#ಕಡ_ಕ್ಕೆಬಳೆ_ಎಂಬ_ಬ್ರೇಸಲೇಟ್_ವ್ಯಾಮೋಹ
#ಚಲನ_ಚಿತ್ರ_ನಟ_ವಿಷ್ಣುವರ್ದನ್_ಪ್ರಭಾವ
#ಅನೇಕ_ರೀತಿಯ_ಕಡ_ಧರಿಸಿದ್ದೆ
#ಅಮೃತಸರದಿಂದ_ಕೆಲವು_ತಂದಿದ್ದೆ
#ಕಳೆದ_ಎಂಟು_ವರ್ಷದಿಂದ_ದರಿಸಿರುವ_ಈ_ಬಳೆ
#ಕೆನಡಾದ_ಟ್ರಾನ್ಸ್_ಪೋರ್ಟ್_ಮಾಲಿಕ_ನೀಡಿದ_ಉಡುಗೊರೆ.
ಖ್ಯಾತ ಚಲನ ಚಿತ್ರ ನಟ ವಿಷ್ಣುವರ್ದನ್ ಧರಿಸುತ್ತಿದ್ದ ಉಕ್ಕಿನ ಕೈ ಬಳೆ ನನಗೆ ಕೈ ಬಳೆ ದರಿಸಲು ಪ್ರೇರಣೆ ಆಗಿತ್ತು.
1998 ರಿಂದ ಆಗಾಗ್ಗೆ ಕೈ ಬಳೆ ಧರಿಸುತ್ತಿದ್ದೆ ನಂತರ 2007ರಲ್ಲಿ ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯಕ್ಕೆ ಸಾಗರದ ಹಾಲಿ ಸಿಗಂದೂರು ಪ್ಯೂಯಲ್ ಸ್ಟೇಷನ್ ಮಾಲಿಕರಾದ ನಾರಾಯಣರಾವ್ ಜೊತೆ ಹೋಗಿದ್ದಾಗ ಕೆಲ ಬಳೆಗಳನ್ನು ದೇವಾಲಯದ ಸಂಕೀರ್ಣದಲ್ಲೇ ಖರೀದಿಸಿ ತಂದಿದ್ದೆ.
ಪ್ರತಿಯೊಬ್ಬ ಸಿಖ್ ದರ್ಮಿಯ ಪುರುಷರು ಈ ಬಳೆ ಕಡ್ಡಾಯವಾಗಿ ಧರಿಸುತ್ತಾರೆ ಇದು ಅವರ ದರ್ಮ ಮತ್ತು ದೇವರ ಸಂಬಂದ ದೃಡೀಕರಿಸುವ ಸಂಕೇತ.
ಅವರ ಗುರು ಗೋವಿಂದ್ ಸಿಂಗ್ ರು ಹೇಳಿರು ಪಂಚ "ಕ" ಕಾರಗಳಾದ ಕೇಶ - ಕಂಗಾ-ಕರ - ಕಚೇರ- ಕಿರ್ಪಾಣ ಪ್ರತಿಯೊಬ್ಬ ಸಿಖ್ ಧರ್ಮ ಅನುಯಾಯಿ ಪುರುಷರು ಪಾಲಿಸುತ್ತಾರೆ.
#ಕೇಶ.. ಇದು ಸಿಖ್ ಧರ್ಮ ಅನುಯಾಯಿ ತನ್ನ ತಲೆಗೂದಲು ಗಡ್ಡ ಯಾವ ಕಾರಣಕ್ಕೂ ಕ್ಷೌರ ಮಾಡಬಾರದು.
#ಕ೦ಗಾ... ನೀಳವಾದ ಕೇಶ ಬಾಚಲು ಸದಾ ಜೊತೆಗೆ ಇಟ್ಟು ಕೊಳ್ಳುವ ಮರದ ಬಾಚಣಿಗೆ.
#ಕರ... ತನ್ನ ಬಲಗೈಯಲ್ಲಿ ಸ್ಟೀಲ್ ಅಥವ ಕ್ಯಾಸ್ಟ್ ಐರನ್ ನ ಮಳೆ ದರಿಸಬೇಕು.
#ಕಚೇರ... ನಿರ್ಧಿಷ್ಟ ಶೈಲಿಯ ಪುರುಷ ಒಳ ಉಡುಪು.
#ಕಿರ್ಪಾಣ... ಕುರುಪಿ ಆಕಾರದ ಲೋಹದ ಕತ್ತಿ ಕಡ್ಡಾಯ ದಾರಣೆ.
ಬೇರೆ ದರ್ಮಿಯರು ಕರ ಎಂಬ ಕಡ ಧರಿಸುತ್ತಾರೆ ಉತ್ತರ ಭಾರತೀಯ ಹಿಂದೂ ದರ್ಮದ ಅನೇಕ ಜಾತಿಗಳಲ್ಲಿ ಈ ಕಡದಾರಣೆ ಧಾರ್ಮಿಕ ಕಡ್ಡಾಯ ಇಲ್ಲದಿದ್ದರು ಶೋಕಿಗಾಗಿ ಧರಿಸುತ್ತಾರೆ.
ಮುಸ್ಲಿಂರಲ್ಲಿ ಕಡ ಅಥವ ಕೈ ಬಳೆ ಪುರುಷರು ದರಿಸುವುದಿಲ್ಲ ಅವರಿಗೆ ಇದು ಹರಾಮ್ ಆಗಿದೆ.
ಈಗ ನಾನು 2015 ರಿಂದ ದರಿಸುತ್ತಿರುವ ಕರ (ಕಡ) ಕೆನಡಾದ ಪ್ರಖ್ಯಾತ ಟ್ರಾನ್ಸ್ ಪೋರ್ಟ್ ಮಾಲಿಕ ಸರ್ದಾರ್ಜಿ ನನಗೆ ಉಡುಗೊರೆ ಆಗಿ ನೀಡಿದ್ದು ಅವರಿಗೆ ನನ್ನಿಂದ ಸಣ್ಣ ಸಹಾಯ ಆಗಿತ್ತು ಅದಕ್ಕಾಗಿ ಅವರು ನೀಡಿದ ನೆನಪಿನ ಕಾಣಿಕೆ ಈಗ 8 ವರ್ಷದಿಂದ ನನ್ನ ಕೈಯಲ್ಲಿದೆ.
Comments
Post a Comment