1965ರ ಕಾಲದಲ್ಲಿ ಇವರದ್ದು ಅದ್ದೂರಿಯ ಜೀವನ, ಜಾವ ಬೈಕಿಗೆ ಲಗತ್ತಾದ ಸೀಟು ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ ರಾಜ್ಯದಲ್ಲೇ ಹೆಸರುವಾಸಿ, ಈಗಿನ Sports ಬೈಕ್ ಖರೀದಿಸುವ ಶೋಕಿ ಇರುವ ಯುವ ಜನಾ೦ಗದಂತೆ ಆಗಿನ ಯುವ ಜನಾ೦ಗ ಜಾವಾ ಬೈಕ್ ಗೆ ಫಿದಾ ಆಗಿದ್ದ ಕಾಲ, ಎಡಕಲ್ಲು ಗುಡ್ಡದ೦ತ ಪ್ರಖ್ಯಾತ ಸಿನಿಮಾದ ಹಾಡಿನಲ್ಲಿ ನಾಯಕ ಚಂದ್ರಶೇಖರ್, ನಾಯಕಿ ಜಯಂತಿ ಜಾವಾ ಬೈಕ್ ನಲ್ಲಿ ಪ್ರಣಯಗೀತೆ ಹಾಡುತ್ತಾ ಸಾಗುವುದು ಉದಾಹರಣೆ.
ಆ ಬೈಕಿನ ಸೀಟು ತಯಾರಿಸಿದವರು ಶಿವಮೊಗ್ಗದ ಪೂಸ್ವಾಮಿ ಪ್ರಕಾಶ್ & ಬ್ರದರ್ಸ್ ಮಾಲಿಕರು ಮೊದಲಿಗೆ ನೆಹರು ರೋಡಿನ ಚಂದ್ರು ಸ್ಟುಡಿಯೋ ಪಕ್ಕದಲ್ಲಿ ಇದ್ದರು ಈಗ ನೆಹರು ರಸ್ತೆಯ ಮೂರನೆ ತಿರುವಿನ ಸನ್ಮಾನ್ ಹೋಟೆಲ್ ಎದರು ಸ್ವಂತ ಕಟ್ಟಡದಲ್ಲಿ ಸುಪುತ್ರ ಗಿರಿ ಜೊತೆ ಬೆಡ್ ಕುಷ್ ನ್ ಗಳ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದಾರೆ.
1954ರಲ್ಲಿ ಹಾಡ್೯ವೇರ್ ವ್ಯವಹಾರದಿಂದ ಈಗಿನ ಬೆಡ್ ಕುಷ್ ನ್ , ಸೋಪಾ, ಕಿಟಕಿ ಕಟ೯ನ್ಗಳನ್ನ ಗ್ರಾಹಕರ ಆಯ್ಕೆಗೆ ತಕ್ಕ೦ತೆ ತಯಾರಿಸಿ ಕೊಡುತ್ತಾರೆ.
ಇವರ ಉದ್ದಿಮೆಯಲ್ಲಿ ನಿತ್ಯವೂ ಹೊಸ ಟ್ರೆಂಡ್ ಬರುತ್ತದೆ ಅದನ್ನ ಇವರ ಮಗ ಗಿರಿ ಮಾರುಕಟ್ಟೆ ಮಾಡುತ್ತಾರೆ.
ಇವರಲ್ಲಿ 2500 ರಿಂದ 2 ಲಕ್ಷದ 50 ಸಾವಿರದ ವರೆಗಿನ ಹಾಸಿಗೆ ಇದೆ, ದೊಡ್ಡ ದೊಡ್ಡ ಲಾಡ್ಜ್, ನಸಿ೯೦ಗ್ ಹೊಂ, ಶ್ರೀಮಂತರ ಬೆಡ್ ರೂಂ ಮತ್ತು ಡ್ರಾಯಿಂಗ್ ರೂಂಗಳಿಗೆ ಇವರೇ ಬೇಕು ಅಂತಿಮ ಸ್ಪಶ೯ನೀಡಲು.
ತಂದೆ, ಮಗರ ನೇರ ನಡೆ ನುಡಿ, ಸೌಜನ್ಯದ ನಡುವಳಿಕೆ, ಪ್ರಾಮಾಣಿಕ ವತ೯ನೆ ಇವರ ಜೊತೆ ವ್ಯವಹರಿಸಲು ಸುಲಭ ಅನ್ನಿಸುತ್ತೆ.
ನಾನು 2012ರಲ್ಲಿ ಹೊಸದಾಗಿ ಲಾಡ್ಜ್ ಉದ್ಯಮ ಪ್ರಾರಂಬಿಸಿದಾಗ ಶಿವಮೊಗ್ಗದ ಪ್ರಖ್ಯಾತ ಕುಷನ್ ಮಾರಾಟಗಾರರನ್ನ ಗೆಳೆಯರು ಪರಿಚಯಿಸಿದ್ದರು ಆತ ಹಣದಾಯಿ ಆತನಿಂದ ಮೋಸ ಹೋಗಿದ್ದೆ ನಂತರ ಇವರಿ೦ದ ನನ್ನ ಆಯ್ಕೆಯ ಸರಿಪಡಿಸಿದೆ ಅಲ್ಲಿ೦ದ ಇವತ್ತಿನ ವರೆಗೆ ನಮ್ಮ ವ್ಯವಹಾರಕ್ಕೆ, ಗೃಹ ಅಲOಕಾರಕ್ಕೆ ನಾನು ಇವರನ್ನೆ ಅವಲ೦ಬಿಸಿದ್ದೇನೆ.
ನನ್ನ ನೂತನ ಲಾಡ್ಜ್ ನ 40 ರೂಂನ ಬೆಡ್ ಗಳು, ಕಟ೯ನ್ಗಳು ರಿಸೆಪ್ಷನ್ ಆಪೀಸುಗಳಿಗೆ ಇವರದ್ದೇ ಕೌಶಲ್ಯದ ಟಚ್ ಇದೆ.
ಇವರು ನೆನಪಿಸುವುದು ಶಿವಮೊಗ್ಗದ ಕಾತಿ೯ಕ್ ಏಜೆನ್ಸಿ ಮಾಲಿಕರಾದ ಸುಂದರ್ ರಾಜ್ ರ ಸಹಾಯ ಸಹಕಾರ, ಇವರ ಎದುರಿನ ಇನ್ನೊವ೯ ಪ್ರಖ್ಯಾತ ಉದ್ದಿಮೆದಾರರಾದ ಮಹಾವೀರ ಗ್ಲಾಸ್ & ಪ್ಲೇ ವುಡ್ ಸಹೋದರರು ಪೂಸ್ವಾಮಿ ಎಂದರೆ ಗ್ರೇಟ್ ಎನ್ನುತ್ತಾರೆ.
ಇವರ ಸೆಲ್ ನಂಬರ್ ಮತ್ತು ವಿಳಾಸ
ಪ್ರಕಾಶ್ ಬೆಡ್ಸ್, ಸನ್ಮಾನ್ ಹೋಟೆಲ್ ಎದುರು, 3ನೇ ತಿರುವು ನೆಹರೂ ರಸ್ತೆ ಶಿವಮೊಗ್ಗ.
ಸೆಲ್ ನಂಬರ್ 7975632024
Comments
Post a Comment