#Hunt_for_Veerappan_Webseries. #ಇಪ್ಪತ್ತು_ದೀರ್ಘ_ವರ್ಷಗಳ_ವೀರಪ್ಪನ್_ಅಟ್ಟಹಾಸ. #ವೀರಪ್ಪನ್_ಅಂತ್ಯದವರೆಗೆ #ಟ್ರೂ_ಕ್ರೈಂ_ಡಾಕ್ಯುಮೆಂಟರಿ_ನೆಟ್_ಪ್ಲಿಕ್ಸ್_ನಲ್ಲಿ_ನೋಡಬಹುದು. ಹೆಚ್ಚು ಕಡಿಮೆ ನಾನು ವೀರಪ್ಪನ್ ಬಗ್ಗೆ ಬರೆದ ಎಲ್ಲಾ ಲೇಖನ ಪುಸ್ತಕಗಳನ್ನು ಓದಿದ್ದೇನೆ. ಶಿವಸುಬ್ರಮಣ್ಯಂ ತೆಗೆದ ವೀರಪ್ಪನ್ ಮೊದಲ ಪೋಟೋಗಳು ಮಾಡಿದ ಸುದ್ದಿ ಆದಿನಗಳಲ್ಲಿ ದೊಡ್ಡ ಸಂಚಲನವೇ ಆಗಿತ್ತು. ಖ್ಯಾತ ವನ್ಯ ಪ್ರಾಣಿಗಳ ಛಾಯಾಗ್ರಾಹಕರಾದ ಕೃಪಕರ ಮತ್ತು ಸೇನಾನಿ ಅಪಹರಣದಿಂದ ಕನ್ನಡದ ಹೆಸರಾಂತ ನಟ ರಾಜ್ ಕುಮಾರ್ ಅಪಹರಣದವರೆಗೆ ವೀರಪ್ಪನ್ ಅಟ್ಟಹಾಸ ಸರ್ಕಾರಗಳಿಗೆ ದೊಡ್ಡ ಸವಾಲು ಆಗಿತ್ತು. ಈವರೆಗಿನ ಎಲ್ಲಾ ಲೇಖನಗಳು ಬಿಡಿ ಬಿಡಿ ಅಧ್ಯಾಯಗಳಾಗಿತ್ತು ಆದರೆ ಹಂಟ್ ಫಾರ್ ವೀರಪ್ಪನ್ ಎಂಬ ವೆಬ್ ಸೀರೀಸ್ ಪೂರ್ಣ ಪ್ರಮಾಣದಲ್ಲಿ ವಿವರಗಳನ್ನು ದಾಖಲೆ ಸಮೇತ ದಾಖಲಿಸಿದೆ. ಇಂಗ್ಲೀಷ್ ತಮಿಳು ಕನ್ನಡದಲ್ಲಿರುವ ವೀರಪ್ಪನ್ ಶಿಕಾರಿಯ ಸತ್ಯ ಕಥೆಯನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ ಇದನ್ನು ನಿರ್ಮಿಸಿದವರು ಅಪೂರ್ವ ಭಕ್ಷಿ . ಇದನ್ನು ದಿನಾಂಕ 4 ಆಗಸ್ಟ್ 2023ರಂದು Netflix ನಲ್ಲಿ ಬಿಡುಗಡೆ ಆಗಿದೆ ಅಸಂಖ್ಯಾತ ವೀಕ್ಷಣೆಯ ದಾಖಲೆ ಮಾಡಿದೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಜೊತೆ ಸಂದರ್ಷನ ಪ್ರಾರಂಭವಾಗಿ ಎಲ್ಲಾ ಘಟನೆಗಳು ಅದರ ಪತ್ರ...