Blog number 971. ಗೋವಿಂದ ಪೈ ಸ್ಮಾರಕ ಸಂಶೋದನಾ ಕೇಂದ್ರದ ಪಿ.ಹೆಚ್.ಡಿ. ವಿಭಾಗದ ಮಾರ್ಗದರ್ಶಕರು ಸಾಹಿತಿಗಳು ಆಟ ಜನಾರ್ದನ ಭಟ್ಟರು ನನ್ನ ಎರಡನೆ ಕೃತಿ ಓದಿ ಬರೆದ ಪೇಸ್ ಬುಕ್ ಪೋಸ್ಟ್
ಖ್ಯಾತ ಬರಹಗಾರ ಗೋವಿಂದ ಪೈ ಸ್ಮಾರಕ ಸಂಶೋದನಾ ಕೇಂದ್ರದ ಪಿಹೆಚ್ಡಿ ವಿಭಾಗದ ಮಾರ್ಗದರ್ಶಕರಾದ ಜನಾರ್ದನ ಭಟ್ಟರು ನನ್ನ ಎರಡನೆ ಕೃತಿ ಓದಿ ಪುಸ್ತಕ ತಮ್ಮ ಸಂಗ್ರಹಕ್ಕೆ ಸೇರಿಸಿದ್ದಾರಂತೆ
ಅವರ
ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಮತ್ತು ೨೮ ಕಥೆಗಳು
ಪ್ರಕಾಶಕರು: ಪಶ್ಚಿಮ ಘಟ್ಟದ ಶಿವಮೊಗ್ಗ ಓದುಗ-ವಿಮರ್ಶಕ ಬಳಗ
ಆನಂದಪುರಂ, ಸಾಗರ.
'ಬೆಸ್ತರ ರಾಣಿ ಚಂಪಕಾ' ಕಾದಂಬರಿಯ ಮೂಲಕ ನನಗೆ ಆತ್ಮೀಯರಾದ ಆನಂದಪುರಂನ ಉದ್ಯಮಿ, ಲೇಖಕ, ಪತ್ರಕರ್ತ ಶ್ರೀ ಕೆ. ಅರುಣಪ್ರಸಾದ್ ಅವರ ಬರಹಗಳನ್ನು ನಾನು ಬಹಳ ಆಸಕ್ತಿಯಿಂದ ಓದುವವನು. ತೇಜಸ್ವಿಯವರ ಹಾಗೆ ಸಮಾಜದ ಎಲ್ಲ ಬಗೆಯ ಜನರ ಬದುಕಿನ ಬಗ್ಗೆ ತಿಳಿದು ಪ್ರೀತಿಯಿಟ್ಟುಕೊಂಡವರು ಅರುಣಪ್ರಸಾದ್ ಎಂದು ನಾನು ಗ್ರಹಿಸಿರುವೆ. ಹಾಗಾಗಿ ನನ್ನ ಅನುಭವ ವಿಸ್ತಾರಕ್ಕೆ ಬೇಕಾಗಿ ಆಗಾಗ ಓದುವ ಸಾಹಿತಿಗಳಲ್ಲಿ ಅರುಣಪ್ರಸಾದ್ ಒಬ್ಬರು. ಫೇಸ್‌ಬುಕ್‌ನಲ್ಲಿ ಓದಿದ್ದರೂ ಪುಸ್ತಕ ಬಂದಾಗ ಅವರನ್ನು ಕೇಳಿ ತರಿಸಿಕೊಂಡು ಓದಿದೆ.
ಡಿ.ವಿ.ಜಿ. (ಜ್ಞಾಪಕ ಚಿತ್ರ ಶಾಲೆ), ಗೊರೂರು, ಕಾರಂತ, ಕುವೆಂಪು, ನಾಡೋಜ ಎಸ್.ಆರ್. ರಾಮಸ್ವಾಮಿ, ತೇಜಸ್ವಿ, ಪಿ.ಎಸ್.ರೈ (ಮಲೆನಾಡಿನ ಮಹನೀಯರು- 'ಅಕ್ಷರ ಪ್ರಕಾಶನ), 'ಹಳಬರ ಜೋಳಿಗೆ' (ಶ್ರೀಮತಿ ಜಯಮ್ಮ ಚೆಟ್ಟಿಮಾಡ ಅವರು ಸಂಗ್ರಹಿಸಿದ- ಸಂಪಾದಿಸಿದ ಅನುಭವಕಥನಗಳು) - ಹೀಗೆ ಸಮಾಜವನ್ನು ಅರಿಯಲು ನೆರವಾಗುವ ಈ ಬಗೆಯ ಪ್ರಬಂಧಗಳು ನನ್ನ ಗ್ರಂಥಾಲಯದಲ್ಲಿ ಕೈಗೆ ಸಿಕ್ಕುವ ಹಾಗೆ ಇವೆ. ಅರುಣಪ್ರಸಾದ್ ಅವರ ಕೃತಿಯೂ ಆ ಬಗೆಯದು.
Comments
Post a Comment