* ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು *
ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ ಒಟ್ಟು 1000 ಕಳಿಸಿ ಅಂದರು.
ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.
ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.
ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.
ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ, ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ್ತರು, ಇವರು ಬಳ್ಳಾರಿಯಲ್ಲಿ ಸಕಾ೯ರಿ ವೈದ್ಯರಾಗಿ ಪ್ರಸಿದ್ದರಾಗಿದ್ದರಿಂದ ರಾಮಕೃಷ್ಣ ಹೆಗ್ಗಡೆ ಇವರಿಗೆ ವಿಧಾನಸಭಾ ಚುನಾವಣೆಗೆ ಟಿಕೇಟ್ ಕೊಡಲು ಮುಂದಾಗಿದ್ದರು ಆದರೆ ಇವರು ಆಸಕ್ತಿ ತೋರಿಸಲಿಲ್ಲ, ಸ್ಪದಿ೯ಸಿದ್ದರೆ ಶಾಸಕರಾಗಿ ಮಂತ್ರಿ ಆಗಿ ಅತ್ಯುತ್ತಮ ರಾಜಕಾರಣಿ ಆಗುತ್ತಿದ್ದರು.
ಇವರ ಇನ್ನೊಬ್ಬ ಸಹೋದರ ಕೂಡ ಶಿವಮೊಗ್ಗದ ಪ್ರಖ್ಯಾತ ದಂತ ವೈದ್ಯರು.
ಡಾ.ಪ್ರೀತಂ ಕ್ರಿಕೆಟ್ ಆಟಗಾರರು, ರಣಜಿ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀಣ೯ರು, ಕಾರ್ ರೇಸ್ ಪ್ರವೀಣರು, ಎನ್ ಪೀಲ್ಡ್ ಬುಲೆಟ್ ಬೈಕ್ ನ ಕ್ಲಬ್ ಸದಸ್ಯರಾಗಿ ಬೈಕಿಂಗ್, ವಿದೇಶ ಪ್ರಯಾಣ, ಮೊನ್ನೆ KTM ಬೈಕ್ ಖರೀದಿಸಿ ಪ್ರತಿದಿನ ಬೆಳಿಗ್ಗೆ 300 KM ಡ್ರೈವಿಂಗ್ ಮಾಡಿ ಹೊಸ ಬೈಕ್ ಪಳಗಿಸಲು ಶಿವಮೊಗ್ಗದಿಂದ ಸಿಸಿ೯ ತನಕ ಹೋಗಿ ಬರುವಾಗ ನಮ್ಮ ಮಲ್ಲಿಕಾ ಹೋಟೆಲ್ ನಲ್ಲಿ ಕಾಫಿ ಬ್ರೇಕ್ ಮಾಡುತ್ತಿದ್ದರು.
ಇವರ ಹತ್ತಿರ ಬೈಕ್, ಕಾರ್ ಗಳ ಕಲೆ ಕ್ಷನ್ ಇದೆ, ಇವರ ಜೀವನ ಶೈಲಿಯಂತೆ ಮನೆಯೂ ಇದೆ, ಮೇಲ್ ಮಾಳಿಗೆಯಲ್ಲಿ ಸುಂದರವಾದ ಹೊಂಬಾರ್ ಮತ್ತು ಅದಕ್ಕೆ ಹೊಂದಿ ಕೊಂಡ ಮಿನಿ ಕಿಚನ್ ಇದೆ.
ಒಮ್ಮೊಮ್ಮೆ ಡಾ.ಪ್ರೀತಂ ವೈದ್ಯರೋ.. ಕ್ರೀಡಾಪಟುಗಳ ಅ೦ತ ನನಗೆ ಗೊಂದಲ ಆಗುವಷ್ಟು ಅವರು ಬಹುಮುಖ ಕ್ರಿಯಾಶಾಲಿ ವ್ಯಕ್ತಿತ್ವದವರು ಆಗಿದ್ದಾರೆ.
ಶಿವಮೊಗ್ಗದಲ್ಲಿ ಇಂತಹ ಮಾನವೀಯ ಗುಣಗಳಿರುವ, ಬಡವರನ್ನ ಶೋಷಿಸದ, wrong diagnose ಮಾಡದ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕ್ರೀಡಾ ಮನೋಭಾವದ ಡಾ.ಪ್ರೀತಂ ಹೆಸರಿನ೦ತೆ ನನಗೆ ಪ್ರೀತಿ ಪಾತ್ರರಾಗಿ ಕಾಣುತ್ತಾರೆ ಅವರ ಸೆಲ್ ನಂಬರ್
+91 94491 38546.
ರಾಜ್ ಕುಮಾರ್ ಡಯೋಗ್ನಿಸಿಸ್
ದುಗಿ೯ಗುಡಿ ಶಿವಮೊಗ್ಗ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment