Blog number 980. ಜೋಗ್ ಜಲಪಾತ ವಿಶ್ವ ಪ್ರಸಿದ್ದ ಮಾಡಿದ ಶರಾವತಿ ನದಿ ಉಗಮ ಸ್ಥಾನ ಜಿಲ್ಲೆಯ ತೀರ್ಥಹಳ್ಳಿಯ ಅಂಬುತೀರ್ಥ ಅಭಿವೃದ್ದಿ ಜಲಮೂಲಕ್ಕೆ ಯಾವುದೇ ತೊಂದರೆ ಆಗದಂತೆ ಆಗಲಿ ಈಗಾಗಲೇ ಜೋಗ್ ಫಾಲ್ಸ್ ಸಮೀಪದ ಲಕ್ಷಾಂತರ ವರ್ಷದ ಹೆರಿಟೇಜ್ ಬ್ರಿಡ್ಜ್ ಅಭಿವೃದ್ದಿ ಹೆಸರಲ್ಲಿ ಸಭಾಪತಿ ಕಾಗೇರಿ ಕಾಂಕ್ರೀಟ್ ನಲ್ಲಿ ಮುಚ್ಚಿದ್ದಾರೆ ಅದರ ವಿವರದ ಬ್ಲಾಗ್ ಈ ಲೇಖನದಲ್ಲಿ ಲಿಂಕ್ ಹಾಕಿದೆ.
#ಸಕಾ೯ರ_ಮತ್ತು_ಸಾವ೯ಜನಿಕರ_ನಿರಾಸಕ್ತಿಯ_ಅಮೂಲ್ಯ_ನದಿಮೂಲ.
#ಈ_ಸ್ಥಳ_ಸಂದರ್ಶಿಸಿದ_ಮೊದಲ_ಮತ್ತು_ಕೊನೆಯ_ಮುಖ್ಯಮಂತ್ರಿ_ನಿಜಲಿಂಗಪ್ಪನವರು.
#ಮೊದಲೆಲ್ಲ_ಜಿಲ್ಲೆಯಾದ್ಯಂತ_ಶಾಲಾ_ಶಿಕ್ಷಕರು_ವಿದ್ಯಾರ್ಥಿಗಳನ್ನು_ಇಲ್ಲಿಗೆ_ಪಿಕ್ನಿಕ್_ತರುತ್ತಿದ್ದರು.
#ನಾನು_ನಮ್ಮೂರ_ಶಾಲೆಯಲ್ಲಿ_1972ರಲ್ಲಿ_ಎರಡನೆ_ತರಗತಿ_ಇದ್ದಾಗ_ಲೋಬೋ_ಮಾಸ್ತರ್_ತೋರಿಸಿದ್ದರು.
#ಇತ್ತೀಚಿಗೆ_2015ರಲ್ಲಿ_ಸಂಸಾರ_ಸಮೇತ_ಹೋಗಿದ್ದೆ.
# THIS IS WORLD FAMOUS JOGFALLS RIVER SHARAVATHI BORNING PLACE, AMBUTHIRTHA OF THIRTHALL I TQ, SHIMOGA DIST OF KARNATAKA BUT GOVT AND PUBLIC NEGLECTED THIS GREAT AND WONDERFUL PLACE, I VISITED SOME DAYS BACK THIS PLACE.#
https://arunprasadhombuja.blogspot.com/2022/09/blog-number-979-27-1965.html
ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ .
ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊಳೆಯಾಗಿ ನದಿಯಾಗಿ ತೀಥ೯ಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನ ಬಹು ಭೂಭಾಗ ಆಣೆಕಟ್ಟಿಂದ ಮುಳುಗಡೆ ಆಗಿ ರಾಜ್ಯಕ್ಕೆ ಪ್ರಮುಖ ಜಲ ವಿದ್ಯುತ್ ಉತ್ಪಾದಿಸಿ ನೀಡುವ ಈ ನದಿ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಶರಾವತಿ ಕಣಿವೆಯಲ್ಲಿ ಹರಿದು ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.
ಪ್ರಸಿದ್ದ ಪ್ರವಾಸಿ ಕೇಂದ್ರವಾಗುವ೦ತ ಇತಿಹಾಸ ಮತ್ತು ರಾಜ್ಯಕ್ಕೆ ಆಥಿ೯ಕ ಲಾಭ ತರುವ ಈ ನದಿಯ ಉಗಮ ಸ್ಥಾನ ಯಾವುದೇ ಅಭಿವೃದ್ಧಿ ಕಾಣದಿರುವುದು ಬೇಸರದ ವಿಷಯ, ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಲಿಂಗನಮಕ್ಕಿ ಆಣೆಕಟ್ಟು ರಾಜ್ಯಕ್ಕೆ ಅಪಿ೯ಸುವ ಸಂದಭ೯ದಲ್ಲಿ ಇಲ್ಲಿ ಒಂದು ಪ್ರವಾಸಿಗಳಿಗಾಗಿ ಕೊಠಡಿ ನಿಮಿ೯ಸಿದ್ದು ಬಿಟ್ಟರೆ ಈ ವರೆಗೆ ಇಲ್ಲಿ ಈ ನದಿಯ ಬಗ್ಗೆ, ಜೋಗ ಜಲಪಾತದ ಬಗ್ಗೆ, ಲಿಂಗನಮಕ್ಕಿ ಆಣೆಕಟ್ಟು ವಿದ್ಯುತ್ ಉತ್ಪಾದನೆ ಬಗ್ಗೆ ಒಂದೇ ಒಂದು ಮಾಹಿತಿ ಫಲಕ ಇಲ್ಲಿ ಇಲ್ಲ.
1970ರ ದಶಕದಲ್ಲಿ ಜಿಲ್ಲೆಯ ಶಾಲಾ ಶಿಕ್ಷಕರು ವಿದ್ಯಾಥಿ೯ಗಳನ್ನ ಇಲ್ಲಿಗೆ ಪಿಕ್ನಿಕ್ ಕರೆತಂದು ವಿವರಿಸುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಅಮೂಲ್ಯ ನದಿ ಮೂಲ ಸಾವ೯ಜನಿಕರ ನಿರಾಸಕ್ತಿಯಿ೦ದ ದುರಾವಸ್ಥೆಗೆ ತಲುಪುತ್ತಿದೆ.
ಇತ್ತೀಚಿಗೆ ಶರಾವತಿ ನದಿ ಉಗಮ ಸ್ಥಾನ ಅಭಿವೃದ್ಧಿಗೆ ಸರ್ಕಾರ ಕೆಲವು ಕೋಟಿ ಹಣ ವಿನಿಯೋಗಿಸುತ್ತಿದೆ ಅನ್ನುವ ವರದಿ ಪತ್ರಿಕೆಯಲ್ಲಿದೆ ಆದರೆ ಈಗಿನ ಸರ್ಕಾರದ ಅಭಿವೃದ್ದಿ ಇರುವ ಮರ ಗುಡ್ಡ ತೆಗೆದು ಕಾಂಕ್ರಿಟ್ ಸುರಿಯುವುದು ಆಗಬಾರದು ಇದಕ್ಕೊಂದು ಉದಾಹರಣೆ ಜೋಗ್ ಜಲಪಾತ ಸಮೀಪದ ಲಕ್ಷಾಂತರ ವರ್ಷದ ಪುರಾತನ ಹೆರಿಟೇಜ್ ಸೇತುವೆ ಈಗಿನ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಸಿಮೆಂಟಿನಿಂದ ಮುಚ್ಚಿ ಅಮೂಲ್ಯವಾದ ಸಂರಕ್ಷಿಸಬೇಕಾದ ನೈಸರ್ಗಿಕ ಸ್ಮಾರಕ ಅಳಿಸಲಾಗಿದೆ ಇದನ್ನು ಪರಿಸರವಾದಿಗಳು ನೋಡಬೇಕು https://arunprasadhombuja.blogspot.com/2022/03/25.html
ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.
ಶರಾವತಿ ಮೂಲ ಸ್ಥಾನ ಅಂಬುತೀರ್ಥಕ್ಕೆ ಬೇಟಿ ನೀಡಿದ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿ ನಿಜಲಿಂಗಪ್ಪನವರು ಮಾತ್ರ ಎಂಬ ಲೇಖನ ಓದಿದ್ದೆ ಬಹುಶಃ ಇಲ್ಲಿನ ನಿರಾಸಕ್ತಿಗೆ ಉತ್ಪ್ರೇಕ್ಷೆಯ ಲೇಖನ ಆಗಿರಬಹುದು.
ಅಮೂಲ್ಯವಾದ ನದಿ ಮೂಲಕ್ಕೆ ಮಾರಕವಾಗದಂತೆ ಅಭಿವೃದ್ಧಿ ಆಗಲಿ ಮತ್ತು ಜಿಲ್ಲೆಯ ಜನತೆ ಒಮ್ಮೆಯಾದರೂ ಈ ಪ್ರದೇಶಕ್ಕೆ ಬೇಟಿ ನೀಡಲಿ ಎ೦ದು ಹಾರೈಸುತ್ತೇನೆ.
Comments
Post a Comment