#ರಾಣಿ_ಚಂಪಕಳ_ಆತ್ಮಕ್ಕೆ_ಮುಕ್ತಿ_ದೊರೆಕಿಲ್ಲ.
#ನಾನೂರನೆ_ವರ್ಷಾಚಾರಣೆ_2025
#ಎಲ್ಲಿನ_ಆನಂದಪುರಂ_ಎಲ್ಲಿನ_ಲಂಡನ್.
ಲಂಡನ್ ನಲ್ಲಿ ನೆಲೆಸಿರುವ #ಕುಮಾರ್_ಕುಂಟಿಕಾನಮಠ ಕನ್ನಡಾಭಿಮಾನಿ ಲಂಡನ್ ನಲ್ಲಿ ನಡೆಯುವ ಎಲ್ಲಾ ಕನ್ನಡ ಪರ ಕಾಯ೯ಕ್ರಮದಲ್ಲಿ ಮುಂದಾಳು, ಅಲ್ಲಿಗೆ ಹೋಗುವ ಕನ್ನಡಿಗ ಸೆಲೆಬ್ರಿಟಿಗಳಿಗೆ ಅತಿಥೇಯರು.
ಇವರ ತಂದೆ ಬರೆದ ರಾಮಕಥಾ ಮಂಜರಿ ಮತ್ತು ಕೃಷ್ಣ ಕಥಾ ಮಂಜರಿ ಎಂಬ ಎರೆಡು ಸುಂದರ ಗ್ರಂಥಗಳನ್ನು ಅಚ್ಚು ಮಾಡಿಸಿ ಪ್ರತಿಯೊಬ್ಬ ಕನ್ನಡಿಗರೂ ಮನೆಯಲಿ ಓದಲು ಇಡುವಂತ ಅವಕಾಶ ಮಾಡಿದ್ದಾರೆ.
ಜನಪರವಾಗಿರುವ ಇವರು ನಾನು ಬರೆದು ಪ್ರಕಟಿಸಿದ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ "ಬೆಸ್ತರ ರಾಣಿ ಚಂಪಕಾ" ಪುಸ್ತಕ ಓದಿ ಅಭಿಪ್ರಾಯ ತಿಳಿಸಿದ್ದಲ್ಲದೆ ಒಂದಿಷ್ಟು ಪುಸ್ತಕ ಲಂಡನ್ ಗೂ ಒಯ್ದು ಆಸಕ್ತ ಓದುಗರಿಗೆ ನೀಡುತ್ತಿದ್ದಾರೆ.
ಇವತ್ತು ಲಂಡನ್ ವಾಸಿ ಕಂಪ್ಯೂಟರ್ ಇಂಜಿನಿಯರ್ ಮೂಲತಃ ಉಡುಪಿ ಜಿಲ್ಲೆಯ ಶಂಕರನಾರಾಯಣದ ಶ್ರೀಧರ ಭಟ್ಟರಿಗೆ ನನ್ನ ಪುಸ್ತಕ ನೀಡಿದ ಪೋಟೋ ಕಳಿಸಿದ್ದಾರೆ, ಕುಮಾರ್ ಕುಂಟಿಕಾನಮಠರಿಗೆ ಧನ್ಯವಾದ ಅರ್ಪಿಸುತ್ತೇನೆ.
Comments
Post a Comment