Blog number 1723. ಉಪಹಾರ ಗೃಹಗಳ ಮಾಲಿಕರು ಶುಚಿ-ರುಚಿ - ಸಮಯ ಪಾಲನೆಗೆ ಸ್ವತಃ ಮುಂದೆ ಬರಬೇಕು ಮತ್ತು ಕಾಲಕ್ಕೆ ತಕ್ಕಂತೆ ಹೊಸತನಕ್ಕೆ ಬದಲಾಗಬೇಕು (update)
#ಉಪಹಾರ_ಗೃಹದಲ್ಲಿ_ಶುಚಿ_ರುಚಿ_ಸಮಯಪಾಲನೆ
#ನನ್ನ_ಸ್ವಂತ_ಅನುಭವ
#ಹೋಟೆಲ್_ಮಾಲಿಕರೇ_ಹೆಚ್ಚು_ಅಪ್_ಡೇಟ್_ಆಗಬೇಕು.
Mallika Veg
https://maps.app.goo.gl/NfwTiaPfy1TBkCK56
ಬೆಳಿಗ್ಗೆ 7ಕ್ಕೆಲ್ಲ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿ ಬಾತ್, ಪಲಾವ್, ಬನ್ಸ್, ಬಿಸಿಬೇಳೆಬಾತ್, ಪಕೋಡ ಮತ್ತು ಹಲಸಿನ ಎಲೆ ಕೊಟ್ಟೆ ಕಡಬು ಗ್ರಾಹಕರಿಗೆ ತಯಾರಿರುತ್ತದೆ.
ಇದಕ್ಕಾಗಿ ಸಿಬ್ಬಂದಿಗಳು ಬೆಳಿಗ್ಗೆ 4 ರಿಂದಲೇ ತಯಾರಿ ನಡೆಸಬೇಕು, ಬೆಳಿಗ್ಗೆ 9ರಿಂದ ಎಲ್ಲಾ ರೀತಿಯ ದೋಸೆಗಳು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಮದ್ಯಾಹ್ನ ಊಟ ತಯಾರಿರುತ್ತದೆ, ಜ್ಯೂಸ್ ಗಳು ಲಭ್ಯವಿದೆ.
ದಕ್ಷಿಣ ಭಾರತದ ಸಂಪ್ರದಾಯಿಕ ಶೈಲಿ ಅಡುಗೆ ನಿಜಕ್ಕೂ ಆರೋಗ್ಯಕರ ಆದರೆ ಬೆಳ್ಳಂಬೆಳಗೆ ಎದ್ದು ಅಡುಗೆ ಮಾಡುವುದಕ್ಕಿಂತ ತಡವಾಗಿ ಬೆಳಿಗ್ಗೆ 11ಕ್ಕೆ ಅಡುಗೆ ಪ್ರಾರಂಭದ ಉತ್ತರ ಬಾರತೀಯ ಅಡುಗೆ ಮತ್ತು ಮಾಂಸ ಹಾರ ಅಡುಗೆ ಕಲಿಯುವವರೇ ಹೆಚ್ಚು ಇದರಿಂದ ದಕ್ಷಿಣ ಭಾರತೀಯ ಅಡುಗೆ ಭಟ್ಟರ ಕೊರತೆ ಇದೆ.
ರುಚಿ ಎಷ್ಟು ಮುಖ್ಯವೊ ಆಹಾರ ಉತ್ಪನ್ನದಲ್ಲಿ ಶುಚಿಯೂ ಅಷ್ಟೆ ಮುಖ್ಯ.
ಗ್ರಾಹಕರ ಕೈ ತೊಳೆಯುವ ಸಿಂಕ್ ನಿಂದ ಪ್ರಾರಂಭ ಆಗಿ ಪೀಠೋಪಕರಣ ಸ್ವಚ್ಚತೆ, ಶೌಚಾಲಯ ಸ್ವಚ್ಚತೆ ಕೂಡ ಅತ್ಯಂತ ಮುಖ್ಯ ಭಾಗ.
ಈಗಲೂ ಅನೇಕ ಪ್ರಸಿದ್ದ ಹೋಟೆಲ್ ಗಳಲ್ಲಿ ಗುಣಮಟ್ಟದ ಲಿಕ್ವಿಡ್ ಸೋಪು ಇಡುವುದಿಲ್ಲ ಬಟ್ಟೆ ತೊಳೆಯುವ ಒಂದೆರೆಡು ಗೆರೆ ಸೋಪೋ ಇತ್ಯಾದಿ ಇಡುತ್ತಾರೆ ಇದು ಇನ್ನೊಬ್ಬರ ಕೈ ಶುಚಿಗೆ ಬಳಸಿದ ಸೋಪಾದ್ದರಿಂದ ಯಾವುದೇ ಗ್ರಾಹಕರಿಗೂ ಅಸಹ್ಯ ಅನ್ನಿಸುತ್ತದೆ, ಇದಕ್ಕೆ ವಾದ ಮಾಡುವ ಮಾಲಿಕರು ಉಳಿತಾಯದ ಕಥೆ ಕಟ್ಟುತ್ತಾರೆ.
ಮಹಿಳಾ ಶೌಚಾಲಯಕ್ಕಿಂತ ಪುರುಷರು ಬಳಸುವ ಶೌಚಾಲಯಗಳ ಸ್ವಚ್ಚತೆ ತುಂಬಾ ಸವಾಲಿನದ್ದು, ಮೂತ್ರ ಮಾಡಿ ನೀರು ಹಾಕದೆ ಅದರಲ್ಲೇ ಗುಟ್ಕಾ ಉಗಿದು, ಖಾಲಿ ಗುಟ್ಕಾ ಪ್ಯಾಕೀಟ್ ಕೂಡ ಅಲ್ಲೇ ಹಾಕುತ್ತಾರೆ. ನನ್ನ 9 ವರ್ಷದ ಹೋಟೆಲ್ ಅನುಭವದಲ್ಲಿ 4 ಬಾರಿ ಶೌಚಾಲಯ ಆಧುನಿಕರಣ ಮಾಡಿದ್ದೇನೆ, ಈಗ ಸೆನ್ಸಾರ್ ಅಳವಡಿಸಿದ ಮೂತ್ರಿಗಳನ್ನು ಅಳವಡಿಸಿದೆ.
ಪ್ರತಿ ನಿತ್ಯ ಗುಣಮಟ್ಟ ಪರೀಕ್ಷೆಯಲ್ಲಿ ತಯಾರಿಸಿದ ಆಹಾರ ಉತ್ತೀರ್ಣರಾಗಲು ತಂದ ಇವತ್ತಿನ ಉಪಹಾರದ ಟ್ರೇ ಚಿತ್ರ ಇಲ್ಲಿದೆ.
Comments
Post a Comment