BLOG ARTICLES 955. ಎಲೆಕ್ಟ್ರಿಕ್ ಟೂತ್ ಬ್ರಷ್ ಬಳಸುವುದರಿಂದ ಹಲ್ಲಿನ ಸ್ಪಚ್ಚತೆ ಜೊತೆ ಹಲ್ಲಿನ ಎನಾಮಲ್ ಮತ್ತು ವಸಡುಗಳು ಸುರಕ್ಷಿತ, 550 ರೂಪಾಯಿಯ Oral-B ಬ್ರಷ್ ಗಳು ಅತ್ಯುತ್ತಮವಾಗಿದೆ
#ಹಲ್ಲು_ಒಸಡು_ಸಂಪೂರ್ಣ_ಶುಚಿಯಾಗಲು_ಎಲೆಕ್ಟ್ರಿಕ್_ಬ್ರಷ್_ಅತ್ಯುತ್ತಮ.
#ಬ್ಯಾಟರಿ_ಚಾಲಿತ_Oral_B_ಟೂತ್_ಬ್ರಷ್_ನಂಬರ್_ಒನ್
#ಬೆಲೆ_530_ರೂಪಾಯಿ.
ದಂತ ವೈದ್ಯಕೀಯದಲ್ಲಿ ಏನೆಲ್ಲ ಮಾಡಬಹುದು ಅನ್ನುವುದು ಉಹಿಸಲಾರದಂತ ಕಾಲ ಮತ್ತು ಇದರಲ್ಲಿ ವಾರ್ಷಿಕ ವಹಿವಾಟು ಲೆಖ್ಖವಿಲ್ಲದಷ್ಟು .
ಟೂತ್ ಪೇಸ್ಟ್ ಬ್ರಷ್ ಬಳಸದ ವ್ಯಕ್ತಿ ಇಲ್ಲವೇ ಇಲ್ಲ, ಬ್ರಷ್ಗಳಲ್ಲೂ ಸಾವಿರ ವಿದ ಅದರಲ್ಲೂ ಹಾರ್ಡ್ - ಮೀಡಿಯಂ-ಸಾಫ್ಟ್ -ಸೆನ್ಸೋಡೆ೦ಟ್ ಇತ್ಯಾದಿ ಇದೇ ರೀತಿ ಪೇಸ್ಟ್ ಗಳು ತರಹಾವಾರಿ.
ನಾವು ಬಳಸುವ ಬ್ರಷ್ ಗಳು ಅವೈಜ್ಞಾನಿಕವಾಗಿ ಬಳಸುವುದರಿಂದ ಹಲ್ಲಿನ ಎನಾಮಲ್ ಸವಕಳಿ ಆಗಿ ಹಲ್ಲು ಸಂವೇದನೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಒರಟು ಬ್ರಷ್ ಗಳು ಹಲ್ಲಿನ ಒಸಡುಗಳೂ ಡ್ಯಾಮೇಜ್ ಮಾಡುತ್ತದೆ ನಾವು ಸೇವಿಸುವ ಆಹಾರ ಹಲ್ಲಿನ ಸಂದಿಗಳಲ್ಲಿ ಶೇಖರವಾಗಿ ಕೊಳೆತು ಬ್ಯಾಕ್ಟೀರಿಯಾ ಉತ್ಪಾದನೆ ಆಗುವುದರಿಂದ ಇದನ್ನೆಲ್ಲ ಗಮನಿಸುವ ವ್ಯವಧಾನ ಇರುವುದಿಲ್ಲ.
ನಾನು ಸೆನ್ಸಿಟಿವ್ ಬ್ರಷ್ ಮಾತ್ರ ಬಳಸುವುದು ಅದರಲ್ಲೂ ಸೆನ್ಸಿಟಿವ್ ಬ್ರಷ್ ತಿಂಗಳಲ್ಲೇ ಬದಲಿಸಬೇಕು ದಂತ ವೈದ್ಯರ ಪ್ರಕಾರ ನಾನು ಹಲ್ಲು ಉಜ್ಜುವ ಕ್ರಮ ಅವೈಜ್ಞಾನಿಕ.
ಹಾಗಾಗಿ ನನಗೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬ್ರಷ್ ನನ್ನ ಮಗ ಆನ್ಲೈನ್ ಲ್ಲಿ ಮೊನ್ನೆ ತರಿಸಿದ್ದನ್ನು ಬಳಸುತ್ತಿದ್ದೇನೆ ಆದ್ದರಿಂದ ಮ್ಯಾನ್ಯೂಯಲ್ ಬ್ರಷ್ ಕೈ ಬಿಟ್ಟಿದ್ದೇನೆ.
ಕೇವಲ 530 ರೂಪಾಯಿಯ AA ಬ್ಯಾಟರಿ ಶೆಲ್ನಿಂದ ನಡೆಯುವ ಈ ಬ್ರಷ್ ಹಲ್ಲಿನ ಎನಾಮಲ್, ಒಸಡುಗಳಿಗೆ ಪೆಟ್ಟಾಗದಂತೆ ಹಲ್ಲಿನ ಸಂದಿಗೊಂದಿಗಳಲ್ಲಿ ಸುಲಭವಾಗಿ ಬ್ರಷ್ ಮಾಡುತ್ತಿದೆ.
Comments
Post a Comment