Skip to main content

Posts

Showing posts with the label My Small stories book in printing

ನಾನು ಬರೆದಿರುವ 29 ಸಣ್ಣ ಕಥೆಗಳ ಸಂಕಲನ ಅಚ್ಚಿನಲ್ಲಿದೆ ಇದಕ್ಕೆ ಮುನ್ನುಡಿ ಬರೆದವರು ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ

ನನ್ನ ಮೊದಲ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ನಿರೀಕ್ಷೆ ಮೀರಿದ ಸದ್ದು ಈಗಲೂ ಅಡಗಿಲ್ಲ.    ನನ್ನ ಇನ್ನೊಂದು ಕಥಾ ಸಂಕಲನ (29 ಕಥೆಗಳಿದೆ)  ಅಚ್ಚಿನಲ್ಲಿದೆ ಈ ಪುಸ್ತಕಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ವಾಟ್ಸಪ್ ನಿಂದ ಪ್ರಿಂಟ್ ತೆಗೆಸಿ, ಸಮಯ ಹೊಂದಿಸಿಕೊಂಡು ಖ್ಯಾತ ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ #ಅರವಿಂದ_ಚೊಕ್ಕಾಡಿಯವರು ಪೂರ್ತಿ ಓದಿ ( ಪೂರ್ಣ ಓದದೆ ಸುಮ್ಮನೆ ಅಭಿಪ್ರಾಯ ಹೇಳುವವರಲ್ಲ) ಮುನ್ನುಡಿ ಬರೆದಿದ್ದಾರೆ.       ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಪುರಸ್ಕಾರ ಬೇರೆ ಇಲ್ಲ,  ಪುಸ್ತಕ ಅಚ್ಚಾಗುವ ಮೊದಲೇ ಮುನ್ನುಡಿ ಓದಿ. #ಅರವಿಂದ_ಚೊಕ್ಕಾಡಿಯವರಿಗೆ_ಕೃತಜ್ಞತೆಗಳೊಂದಿಗೆ ಮುನ್ನುಡಿ ---------------  * ಅರವಿಂದ ಚೊಕ್ಕಾಡಿ ಮಿತ್ರರಾದ ಅರುಣ್ ಪ್ರಸಾದ್ ಅವರು ತಮ್ಮ ಕಥೆಗಳನ್ನು ವಾಟ್ಸಪ್‌ನಲ್ಲಿ ಕಳಿಸಿ "ಎರಡೇ ದಿನಗಳಲ್ಲಿ ಆಗಬೇಕು. ಇದಕ್ಕೆ ಮುನ್ನುಡಿ ಬರೆಯಲು ಸಾಧ್ಯವಾಗಲಾರದು. ಶುಭಾಶಯಗಳ ಎರಡು ಮಾತುಗಳನ್ನಾದರೂ ಬರೆದು ಕಳಿಸಿ" ಎಂದು ಕೇಳಿದ್ದಾರೆ. ಶುಭಾಶಯ, ಹಾರೈಕೆ, ಸಂದೇಶ ಎಲ್ಲ ಕೊಡಲು ನಾನು ಸೂಕ್ತ ವ್ಯಕ್ತಿಯಲ್ಲ. ಆದ್ದರಿಂದ ಕೂಡಲೇ ಕಥೆಗಳನ್ನು ಪ್ರಿಂಟ್ ತೆಗೆಸಿ ಓದಿ ಮುನ್ನುಡಿಯನ್ನೆ ಬರೆಯಲು ಪ್ರಯತ್ನಿಸಿದ್ದೇನೆ. *************** ಇಲ್ಲಿನ ಕಥೆಗಳ ಕೇಂದ್ರ ಗ್ರಾಮ ಭಾರತವೇ. ಈ ' ಗ್ರಾಮ ಭಾರತ' ಎನ್ನುವುದು ಅನೇಕರಿಗೆ ಶಾಂತಿಯ ತೌರೂರು,...