Skip to main content

Posts

Showing posts from June, 2019

ಅಪರೂಪದ ಕ್ರೀಡಾ ಮನೋಭಾವದ ಮಾನವೀಯತೆ ಉಳಿಸಿಕೊಂಡಿರುವ ಶಿವಮೊಗ್ಗದ ವೈದ್ಯ ಡಾ.ಪ್ರೀತಂ

* ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು * ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ  ಒಟ್ಟು 1000 ಕಳಿಸಿ ಅಂದರು.   ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.   ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.   ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.   ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ, ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ್ತರು, ಇವರು ಬಳ್ಳಾರಿಯಲ್ಲಿ ಸಕಾ

ಆನಂದಪುರಂನ ಮೊಯಿದೀನ್ ಕಾಕ ಒಂದು ನೆನಪು

* ಕೇರಳಿಗೆ ಕೆ.ಮೊಹಿದೀನ್ ಕಾಕ ಕನ್ನಡದ ಎಲ್ಲಾ ಪತ್ರಿಕೆ ಪ್ರತಿ ನಿತ್ಯ ಓದಿಯೇ ಮುಂದಿನ ಕೆಲಸ ಮಾಡುವವರು ನಿನ್ನೆ ಇಹಲೋಕ ತ್ಯಜಿಸಿದರು*   ಆನಂದಪುರಂಗೆ ಮೊದಲು ಬಂದ ಮಲೆಯಾಳದ ವಲಸಿಗರಲ್ಲಿ ಮೊಹಿದೀನ್ ಕಾಕ ಕನ್ನಡ ಕಲಿತು ಎಲ್ಲಾ ಪತ್ರಿಕೆ ಓದಿ ಮುಂದಿನ ಕೆಲಸ ಪ್ರಾರಂಬಿಸುವ ನಿತ್ಯ ಕಾಯಕ ಹೊಂದಿದ್ದರು.     ಶುಂಠಿ ವ್ಯಾಪಾರಿ ರಾಮಟ್ಟ, ಪ೦ಚಾಯಿತಿ ಸದಸ್ಯರಾದ ಕರುಣಾಕರನ್, ಮಿಲ್ಟ್ರಿ ಹೋಟೆಲ್ ನಾಯರ್, ನಾಟಾ ಕೊಯ್ಯುವ ಲೋಹಿತಾಶ್ವಾ, ಲಾರಿ ಮಾಲಿಕರಾದ ಅಚ್ಚುತಾಚಾರ್, ಗಾರೆ ಕೆಲಸದ ಗೋಪಿ ಮೇಸ್ತ್ರಿ ಇವರೆಲ್ಲ ಅವರ ಬಾಷೆ, ಆಚರಣೆ ಮತ್ತು ಅವರ ಆಹಾರ ಪದ್ಧತಿಯಿಂದ ನಾವು ಚಿಕ್ಕವರಿದ್ದಾಗ ಬಿನ್ನರಾಗಿ ಕಾಣುತ್ತಿದ್ದರು, ಇವರೆಲ್ಲರ ಮಲೆಯಾಳಿ ಎಕ್ಸೆ೦ಟ್ ನ ಕನ್ನಡ ಬೇರೆ ಅಥ೯ ನೀಡಿ ನಗು ಸುರಿಸುತ್ತಿತ್ತು.   ಮೊಯಿದಿನ್ ಕಾಕ ಆನಂದಪುರಂ ಬಸ್ ಸ್ಟ್ಯಾ೦ಡ್ ಹತ್ತಿರ ಅನೇಕ ವಷ೯ ಎಳನೀರು ಅಂಗಡಿ ನಡೆಸಿದರು ಆಗ ಎದುರಿನ ಸಕಾ೯ರಿ ಕನಕಮ್ಮಳ ಆಸ್ಪತ್ರೆಯಲ್ಲಿ ಒಳ್ಳೆಯ ಸೇವಾ ಮನೋಭಾವದ ವೈದ್ಯರು ಇರುತ್ತಿದ್ದರು ಇಡೀ ಆಸ್ಪತ್ರೆ ರೋಗಿಗಳಿಂದ ತುಂಬಿರುತ್ತಿತ್ತು, ರೋಗಿಗಳನ್ನ ನೋಡಲು ಬರುವ ಅಂದು ಬಂದುಗಳು ಕೈಯಲ್ಲಿ ಎಳನೀರು ಒಯ್ಯುವ ಪದ್ದತಿ ಇತ್ತು ಹಾಗಾಗಿ ಕಾಕನ ಎಳನೀರು ವ್ಯಾಪಾರ ಜೋರಿತ್ತು.   ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಓದಿಸಿದರು ಅವರೂ ಅತ್ಯುತ್ತಮವಾಗಿ ಓದಿದರು, ಮಗ ಮೊಹಮದ್ ನನ್ನ ಕ್ಲಾಸ್ ಮೇಟ್ ಅವರು ಸಾಗರದ ಪ್ರಖ್ಯಾತ ಉದ್ದಿಮೆದಾರ, ರಾಜಕಾರಣಿ

*ಪುತ್ತೂರಿನ ಮಾಸ್ಟರ್ ಪ್ಲಾನರಿ ಎಂಬ ಪರಿಸರ ಪ್ರೇಮಿ ಉದ್ದಿಮೆ *

* ಪುತ್ತೂರಿನ ಪ್ರತಿಷ್ಠಿತ ಉದ್ದಿಮೆ ಮಾಸ್ಟ್ ರ್ ಫ್ಲಾನೆರಿ *   2011ರಲ್ಲಿ ನಮ್ಮ ಲಾಡ್ಜ್ ಮತ್ತು ಕಾಟೇಜ್ ನಿಮಾ೯ಣ ಸಂದಭ೯ದಲ್ಲಿ ಈ ಸಂಸ್ಥೆಯಿ೦ದ ಸಿಮೆಂಟ್ ಬಾಗಿಲು, ಕಿಟಕಿ ಮತ್ತು ವಾಡ್೯ ರೋಬ್ಗಳನ್ನ ಇವರಿಂದ ಖರೀದಿಸಿದ್ದೆ, ಮೊನ್ನೆ ನಮ್ಮ ಹೊಸ ಕಟ್ಟಡಕಾಗಿ ಇಲ್ಲಿಗೆ ಹೋಗಿದ್ದೆ.    ಈ ಸಂಸ್ಥೆ ಮರದಿಂದ ನಿಮಿ೯ಸುವ ಎಲ್ಲಾ ವಸ್ತುಗಳನ್ನ ಸಿಮೆಂಟ್ ನಿಂದ ನಿಮಿ೯ಸುವ ಕೌಶಲ್ಯ ಹೊಂದಿದೆ.    ದೇಶದಾದ್ಯಂತ ರೈಲ್ವೆ, ಅರಣ್ಯ ಇಲಾಖೆಗಳಿಗೆ ಇವರ ಉತ್ಪನ್ನ ಸರಭರಾಜು ಆಗುತ್ತಿರುತ್ತದೆ.   ದಿಡೀರ್ ನಿಮಿ೯ಸುವ ಮನೆ, ಟಾಯಿಲೆಟ್, ಕೃಷಿ ಬೋರ್ ವೆಲ್ ಗಳಿಗೆ ಕಾಂಕ್ರಿಟ್ ಸ್ವಿಚ್ ಬೋಡ್೯ಗಳು ಹೀಗೆ ಇಲ್ಲಿ ಏನುOಟು ಏನಿಲ್ಲ !,ಮರದಲ್ಲಿ ವಾಡ್೯ ರೋಬ್ ಮಾಡಲು ಕನಿಷ್ಟ 700 ರೂಪಾಯಿ ಚದರ ಅಡಿಗೆ ಬೇಕು ಅದೇ ಇವರ ಕಾಂಕ್ರಿಟ್ ನಲ್ಲಿ 4OO ರಿಂದ 500 ರೂಪಾಯಿಯಲ್ಲಿ ಆಗುತ್ತೆ ಆದರೆ ಇದು ಲಡ್ಡಾಗುವುದಿಲ್ಲ, ಒರಲೆ ತಿನ್ನುವುದಿಲ್ಲ  ಮೈoಟೆನೆನ್ಸ್ ಪ್ರೀ.   ಆನಂದ್ ಎಂಬುವವರು ಪ್ರಾರಂಬಿಸಿದ ಈ ಸಂಸ್ಥೆಯಲ್ಲಿ ನೂರಾರು ಕುಟುಂಬ ಉದ್ಯೋಗ ಮಾಡುತ್ತಿದೆ, ಅವರಿಗೆ ಊಟ / ವಸತಿ ವ್ಯವಸ್ಥೆ, ಕಾಮಿ೯ಕರಿಗಾಗಿಯೇ ಸಹಕಾರಿ ಮಾಲ್ ನಿಮಿ೯ಸಲಾಗಿದೆ.   ಕಾಮಿ೯ಕರ ಮಕ್ಕಳಿಗೆ ವಿದ್ಯಾಭ್ಯಾಸ, ಊಟ ವಸತಿ ವ್ಯವಸ್ಥೆ ಕೂಡ ಅತ್ಯುತ್ತಮವಾಗಿ ಮಾಡಿದ್ದಾರೆ.   ಮಹಿಳಾ ಸಿಬ್ಬಂದಿಗಳು ಇಲ್ಲಿ ತಯಾರು ಮಾಡುವ ಉತ್ಪನ್ನಗಳನ್ನ ತಯಾರಿಸುವ ಕುಶಲತೆ ಹೊಂದಿರುವ ತರಬೇತಿ ನೀಡಿದ್ದಾರೆ. ಇವ

ಆನಂದಪುರದ ಘನತೆ ಹೆಚ್ಚಿಸಿದ್ದ ಸಂತೋಷ್ ರೈಸ್ ಮಿಲ್ ಸುಬ್ಬರಾವ್

#ದುಗ೯ಮ ಹಳ್ಳಿಯಲ್ಲಿ ಜನಿಸಿ ದೊಡ್ಡ ಉದ್ದಿಮೆದಾರರಾಗಿ ಆನಂದಪುರಂನ ಘನತೆ ಹೆಚ್ಚಿಸಿದ್ದ ಸುಬ್ರಾವ್#   ಆನಂದಪುರಂನ ಸಂತೋಷ್ ರೈಸ್ ಇಂಡಸ್ಟ್ರಿಸ್ ಬೃಹತ್ ಅಕ್ಕಿ ಅವಲಕ್ಕಿ ಗಿರಣಿ ಮತ್ತು ಸಂತೋಷ್ ಆಗ್ರೋ ಎಂಬ ಬೃಹತ್ ಕೋಲ್ಡ್ ಸ್ಟೋರೇಜ್ ಗಳ ಮಾಲಿಕರಾದ ಶ್ರೀ ಸುಬ್ಬ ರಾವ್ ಇವತ್ತು ಇಹಲೋಕ ತ್ಯಜಿಸಿದ್ದಾರೆ.   ಇವರ ಜೀವನದ ಹಾದಿ ಅತ್ಯಂತ ದುಗ೯ಮ, ಸಾಗರ ತಾಲ್ಲೂಕಿನ ಆನ೦ದಪುರಂ ಹೋಬಳಿಯ ಬಳ್ಳಿ ಬೈಲು ಗ್ರಾಮದ ಕೊಂಗನಾಸಳ್ಳಿ ಎಂಬ ಹಳ್ಳಿಯ ಮಧ್ಯಮ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯOಗಾರ್ ಕುಟುಂಬದವರು ಪ್ರಾರಂಬಿಸಿದ ಪಿಯುಸಿ ತರಗತಿಯ ಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ನಲ್ಲಿ ಉತ್ತಿಣ೯ರಾದ ಏಕೈಕ ವಿದ್ಯಾಥಿ೯ ಸುಬ್ಬ ರಾವ್.    ಕೊಂಗನಾಸಳ್ಳಿಯಿ೦ದ ಆನಂದಪುರಕ್ಕೆ ರಸ್ತೆ ಇರಲಿಲ್ಲ, ದಟ್ಟ ಕಾಡು ಹಾಗಾಗಿ ಸುಬ್ಬರಾವ್ ಆನಂದಪುರದ ಅಗ್ರಹಾರದ ರಾಮ ಮಂದಿರ ಮತ್ತು ಅದರ ಸಮೀಪ ಬಾಡಿಗೆ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.   ಊರಿನ ಹಿರಿಯರಾದ ಅದ್ಯಾಪಕರಾದ ಶ್ರೀ ಬೋಜರಾಜ್ ಅಯ್ಯOಗಾರ್, ಆನಂದಪುರದ ಅಭಿವೃದ್ಧಿಗೆ ಕಾರಣಕತ೯ರಾದ ಗಾಂಧಿವಾದಿ ಶಿಕ್ಷಕ  ಎಸ್.ಆರ್.ಕೃಷ್ಣಪ್ಪ ಇವರಿಗೆ ಅನೇಕ ರೀತಿ ಸಹಕಾರ ನೀಡಿದವರು. ಪಿಯುಸಿ ಓದುವಾಗ ನಮ್ಮ ಅಣ್ಣ ಕೆ.ನಾಗರಾಜ್ ಇವರ ಕ್ಲಾಸ್ ಮೇಟ್ ಹಾಗಾಗಿ ಕೆಲ ಸಂಜೆ ನಮ್ಮ ಮನೆಗೆ  ಇವರು ಬರುತ್ತಿದ್ದರು.   ನಂತರ ರೈತ ಬಂದು ಗ್ರಾಮೋದ್

ಕಲ್ ಡಕ ಕೆ.ಟಿ. ಚಹಾ

* ಕಲ್ಲ್ ಡಕದ ಕೆಟಿ ಚಹಾ ಎಂಬ ಮ್ಯಾಜಿಕ್ ಚಹಾ* ಮಂಗಳೂರಿಂದ ಪುತ್ತೂರು, ಸುಳಯ,  ಮೈಸೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಕಲ್ಲ್ ಡಕ ಎಂಬ ಊರು ಸಿಗುತ್ತದೆ ಇಲ್ಲಿನ ಪೇಟೆಯ ಎಡ ಭಾಗದಲ್ಲಿ ಒಂದು ಪ್ರಸಿದ್ದವಾದ ಪುರಾತನವಾದ ಒಂದು ಹೋಟೆಲ್ ಇದೆ, ಮಾಲಿಕರ ಮೂರನೇ ತಲೆಮಾರಿನವರು ತಮ್ಮ ಹಿರಿಯರ ಮಾಗ೯ದಶ೯ನದಲ್ಲಿಯೇ ಯಶಸ್ವಿಯಾಗಿ ನಡೆಸುತ್ತಿದ್ದಾರೆ.   ಇದರ ಹೆಸರು ಲಕ್ಷ್ಮಿ ನಿವಾಸ ಕೆಟಿ ಹೋಟೆಲ್, ಇಲ್ಲಿನ ಚಹಾವೇ ವಿಶೇಷ ಗ್ಲಾಸ್ ನ ಕೆಳಭಾಗದ ಹಾಲು ಮತ್ತು ಮೇಲ್ಬಾಗದ ಚಹಾ ಡಿಕಾoಕ್ಷನ್ ಒಂದೇ ಗ್ಲಾಸಿನಲ್ಲಿದ್ದರೂ ಬೇರೆ ಬೇರೆ ಆಗಿ ಇರುತ್ತದೆ, ಚಮಚದಲ್ಲಿ ಮಿಶ್ರ ಮಾಡಿ ಕುಡಿಯಬೇಕು.   ಈ ಚಹಾ ತಯಾರಿಸುವುದು ನಿಪುಣ ಕೆಲಸಗಾರರಿಗೆ ಮಾತ್ರ ಸಾಧ್ಯ!, ಮೊದಲೆಲ್ಲ ಪೋಟೋ ತೆಗೆಯಲು ಬಿಡುತ್ತಿರಲಿಲ್ಲ ನಿನ್ನೆ ಪುತ್ತೂರಿನಿ೦ದ ಬರುವಾಗ ಇಲ್ಲಿನ ವಿಶೇಷ  ಕೆಟಿ ಚಹ ಸೇವಿಸಲು ಇಲ್ಲಿಗೆ ಹೋಗಿದ್ದಾಗ ಪೋಟೋ ವಿಡಿಯೋ ತೆಗೆಯಲು ಅನುಮತಿ ನೀಡಿದರು.   ಒಮ್ಮೆ ಇಲ್ಲಿನ ಕೆಟಿ ವಿಶೇಷ ಚಹಾ ಸಾಧ್ಯವಾದರೆ ರುಚಿ ನೋಡಿ.

ಆನಂದಪುರದ ಉದ್ದಿಮೆದಾರರಾದ ಸುಬ್ಬರಾವ್ ಗೆ ನುಡಿನಮನ.

* ಆನಂದಪುರದ ಖ್ಯಾತ ಉದ್ದಿಮೆದಾರ ಟಿ.ಎನ್.ಸುಬ್ಬರಾವ್ ಗೆ ನುಡಿ ನಮನ *   ಸುಬ್ಬರಾವ್ ಸ್ವಯಂ ಉದ್ಯೋಗ ಮಾಡುವ ಗ್ರಾಮೀಣ ಪ್ರದೇಶದ ಸ್ವಯಂ ಉದ್ಯೋಗಿಗಳಿಗೆ ರೋಲ್ ಮಾಡೆಲ್ ಅಂತ ಬರೆದಿದ್ದೆ, ನಿನ್ನೆ ಅವರ ನುಡಿ ನಮನ ಕಾಯ೯ಕ್ರಮದಲ್ಲಿ ಅವರ ಶ್ರೀಮತಿಯವರ ಸಹೋದರ ಪ್ರೌಡ ಶಾಲಾ ಶಿಕ್ಷಕ, ಬರಹಗಾರರಾದ ಎನ್.ಡಿ.ಹೆಗ್ಗಡೆ ಒಂದು 40 ಪುಟದ ಸಂಕ್ಷಿಪ್ತ ಮತ್ತು ಸವಿವರವಾದ ಒಂದು  ಸುಬ್ಬರಾವ್ ರ ಸ್ಮರಣಾಥ೯ "ಆನಂದದ ಕಣ್ಮಣಿ ಸುಬ್ಬರಾಯರು" ಎ೦ಬ ಪುಸ್ತಕ ಮುದ್ರಿಸಿ ಸುಬ್ಬರಾವರ ಅಭಿಮಾನಿಗಳಿಗೆ, ಮಿತ್ರರಿಗೆ ಮತ್ತು ಬಂದುಗಳಿಗೆ ವಿತರಿಸಿದ್ದಾರೆ. ಇದರಲ್ಲಿ ಸುಬ್ಬರಾಯರ ಜೀವನ ಯಾತ್ರೆ ಮತ್ತು ಅನೇಕರಿಗೆ ಗೊತ್ತಿಲ್ಲದ ಅವರ ಸಾದನೆ ನಮೂದಿಸಿದ್ದಾರೆ.   ಶೂನ್ಯ ಬಂಡವಾಳದಿ೦ದ ಕೋಟ್ಯಾದಿಪತಿ ಆದ ಸುಬ್ಬರಾವ್ ರ ಬಗ್ಗೆ ಈ ಸ್ಮರಣ ಸಂಚಿಕೆ ಬರೆದು ಪ್ರಕಟಿಸಲು ಎನ್.ಡಿ.ಹೆಗ್ಗಡೆ ಸಹೋದರಿ (ಸುಬ್ಬರಾವ್ ರ ಪತ್ನಿ) ಮತ್ತು ಪುತ್ರ ಸಹಾಯ ಸಹಕಾರ ನೀಡಿದ್ದು ಅಭಿನಂದನೀಯ, ಶಿವಮೊಗ್ಗದ ರಾಯಲ್ ಪ್ರಿOಟಿಂಗ್ ಪ್ರೆಸ್ ನ ಮಾದವಾಚಾಯ೯ರು ಸುಂದರವಾಗಿ ಮುದ್ರಿಸಿದ್ದಾರೆ.   ನಿನ್ನೆಯ ಕಾಯ೯ಕ್ರಮಕ್ಕೆ ಎನ್.ಡಿ.ಹೆಗ್ಗಡೆ ಮತ್ತು ಸಂಸ್ಥೆಯ ಈವರೆಗಿನ ಏಳಿಗೆಗೆ ಬೆನ್ನು ಮೂಳೆಯಂತೆ ಕಾಯ೯ನಿವ೯ಹಿಸುತ್ತಿರುವ ಆನಂದಪುರದ ಕ್ರೀಡಾಪಟು ಪ್ರಾಣೆಶ್ ಬಂದು ಕರೆದಿದ್ದರು ನಾನು ಪುತ್ತೂರಿಗೆ ಹೋಗಬೇಕಾದ್ದರಿಂದ ಬಾಗವಹಿಸಲಾಗಲಿಲ್ಲ, ಸುಬ್ಬರಾವ್ ರ ಪಿಯುಸಿ ಕ್ಲಾಸ್ ಮೇಟ್ ಆದ ನನ್ನ

ಹಂದಿಗೋಡು ಕಾಯಿಲೆ ಮತ್ತು ಸಮಾಜ ಸುಧಾರಕ ಚಂದ್ರಶೇಖರ ರಾಯರು

# ಕಳೆದ 12 ವಷ೯ದಿOದ ಹಂದಿಗೋಡು ಕಾಯಿಲೆ ಹೊಸದಾಗಿ ವರದಿ ಆಗಿಲ್ಲ!? # (ಹಂದಿಗೋಡು ಕಾಯಿಲೆ ಪೀಡಿತರಿಗೆ ನೆರವು ನೀಡುವ ಚಂದ್ರಶೇಖರ್ )   ಹಂದಿಗೋಡು ಕಾಯಿಲೆ ನಿಗೂಡ ಕಾಯಿಲೆ ಈವರೆಗೆ ಈ ಕಾಯಿಲೆಗೆ ಕಾರಣವೂ ಗೊತ್ತಾಗಿಲ್ಲ ಮತ್ತು ಇದಕ್ಕೆ ಔಷದಿಯೂ ಕಂಡು ಹಿಡಿದಿಲ್ಲ !?   ಈ ಕಾಯಿಲೆ ಪೀಡಿತರ ಬಗ್ಗೆ ನಿಸ್ವಾಥ೯ ಸೇವೆಯನ್ನ ಸುಮಾರು 4 ದಶಕದಿ೦ದ ನಡೆಸುತ್ತಿರುವ ಹಂದಿಗೋಡು ಚಂದ್ರಶೇಖರರಾಯರು ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಅಕ ಸ್ಮಿಕವಾಗಿ ಸಿಕ್ಕಿದರು.   ಅವರ ಸೇವೆಗಾಗಿ ಸಕಾ೯ರ ನೀಡಿದ ವಾಹನ ವಾಪಾಸ್ ಪಡೆದಾಗ ನಡೆದಾಡೆ ತಮ್ಮ ಸೇವೆ ಮುಂದುವರಿಸಿದಾಗ ನಾನು ಇವರ ಒಡಾಟಕ್ಕೆ TVS ಕೊಡಿಸಿದ್ದೆ ಅದರಲ್ಲೇ ಈಗಲೂ ನನ್ನ ತಿರುಗಾಟ ಅಂತ ಹೇಳಿದರು, ನನಗೂ ಸಾಥ೯ಕ ಅನ್ನಿಸಿತು.   ಒಂದು ಶುಭ ಸಂದೇಶವು ಅವರಿಂದ ಗೊತ್ತಾಯಿತು ಕಳೆದ 12 ವಷ೯ದಿಂದ ಹಂದಿಗೋಡು ಕಾಯಿಲೆ ಹೊಸದಾಗಿ ಯಾರಿಗೂ ಬಂದಿಲ್ಲ ಮತ್ತು ವರದಿ ಆಗಿಲ್ಲ!, ನಿಜಕ್ಕೂ ಒಂದು ಒಳ್ಳೆ ಸುದ್ದಿ ಸಿಕ್ಕಿತು.   ಅವರ ಸಂದಶ೯ನ ಇಲ್ಲಿದೆ ನೋಡಿ.

#ವಿನಯ್ ಗುರೂಜಿ ಮೂಡನಂಬಿಕೆ ವಿರುದ್ದ ಸರಿಯಾಗಿ ಸಮರ ಸಾರಿದ್ದಾರೆ#

#ವಿನಯ್ ಗುರೂಜಿ ಸರಿಯಾಗಿ ಮಾತಾಡಿದ್ದಾರೆ#   ಸರಿ ಅಂತ ಗೊತ್ತಿದ್ದರೂ ವಿರೋದಿಸಿದರೆ ನಾಗನ ಶಾಪ ತಟ್ಟುತ್ತದೆಂಬ ಭಯದಿಂದ ಅನೇಕರು ಮೌನ.   ಸರಿ ವಿಚಾರ ಜನಮನಕ್ಕೆ ತಲುಪಿದರೆ ತಮ್ಮ ಆದಾಯಕ್ಕೆ ನಷ್ಟ ಎಂಬ ಫಲಾನುಭವಿಗಳು ಕ್ರೋದದಿಂದ ನಾಗರ ಹಾವಿನ೦ತೆ ಭುಸು ಗುಟ್ಟುತ್ತಿದ್ದಾರೆ.    ಮೊದಲೆಲ್ಲ ಮನುಷ್ಯನ ಮೇಲೆ ದೈವ ಅವಾಹನೆ ಆಗುತ್ತೆ ಅಂದರೆ ಅಪಹಾಸ್ಯ ಮಾಡುತ್ತಿದ್ದ ಬ್ರಾಹ್ಮಣ ಪುರೋಹಿತರೆ ಈಗ ಈ ಲಾಭದಾಯಕ ಉದ್ದಿಮೆಯಲ್ಲಿ ನಾಗ ಪಾತ್ರಿಗಳಾಗಿ ನತಿ೯ಸುತ್ತಿದ್ದಾರೆ.   ದೊಡ್ಡ ಈ ಪ್ರದಶ೯ನ ಮೇಳ ನಡೆಸಿ ಕೊಟ್ಯಾಂತರ ಖಚು೯ ಮಾಡಿದರೆ ನಾಗ ಶಾಪಗಳೆಲ್ಲ ಕಳೆದು ಪಾವನನಾಗುತ್ತಾರೆಂಬ ಮೂಡನಂಬಿಕೆ ಆಳಕ್ಕೆ ಬೇರು ಬಿಟ್ಟಿದೆ.   ಕರಾವಳಿಯ ಈ ಕರಾಮತ್ತನ್ನ ಘಟ್ಟ ಪ್ರದೇಶವಾದ ಶಿವಮೊಗ್ಗ ಚಿಕ್ಕಮಗಳೂರು ವ್ಯಾಪಿಸುತ್ತಿದೆ.   ಹಾವಾಡಿಗರನ್ನು ಹಾವು ಹಿಡಿಯದಂತೆ ಅವರ ಕೇರಿಯಲ್ಲಿ ನಾಗರಕಟ್ಟೆ ಪ್ರತಿಷ್ಟಾಪಿಸಿದ್ದಾರೆ.   ನಾಗ ದೋಷ ಎಂದರೆ ಹಾವು ಸಾಯಿಸಲೇ ಬೇಕೆಂದಿಲ್ಲ, ಬೇರೆಯವರು ಸಾಯಿಸಿದ್ದು ನೋಡಿದರೂ ಸಾಕು, ಅಷ್ಟೇ ಅಲ್ಲ ಸತ್ತ ಹಾವು ನೋಡಿದರೂ ಬಂತು, ಅದಾವುದೂ ಇಲ್ಲದಿದ್ದರೆ ನಿಮ್ಮ ಕುಟುಂಬದ 7 ತಲೆಮಾರಿನಲ್ಲಿ ಯಾರೆ ಈ ಮೇಲಿನ ಅಂಶ ಪಡೆದಿದ್ದರೂ ನಿಮಗೆ ನಾಗ ದೋಷ ಗ್ಯಾರಂಟಿ ಅಂತೆ.   7 ತಲೆ ಮಾರಿನ ಸಾಕ್ಷಿ ಕೇಳಿದರೆ ದೈವದ ಪಾತ್ರಿ ಹೇಳಿಕೆ ನೀಡುತ್ತದೆ, ಮುಂದೆ ಬೇರೆ ಯಾವ ಮಾಗ೯ವು ಇಲ್ಲ ಇರುವುದು ನಾಗರಾದನೆ ಎಂಬ ದುಭಾರಿ ಖಚಿ೯ನ ಆಡಂಬರದ ಒಡ್ಡೋಲಗ