Blog number 1716. ಚರ್ಮ ರಕ್ಷಣೆಗೆ ಮಲೆನಾಡು ಗಿಡ್ಡ ಗೋತಳಿ A - 2 ಹಾಲು, ಶುದ್ಧ ಕೊಬ್ಬರಿ ಎಣ್ಣೆ ಮತ್ತು ಸುಗಂದ ತೈಲದಿಂದ ತಯಾರಾದ A - 2 ಮಿಲ್ಕ್ ಸೋಪು ಬಳಕೆ.
#ಮಿಲ್ಕ್_ಸೋಪುಗಳು
#ಅದರಲ್ಲೂ_ದೇಶಿ_ಗೋವಿನ_ಹಾಲಿನ_A2_ಮಿಲ್ಕ್_ಸೋಪುಗಳು
#ನಾನು_ರಾಸಾಯನಿಕ_ಸೋಪಿನಿಂದ_ಮಲೆನಾಡು_ಗಿಡ್ಡ_ತಳಿಯ_ಹಾಲಿನ_ಸೋಪಿಗೆ_ಬದಲಾಗಿದ್ದೇನೆ.
#ಸೌಂದರ್ಯವರ್ದನೆಗಾಗಿ_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.
#ಭಾರತೀಯ_ಆಯುರ್ವೇದದಲ್ಲಿ_ಕ್ಷೀರಾದಾರ_ಚಿಕಿತ್ಸೆ_ಇದೆ.
#ಇತಿಹಾಸದಲ್ಲಿ_ಕ್ಲೀಯೋಪಾತ್ರ_ಇಂಗ್ಲೇಂಡಿನ_ರಾಣಿ_ಎಲಿಜಬೆತ್_ಹಾಲಿನಿಂದ_ಸ್ನಾನ_ಮಾಡುತ್ತಿದ್ದರು.
ನನ್ನ ಬಾಲ್ಯದಲ್ಲಿ ನಮ್ಮ ತಂದೆಯವರು ಆಯ್ಕೆ ಮಾಡಿದ್ದ ಲೈಫ್ ಬಾಯ್ ಸೋಪು ಖಾಯ೦ ಆಗಿತ್ತು ಇದರ ಮಧ್ಯದಲ್ಲಿ ಶಾಲಾ ರಜಾ ದಿನಗಳಲ್ಲಿ ಈಜಾಡುವ ಹಪಾಹಪಿಯಿಂದ ಬಟ್ಟೆ ಸೋಪು ಕಸ್ತೂರಿ ಬಾರ್ ನ ಒ೦ದೆರೆಡು ಗೆರೆ ಮನೆಯಲ್ಲಿ ಗೊತ್ತಾಗದಂತೆ ಕತ್ತರಿಸಿ ಒಯ್ಯುತ್ತಿದ್ದೆ.
ಪ್ರಾಯದಲ್ಲಿ ಹಮಾಮ್ ನಂತರ ಲಕ್ಸ್ ಸೋಪಿಗೆ ಅಲ್ಲಿಂದ ಜಾಹಿರಾತುಗಳಿಂದ ಪ್ರೇರಣೆಯಿಂದ ಲಿರಿಲ್ ನಂತರ ಮೈ ತುರಿಕೆ ಉಪಶಮನಕ್ಕಾಗಿ ಚಂದ್ರಿಕಾ ನಂತರ ಸರಿಯಾದ ಬುದ್ಧಿ ಸ್ಥಿಮಿತಕ್ಕೆ ಬಂದಂದಿನಿಂದ ನಮ್ಮ ರಾಜ್ಯದ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ನಿಂತಿದೆ.
ಮೊನ್ನೆ ಗೆಳೆಯರು ಅವರ ಸಂಸ್ಥೆಯ ಮಲೆನಾಡು ಗಿಡ್ದ ತಳಿಯ ಗೋವಿನ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪು ಸ್ಯಾಂಪಲ್ ಕೊಟ್ಟಿದ್ದನ್ನು ಬಳಸಲು ಶುರು ಮಾಡಿದ ಮೇಲೆ ಮೈಸೂರು ಸ್ಯಾಂಡಲ್ ನಿಂದ A - 2 ಮಿಲ್ಕ್ ಸೋಪಿಗೆ ಬದಲಾಗುವ ಮನಸಾಗಿದೆ.
ಕಾರಣ ನಾವು ಬಳಸುವ ಸೋಪು ಗಳಲ್ಲಿ ವಿಪರೀತ ರಾಸಾಯನಿಕ ಬಳಕೆ ಮಾಡುತ್ತಾರೆ ಇದು ಚರ್ಮಕ್ಕೂ ಅಪಾಯ ಮತ್ತು ತಲೆ ಕೂದಲು ಉದುರಿ ಬೋಳಾಗಿಸಲು ಕಾರಣ ಆದ್ದರಿಂದ ರಾಸಾಯನಿಕ ಬಳಕೆ ಇಲ್ಲದ ದೇಶಿ ಗೋವಿನ ಹಾಲು ಮತ್ತು ಶುದ್ಧ ಕೊಬ್ಬರಿ ಎಣ್ಣೆಯಿಂದ ತಯಾರಿಸುವ A - 2 ಸೋಪು ಅತ್ಯುತ್ತಮ.
ಉಡುಪಿ ಜಿಲ್ಲೆಯ ತ್ರಿಮದುರ A - 2 ಮಿಲ್ಕ್ ಸೋಪು ಬೇಕಾದವರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆರ್ಡರ್ ಮಾಡಬಹುದು https://www.olufresh.com/product/desi-cow-milk-soap-a2-cow-milk-soap-100-grams/
ಇತಿಹಾಸದಲ್ಲಿ ದಾಖಲಾಗಿರುವ ಈಜಿಪ್ಟನ ವಿಶ್ವ ಸುಂದರಿ ಕ್ಲಿಯೋಪಾತ್ರ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಇದರಿಂದ ಇವರ ಸೌಂದರ್ಯವರ್ದನೆ ಹೆಚ್ಚಾಯಿತು ಎ೦ಬ ಲೇಖನಗಳಿದೆ ಇದೇ ರೀತಿ ಬ್ರಿಟನ್ ರಾಣಿ ಎಲಿಜಾಬೆತ್ ಹಾಲಿನಿಂದ ಸ್ನಾನ ಮಾಡುತ್ತಿದ್ದರು.
1800 ರಲ್ಲಿ ಅಮೇರಿಕಾದಲ್ಲಿ ಹಾಲಿನಿಂದ ಸ್ನಾನ ಹೆಚ್ಚು ಪ್ರಚಾರದಲ್ಲಿತ್ತು, ಭಾರತೀಯ ಆಯುರ್ವೇದದಲ್ಲಿ ಕ್ಷೀರಾದಾರ ಎಂಬ ಹಾಲಿನ ಸ್ನಾನದ ಚಿಕಿತ್ಸೆ ಇದೆ.
ಆದರೆ ವೈಜ್ಞಾನಿಕವಾಗಿ ಹಾಲಿನ ಸ್ನಾನದ ಲಾಭಗಳ ಬಗ್ಗೆ ಹೆಚ್ಚಿನ ಸಬೂತು ಸಿಕ್ಕಿಲ್ಲವಾದರೂ ಹಾಲಿನಲ್ಲಿರುವ ವಿಟಮಿನ್- ಮಿನರಲ್ - ಲಾಕ್ಟಿಕ್ ಆಸಿಡ್ ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ಹಿಡಿದಿಡುವ ಪ್ರೋಟಿನ್ ಕರಗಿಸುತ್ತದೆ ಎನ್ನುವುದು ದೇಹದ ಚರ್ಮ ಸೌಂದರ್ಯಕ್ಕೆ ಹಾಲಿನ ಸ್ನಾನ ಉಪಯುಕ್ತವಾಗಿದೆ.
ಹಾಲಿನ ಜೊತೆ ಜೇನುತುಪ್ಪ - ಗುಲಾಬಿ ಹೂವು - ಸಾರಭೂತ ತೈಲಗಳ ಪರಿಮಳ ಸೇರಿಸಿ ಹಾಲಿನ ಮಿಲ್ಕ್ ಬಾತ್ ಮಾಡುತ್ತಿದ್ದ ಕಾಲ ಬದಲಾಗಿ ಈಗಿನ ಕಾಲದಲ್ಲಿ ಇವೆಲ್ಲ ಸೇರಿಸಿದ ಮಿಲ್ಕ್ ಸೋಪು ಬಳಕೆ ಜಾಸ್ತಿ ಆಗಿದೆ.
Comments
Post a Comment