#Hunt_for_Veerappan_Webseries.
#ಇಪ್ಪತ್ತು_ದೀರ್ಘ_ವರ್ಷಗಳ_ವೀರಪ್ಪನ್_ಅಟ್ಟಹಾಸ.
#ವೀರಪ್ಪನ್_ಅಂತ್ಯದವರೆಗೆ
#ಟ್ರೂ_ಕ್ರೈಂ_ಡಾಕ್ಯುಮೆಂಟರಿ_ನೆಟ್_ಪ್ಲಿಕ್ಸ್_ನಲ್ಲಿ_ನೋಡಬಹುದು.
ಹೆಚ್ಚು ಕಡಿಮೆ ನಾನು ವೀರಪ್ಪನ್ ಬಗ್ಗೆ ಬರೆದ ಎಲ್ಲಾ ಲೇಖನ ಪುಸ್ತಕಗಳನ್ನು ಓದಿದ್ದೇನೆ.
ಶಿವಸುಬ್ರಮಣ್ಯಂ ತೆಗೆದ ವೀರಪ್ಪನ್ ಮೊದಲ ಪೋಟೋಗಳು ಮಾಡಿದ ಸುದ್ದಿ ಆದಿನಗಳಲ್ಲಿ ದೊಡ್ಡ ಸಂಚಲನವೇ ಆಗಿತ್ತು.
ಖ್ಯಾತ ವನ್ಯ ಪ್ರಾಣಿಗಳ ಛಾಯಾಗ್ರಾಹಕರಾದ ಕೃಪಕರ ಮತ್ತು ಸೇನಾನಿ ಅಪಹರಣದಿಂದ ಕನ್ನಡದ ಹೆಸರಾಂತ ನಟ ರಾಜ್ ಕುಮಾರ್ ಅಪಹರಣದವರೆಗೆ ವೀರಪ್ಪನ್ ಅಟ್ಟಹಾಸ ಸರ್ಕಾರಗಳಿಗೆ ದೊಡ್ಡ ಸವಾಲು ಆಗಿತ್ತು.
ಈವರೆಗಿನ ಎಲ್ಲಾ ಲೇಖನಗಳು ಬಿಡಿ ಬಿಡಿ ಅಧ್ಯಾಯಗಳಾಗಿತ್ತು ಆದರೆ ಹಂಟ್ ಫಾರ್ ವೀರಪ್ಪನ್ ಎಂಬ ವೆಬ್ ಸೀರೀಸ್ ಪೂರ್ಣ ಪ್ರಮಾಣದಲ್ಲಿ ವಿವರಗಳನ್ನು ದಾಖಲೆ ಸಮೇತ ದಾಖಲಿಸಿದೆ.
ಇಂಗ್ಲೀಷ್ ತಮಿಳು ಕನ್ನಡದಲ್ಲಿರುವ ವೀರಪ್ಪನ್ ಶಿಕಾರಿಯ ಸತ್ಯ ಕಥೆಯನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ ಇದನ್ನು ನಿರ್ಮಿಸಿದವರು ಅಪೂರ್ವ ಭಕ್ಷಿ .
ಇದನ್ನು ದಿನಾಂಕ 4 ಆಗಸ್ಟ್ 2023ರಂದು Netflix ನಲ್ಲಿ ಬಿಡುಗಡೆ ಆಗಿದೆ ಅಸಂಖ್ಯಾತ ವೀಕ್ಷಣೆಯ ದಾಖಲೆ ಮಾಡಿದೆ.
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಜೊತೆ ಸಂದರ್ಷನ ಪ್ರಾರಂಭವಾಗಿ ಎಲ್ಲಾ ಘಟನೆಗಳು ಅದರ ಪತ್ರಿಕಾ ವರದಿ ಅಂದಿನ ಅಧಿಕಾರಿಗಳ ಮತ್ತು ಸ್ಥಳಿಯರ ಸಂದರ್ಶನದ ಜೊತೆ ಸಾಗುತ್ತಾ ಮೂರು ಎಪಿಸೋಡಿನಲ್ಲಿ ವೀರಪ್ಪನ್ ಹತ್ಯೆ ಮತ್ತು ಆತನ ಸಮಾದಿ ತನಕ ಸಾಗುತ್ತದೆ.
ಶಿವಸುಬ್ರಮಣ್ಯ ತೆಗೆದ ವೀರಪ್ಪನ್ ಮತ್ತು ಸಹಚರರ ಫೋಟೋ ಸೆಷನ್ ನಿಂದ ಅವರೆಲ್ಲರ ವಂಶವೃಕ್ಷ ಸಂಗ್ರಹ ಸಾಧ್ಯವಾಯಿತು ಇದರಿಂದ ವೀರಪ್ಪನ್ ಗೆ ಸಹಾಯ ಮಾಡುವವರ ಮಾಹಿತಿ ದೊರೆಯಿತು ಇದು ವೀರಪ್ಪನ್ ಮಾಡಿದ ದೊಡ್ಡ ತಪ್ಪು ಎಂದು ಟೈಗರ್ ಅಶೋಕ್ ಹೇಳುತ್ತಾರೆ.
ಶಂಕರ ಮಹಾದೇವ ಬಿದರಿ ಆತ್ಮ ಚರಿತ್ರೆ ಓದಿದ್ದೇನೆ ಅವರ ಶ್ರಮದಿಂದ ವೀರಪ್ಪನ್ ಗ್ಯಾಂಗ್ ತಲ್ಲಣಿಸಿರುವುದು ಸತ್ಯ ಆದರೆ ಅವರು ಮಾನವ ಹಕ್ಕುಗಳ ಉಲ್ಲಂಘಿಸಿದರಾ? ಎಂಬ ಪ್ರಶ್ನೆಗಳು ಇದೆ ...ಅಂತಿಮವಾಗಿ ಸುಪ್ರಿಂ ಕೋರ್ಟ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ.
ವೀರಪ್ಪನ್ ಅಂತ್ಯಗೊಳಿಸಿದ ತಮಿಳುನಾಡಿನ ಪೋಲಿಸ್ ಅಧಿಕಾರಿ ವಿಜಯ ಕುಮಾರ್ ಅವರ ಆಪರೇಷನ್ ಕುಕೂನ್ ಸತ್ಯವಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಕಾರಣ ವೀರಪ್ಪನ್ ಮತ್ತು ಅವರ ಮೂವರು ಸಹಚರರನ್ನು ಪಾಯಿಂಟ್ ರೇಂಜ್ ನಲ್ಲಿ ಹತ್ಯೆ ಮಾಡಿದ್ದು ಸತ್ತವರ ದೇಹದ ಸಾಕ್ಷಿ ತೋರಿಸುತ್ತೆ ಇದಕ್ಕೆ ಪೋಲಿಸ್ ಅಧಿಕಾರಿ ಸಂದರ್ಶನದಲ್ಲಿ ಅಂತ್ಯದಲ್ಲಿ ಹೇಳುವುದು 3 ಪ್ರಶ್ನೆಗಳಿದೆ ಒ0ದು ವೀರಪ್ಪನ್ ಸತ್ತಿದಾನೋ ಇಲ್ಲವೊ?... ಎರಡನೆಯದ್ದು ಇದನ್ನು ನಂಬುತ್ತೀರೋ ಇಲ್ಲವೋ? .... ಮೂರನೆಯದ್ದು ವೀರಪ್ಪನ್ ಕೊಂದದ್ದು STF ಹೌದೊ ಅಲ್ಲವೋ?.... ಇದರ ಮಧ್ಯ ನೀವು ಏನಾದರೂ ಸೇರಿಸಿಕೊಳ್ಳಿ ಎಂದು ನಗುತ್ತಾರೆ.
ನಿಜಕ್ಕೂ ಇಡೀ ದೇಶಕ್ಕೆ ಮಾತ್ರ ಅಲ್ಲ ವಿಶ್ವದಲ್ಲೇ ವೀರಪ್ಪನ್ ದೊಡ್ಡ ಸಮಸ್ಯೆ ಆಗಿದ್ದನ್ನು ಎಲ್ಲಾ ಹಂತದಲ್ಲಿ ಸರಿಯಾಗಿ ಜೋಡಿಸಿ ಅನಾವಶ್ಯಕವಾಗಿ ಏನನ್ನು ಸುತ್ತಿಸದೆ ಸ್ವೀಟ್ ಅಂಡ್ ಶಾರ್ಟ್ ಆಗಿ 20 ವರ್ಷದ ದೀರ್ಘ ಕಾರ್ಯಚರಣೆಯ #ಹಂಟ್_ಪಾರ್_ವೀರಪ್ಪನ್ ಅತ್ಯುತ್ತಮವಾದ #True_Crime_Documentory ಆಗಿದೆ.
Comments
Post a Comment