೋಡು ಸುವಣ೯ ಜ್ಯೋತಿ.ಹೀಗೆ ಮರೆತು ಹೋದ ಅನೇಕ ನೆನಪುಗಳು ನೆನಪಾಯಿತು.
ಉಳುವವನೇ ಹೊಲದೊಡೆಯ ಕಾನೂನಿಗೆ ಪ್ರೇರಕವಾದ ಕಾಗೋಡು ಭೂ ಹೋರಾಟದ ರೂವಾರಿ ಗಣಪತಿಯಪ್ಪರನ್ನ ಒ0ದು ದಿನವೂ ತಪ್ಪದೆ ಪ್ರತಿ ದಿನ ಪೂಜೆಯಲ್ಲಿ ಸ್ಮರಿಸುತ್ತಿರುವುದು ಆರು ವರ್ಷದ ನಂತರ ಗುರುಗಳು ಮಾನ್ಯತೆ ನೀಡಿದ್ದಾರೆಂದು ಭಾವಿಸುತ್ತೇನೆ.
Comments
Post a Comment