Blog number 984. ಆನಂದಪುರಂ ಇತಿಹಾಸ ಸಂಖ್ಯೆ 82. ಕೆಳದಿ ಶಿವಪ್ಪನಾಯಕ ಕೃಷಿ- ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ನ 777 ಎಕರೆಯಲ್ಲಿ ಪ್ರಾರಂಭವಾಗಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ
#ಆನಂದಪುರಂ_ಹೋಬಳಿಯ_ಇರುವಕ್ಕಿಯಲ್ಲಿ
#ಕೆಳದಿ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ_ಪ್ರಾರಂಭ_ಆಗಿದೆ.
#ರಾಷ್ಟ್ರೀಯ_ಹೆದ್ದಾರಿ_69_ಯಡೇಹಳ್ಳಿ_ಅಂಬೇಡ್ಕರ್_ವೃತ್ತದಿಂದ_ಹೊಸನಗರ_ರಸ್ತೆಯಲ್ಲಿ_3_ಕಿಮಿ_ಅಂತರದಲ್ಲಿದೆ
#ರಾಷ್ಟ್ರದಲ್ಲಿ_777_ಎಕರೆ_ಅರಣ್ಯದಲ್ಲಿರುವ_ಏಕೈಕ_ಕೃಷಿ_ತೋಟಗಾರಿಕಾ_ವಿಜ್ಞಾನ_ವಿಶ್ವವಿದ್ಯಾಲಯ.
28- ಸೆಪ್ಟೆಂಬರ್ -2022 ರಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಅವರಣದಲ್ಲಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ, ಘನವೆತ್ತ ರಾಜ್ಯಪಾಲರಾದ ಗೆಹ್ಲೋಟ್ ಆಗಮಿಸಲಿದ್ದಾರೆ.
ಸದರಿ ವಿಶ್ವ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವ ಇದು ಮೊದಲಿನ ಆರು ಘಟಿಕೋತ್ಸವ ಇರುವಕ್ಕಿಯ ನೂತನ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣವಾಗದ್ದರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲೇ ನಡೆಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯಲ್ಲಿನ ಇರುವಕ್ಕಿ ಮತ್ತು ಹಾಯ್ ಹೊಳೆ ಹತ್ತಿರ ಭೂಮಿ ಗುರುತಿಸಲಾಗಿತ್ತು ಮತ್ತು ಹಾಯ್ ಹೊಳೆಯ ಭೂಮಿಯಲ್ಲೇ ಕೃಷಿ ವಿಶ್ವವಿದ್ಯಾಲಯ ಮಾಡಬೇಕೆಂಬ ಒತ್ತಡವಿತ್ತು ಕಾರಣ ಅಲ್ಲಿ ಬೇನಾಮಿ ಹೆಸರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭೂಮಿ ಖರೀದಿಸಿದ್ದರು ಅವರ ಭೂಮಿಗೆ ಬಂಗಾರದ ಬೆಲೆ ಬರಬೇಕೆಂದರೆ ಕೃಷಿ ವಿಶ್ವವಿದ್ಯಾಲಯ ಬರಬೇಕು ಎಂಬುದು.
ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿ ಗ್ರಾಮದಲ್ಲಿ ದಟ್ಟ ಅರಣ್ಯ ಇರುವ 777 ಎಕರೆ ರೆವಿನ್ಯೂ ಜಮೀನು ಕೃಷಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗಿತ್ತು ಆದರೆ ರಿಯಲ್ ಎಸ್ಟೇಟ್ ಮಾಪಿಯಾ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಬೇಡಿ ಎಂಬ ಪ್ರತಿಭಟನೆ ಮಾಡಿತ್ತು.
ಇದರ ಹೂರಣ ಅರಿತಿದ್ದ ಯಡ್ಯೂರಪ್ಪ ಮತ್ತು ಕಾಗೋಡು ತಿಮ್ಮಪ್ಪ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲೇ ಕೃಷಿ ವಿಶ್ವವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಿಸಿದರು.
ಶಂಕುಸ್ಥಾಪನೆ ನೆರವೇರಿಸಿದವರು ಕೃಷಿ ಸಚಿವ ಕೃಷ್ಣ ಬೈರೇಗೌಡರು, ಇವರ ತಂದೆ ಬೈರೇಗೌಡರು ಕೃಷಿ ಮಂತ್ರಿಗಳಾಗಿದ್ದಾಗ 1996 - 97ರಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಭೂಸಾರ ಸಂರಕ್ಷಣಾ ಇಲಾಖೆಯ ಅವ್ಯವಹಾರ ಪರಿಶೀಲನೆಗೆ ಆನಂದಪುರಂ ಹೋಬಳಿಗೆ ಬಂದು 7 ಜನ ಕೃಷಿ ಇಲಾಖಾ ಅಧಿಕಾರಿಗಳನ್ನು ಜೈಲಿಗೆ ಕಳಿಸಿದ್ದರು.
ಇರುವಕ್ಕಿಯ 777 ಎಕರೆ ಕೃಷಿ ವಿಶ್ವವಿದ್ಯಾಲಯ ಭೂಮಿ ಮಂಜೂರಾತಿ ಮಾಡಿಸಲು ವಿಶೇಷ ಪ್ರಯತ್ನ ಮಾಡಿದ ಆಗಿನ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಸಾಗರ ತಾಲೂಕಿನ ಮಂಚಾಲೆಯ ಡಾ.ವಿಘ್ನೇಶ್ ಮುಖ್ಯ ಕಾರಣ.
ಸಾಗರ ತಾಲೂಕಿನ ಆನಂದಪುರಂ ನಾಡ ಕಚೇರಿಯ ಉಪ ತಹಸೀಲ್ದಾರ್ ಆಗಿದ್ದ ಕಲ್ಲಪ್ಪ ಮೆಣಸಿನ ಹಾಳ್ ಇರುವಕ್ಕಿಯ ರೆವಿನ್ಯೂ ಭೂಮಿ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಹೆಚ್ಚು ಶ್ರಮಿಸಿದ್ದಾರೆ.
ಹೀಗೆ ಅನೇಕರ ಸಹಕಾರದಿಂದ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿಯಲ್ಲಿ ಪ್ರತಿಷ್ಟಿತ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಪ್ರಾರಂಭವಾಗಿದೆ.
ಯಡೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯ - ಉಪಾಧ್ಯಕ್ಷ - ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಶಂಕುಸ್ಥಾಪನೆಗೆ ಬಂದಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ಎಲ್ಲಾ ಅತಿಥಿಗಳಿಗೆ ಚಹಾ-ಮತ್ತು ಮಧ್ಯಾಹ್ನ ಮಲೆನಾಡಿನ ಶೈಲಿಯ ಊಟದ ಆತಿಥ್ಯ ನೀಡಿದ ಹಿರಿಮೆ ನನ್ನದು ಅದೇ ರೀತಿ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಕರ್ತರು, ಗಣ್ಯರು ಮತ್ತು ಪೋಲಿಸ್ ಇಲಾಖಾ ಸಿಬ್ಬಂದಿಗಳಿಗೆ ನನ್ನ ಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ಮಲೆನಾಡಿನ ಸಂಪ್ರದಾಯಿಕ ಊಟ ಆಗಿನ ಕುಲಪತಿ ಚಿಂಡಿ ವಾಸುದೇವರ ಮನವಿ ಮೇರೆಗೆ ಉಣ ಬಡಿಸಿದ ಸಂತೃಪ್ತಿ ನನ್ನದು.
Comments
Post a Comment