Blog number 996. ಗಾಂಧೀಜಿ ಅವರನ್ನು ವಿರೋದಿಸುವ ಗಾಂಧೀ ಹತ್ಯೆ ಮಾಡಿದ ನಾಥುರಾಮ ಗೋಡ್ಸೆ ಸಮರ್ಥಿಸುವವರೆಲ್ಲ ಬಳಸುವುದು ಗಾಂಧಿ ನಮ್ಮ ರಾಷ್ಟ್ರೀಯತೆಗೆ ದಕ್ಕೆ ತಂದರು, ಅವರ ಹೋರಾಟದ ವೇದಿಕೆ ಕಾಂಗ್ರೇಸ್ ಬ್ರಿಟಿಷರ ಪರವಾಗಿತ್ತು ಇತ್ಯಾದಿ ಅದಕ್ಕೆಲ್ಲ ಉತ್ತರ ಇವರ ಲೇಖನದಲ್ಲಿದೆ ಓದಿ.
ಅರವಿಂದ ಚೊಕ್ಕಾಡಿಯವರ ಎಲ್ಲಾ ಲೇಖನ ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಆದರೆ ಈ ಲೇಖನ ಮಾತ್ರ ಈಗಿನ ತಲೆಮಾರಿನವರಿಗೆ ಇತಿಹಾಸ ತಿರುಚಿ ರಾಷ್ಟ್ರೀಯತೆ ಹೆಸರಲ್ಲಿ ಗಾಂದಿಯವರನ್ನು ಟಾರ್ಗೆಟ್ ಮಾಡಿ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಪ್ರೋತ್ಸಾಹಿಸುವ ಈ ಕಾಲಘಟ್ಟದಲ್ಲಿ ಕಣ್ಣು ತೆರೆಸುವಂತ ಲೇಖನ ಇದು🙏🙏🙏
ಕಿರಣ್ ಕಾಶಿ,
ನಿಮ್ಮ ಒಂದು ಕಮೆಂಟ್ ಅನ್ನು ನಾನು ತೆಗೆದು ಹಾಕಿದ್ದೇನೆ. ಏಕೆಂದರೆ ಅಲ್ಲಿಗದು ಅಪ್ರಸ್ತುತವಾಗಿತ್ತು. ಆದರೆ ಇಲ್ಲಿ ಉತ್ತರಿಸುತ್ತೇನೆ.
ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಬ್ರಿಟಿಷರನ್ನು ಬೆಂಬಲಿಸಲು ಇದ್ದದ್ದು, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಗಾಂಧಿಯೊಂದಿಗಿದ್ದವರು ಸ್ಥಳೀಯ ಹಿತಾಸಕ್ತಿಯವರು, ರಾಷ್ಟ್ರೀಯತೆಗೆ ವಿರುದ್ಧ ಇದ್ದವರು ಎಂಬ ನಿಮ್ಮ ವಾದವೇ ಹಿಸ್ಟಾರಿಕಲ್ ಮೆಥಡಾಲಜಿಯ ತಳಹದಿಯಲ್ಲಿ ಸ್ವೀಕಾರಾರ್ಹವಲ್ಲ.
ನೀವು ಸ್ವಾತಂತ್ರ್ಯ ಬಂದ ನಂತರ ಗಾಂಧಿ, ನೆಹರೂ ಅವರನ್ನು ಜಾಸ್ತಿ ಹೈಲೈಟ್ ಮಾಡಿದರು ಎಂದರೆ ಪರಿಗಣನೆಗೆ ಅರ್ಹ ವಾದ. ಏಕೆಂದರೆ ಅಧಿಕಾರ ಕಾಂಗ್ರೆಸ್‌ನ ಬಳಿ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಧಿಕಾರ ಬ್ರಿಟಿಷರ ಬಳಿ ಇತ್ತು. ಹಿಂದೂ ಮಹಾ ಸಭಾ ಮತ್ತು ಮುಸ್ಲಿಂ ಲೀಗ್ ಎರಡೂ ಕಾಂಗ್ರೆಸ್‌ಗೆ ವಿರೋಧಿಗಳಾಗಿದ್ದವು. ಗಾಂಧೀಜಿಯ ಪ್ರಬಲ ಟೀಕಾಕಾರರಾದ ಅಂಬೇಡ್ಕರ್, ಸಾವರ್ಕರ್ ಆಗಲಿ, ವಿನ್ಸ್ಟನ್ ಚರ್ಚಿಲ್ ಆಗಲಿ ಗಾಂಧೀಜಿ ಅಥವಾ ಅಂದಿನ ಕಾಂಗ್ರೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡುವ ಸಂಸ್ಥೆ ಎಂಬ ಟೀಕೆಯನ್ನು ಮಾಡಿಲ್ಲ. ಗಾಂಧಿಯ ವಿರೋಧಿಗಳಾಗಿದ್ದು ಆ ಕಾಲಮಾನದಲ್ಲಿ ಬದುಕಿದ್ದವರೇ ಎಂದೂ ಮಾಡದ ಟೀಕೆಯನ್ನು ಇವತ್ತು ಯಾರೇ ಮಾಡಿದರೂ ಅದು ಪರಿಗಣನೆಗೇ ಅರ್ಹವಾದ ಟೀಕೆಯಲ್ಲ. ಭಗತ್ ಸಿಂಗ್, ಅಜಾದ್, ಭೋಸ್ ಯಾರೂ ಕೂಡ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧಿಯಾಗಿದೆ ಎಂದು ಟೀಕಿಸಿದ್ದಿಲ್ಲ. ಬ್ರಿಟಿಷರ ಪರ ಇದ್ದ ಸಂಸ್ಥೆಯಾಗಿದ್ದರೆ ಅಷ್ಟೊಂದು ಕಾಂಗ್ರೆಸ್ ನಾಯಕರನ್ನು ಬಂಧಿಸಿದ್ದೇಕೆ? ಬ್ರಿಟಿಷರಿಗೇನು ತಲೆ ಸರಿ ಇರ್ಲಿಲ್ವ? ಸಾವರ್ಕರ್ ಕ್ಲೆಮೆನ್ಸಿ ಪದ್ಧತಿಯ ಪ್ರಕಾರ ಹೊರಬಂದು ಬ್ರಿಟಿಷರಿಂದ ಮಾಸಾಶನ ಪಡೆದ ಮೇಲೆ ಅವರ ಬಗ್ಗೆ ಸರಕಾರ ನಿಗಾ ಇಟ್ಟಿತ್ತೇ ಹೊರತು ಬಂಧಿಸಲಿಲ್ಲ. ತನ್ನ ಪರ ಇರುವವನನ್ನು ಬಂಧಿಸುವುದಿಲ್ಲ.ಇದು ಕಾಮನ್ ಸೆನ್ಸ್. ಇದಕ್ಕೆ ಇತಿಹಾಸದ ಜ್ಞಾನ ಬೇಕಿಲ್ಲ.
ಎರಡನೆಯದು ಸ್ಥಳೀಯ ಹಿತಾಸಕ್ತಿ ಹೌದು. ಸ್ಥಳೀಯ ಹಿತಾಸಕ್ತಿಯವರನ್ನೆಲ್ಲ ಒಟ್ಟು ಮಾಡಿ ರಾಷ್ಟ್ರೀಯ ಹಿತಾಸಕ್ತಿಯಾಗಿ ಪರಿವರ್ತಿಸಿದವರು ಗಾಂಧಿ. ನೀವು ಹೇಳುವ ರಾಷ್ಟ್ರ ಯಾವುದು? 680 ರಾಜರುಗಳ ರಾಜ್ಯವೊ? ಬ್ರಿಟಿಷರ ನೇರ ಆಡಳಿತದ ಭಾಗವೊ? ಪೋರ್ಚುಗೀಸರು, ಫ್ರೆಂಚರುಗಳ ಕೈಲಿದ್ದ ಭಾಗವೊ? ಇದೆಲ್ಲವೂ ಒಟ್ಟಾಗಿ ಒಂದು ಫೆಡರಲ್ ರಚನೆಯಾದದ್ದೆ 1935 ರ ಶಾಸನದಲ್ಲಿ( ಫ್ರೆಂಚ್, ಪೋರ್ಚುಗೀಸರ ಹೊರತು). ಗಾಂಧಿಯೊಂದಿಗೆ ಸೇರಿದ ಸ್ಥಳೀಯ ನಾಯಕರು ಅದಕ್ಕೆ ಮೊದಲೆ ಸೇರಿದ್ದಾರೆ. ಸಹಜವಾಗಿ ಸ್ಥಳೀಯ ಹಿತಾಸಕ್ತಿಗಾಗಿ ಸೇರಿರುತ್ತಾರೆ. ರಾಷ್ಟ್ರ ರಚನೆಯಾಗುವ ಮೊದಲೆ ರಾಷ್ಟ್ರಕ್ಕಾಗಿ ಒಗ್ಗೂಡಿರಲಿಲ್ಲ ಎಂದರೆ? ನೀವು ಹೇಳುವ ಭಾರತ ರಾಷ್ಟ್ರದ ಇಂದಿನ ರೂಪ ಬಂದದ್ದು ಗಾಂಧಿ ಹತ್ಯೆಯಾಗಿ 13 ವರ್ಷಗಳ ನಂತರ. ತಾನು ಸತ್ತ ನಂತರ ರಚನೆಯಾದ ರಾಷ್ಟ್ರದ ಸ್ವರೂಪದ ಕಲ್ಪನೆಯನ್ನು ಇರಿಸಿಕೊಂಡು ಸಾಯುವ ಮೊದಲು ಗಾಂಧಿಯಲ್ಲ, ಯಾರಾದರೂ ಹೇಗೆ ಚಿಂತನೆ ಹೊಂದಿರಲು ಸಾಧ್ಯ?
Comments
Post a Comment