Blog number 1715. ಕರಾವಳಿಯ ಸ್ವಾದಿಷ್ಟ ವಾಲೆ ಬೆಲ್ಲದ ಪ್ಯಾಕಿನಲ್ಲಿ ಕಬ್ಬಿನ ಆಲೇಮನೆ ಬೆಲ್ಲ ಮಾರಾಟ ಮಾಡುವ ದುರಾಸೆಯ ವ್ಯಾಪಾರ.
#ತಾಳೆಮರದ_ನೀರಾದಿಂದ_ತಯಾರಾಗುವ_ಸ್ವಾದಿಷ್ಟ_ಬೆಲ್ಲ
#ಇದನ್ನು_ತಾಳೆಮರದ_ಗರಿಯಿಂದ_ಸುತ್ತುತ್ತಾರೆ
#ಇದಕ್ಕೆ_ವಾಲೆ_ಬೆಲ್ಲ_ಎ೦ದು_ಕರೆಯುತ್ತಾರೆ
#ಈಗ_ಕಬ್ಬಿನ_ಬೆಲ್ಲವನ್ನು_ವಾಲೆ_ಬೆಲ್ಲದ_ರೀತಿ_ಪ್ಯಾಕಿಂಗ್_ಮಾಡಿ_ಮಾರಾಟ_ಮಾಡುತ್ತಾರೆ.
#ಒರಿಜನಲ್_ವಾಲೆ_ಬೆಲ್ಲದ_ಬೆಲೆಯಲ್ಲಿ_ಮಾರಾಟ.
https://youtu.be/yqUH45_bTDE?feature=shared
ತಾಳೆ ಮರದಿಂದ ತೆಗೆದ ನೀರಾ ಕುದಿಸಿ ಅದರಿಂದ ತೆಗೆಯುವ ಬೆಲ್ಲ ತಾಳೆ ಮರದ ಗರಿಯಿಂದ ವೃತ್ತಾಕಾರವಾಗಿ ಅಚ್ಚು ಬೆಲ್ಲ ತಯಾರಿಸುತ್ತಾರೆ ಇದಕ್ಕೆ ವಾಲೆ ಬೆಲ್ಲ ಅಂತ ಹೆಸರು ಇಂತಹ ಹತ್ತಿಪ್ಪತ್ತು ಚಕ್ರಾಕಾರದ ಬೆಲ್ಲದ ಅಚ್ಚು ಒಂದರ ಮೇಲೆ ಒಂದು ಜೋಡಿಸಿ ಅದನ್ನು ತಾಳೆಗರಿಯ ಕೊಟ್ಟೆ (ಪೊಟ್ಟಣ) ಯಲ್ಲಿ ಕಟ್ಟಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ.
ಈ ವಾಲೆ ಬೆಲ್ಲದ ಬಣ್ಣ ಕಪ್ಪು ಇದರ ರುಚಿ ಮತ್ತು ಘಮ ವಿಶಿಷ್ಟವಾಗಿರುತ್ತದೆ ಇತ್ತೀಚೆಗೆ ತಾಳೆ ಮರದ ನೀರಾ ತೆಗೆದು ಬೆಲ್ಲ ಮಾಡುವ ಕುಶಲ ಕರ್ಮಿಗಳು ತುಂಬಾ ಕಡಿಮೆ ಮತ್ತು ಈ ಬೆಲ್ಲದ ಉತ್ಪಾದನಾ ವೆಚ್ಚ ತುಂಬಾ ಹೆಚ್ಚಾದ್ದರಿಂದ ವಾಲೆ ಬೆಲ್ಲ ಕೂಡ ಅಪರೂಪವಾಗಿದೆ.
ಮೊನ್ನೆ ಕುಂದಾಪುರಕ್ಕೆ ಹೋಗಿದ್ದ ನನ್ನ ಅಣ್ಣನಿಗೆ ವಾಲೆ ಬೆಲ್ಲ ತರಲು ನೆನಪು ಮಾಡಿದ್ದೆ, ಒಂದು ದೊಡ್ಡ ಗಾತ್ರದ ತಾಳೆ ಮರದ ಗರಿಯಲ್ಲಿ ಮಜಬೂತಾಗಿ ಕಟ್ಟಿದ ವಾಲೆ ಬೆಲ್ಲದ ಕೊಟ್ಟೆ ತಂದು ಕೊಟ್ಟಿದ್ದರು.
ಇವತ್ತು ಅತ್ಯಾಸೆಯಿಂದ ತೆಗೆದು ತಿಂದಾಗ ಗೊತ್ತಾಗಿದ್ದು ಇದ್ದು ತಾಳೆ ಮರದ ನೀರಾದ ವಾಲೆ ಬೆಲ್ಲ ಅಂತ.
ವಾಲೆ ಬೆಲ್ಲದ ಆಕೃತಿಯಲ್ಲಿ ತಯಾರಿಸಿ ತಾಳೆ ಮರದ ಗರಿಯ ಕೊಟ್ಟೆಯಲ್ಲಿ ನಮ್ಮ ಕಬ್ಬಿನಾಲೆಯ ಬೆಲ್ಲದ ಅಚ್ಚು ವಾಲೆ ಬೆಲ್ಲ ಅಂತ ವಾಲೆ ಬೆಲ್ಲದ ಬೆಲೆಯಲ್ಲಿ ಗರಿಷ್ಟ ಲಾಭ ಮಾಡುವ ದುರಾಸೆಯ ಜನರಿಂದ ಮೋಸ ಹೋಗಿದ್ದೆ.
ಹಾಗಾದರೆ ತಾಳೆ ಮರದ ಬೆಲ್ಲದ ಯುಗ ಮುಗಿಯಿತಾ?... ಬಹುಶಃ ನಮ್ಮ ಕರಾವಳಿಯ ವಾಲೆ ಬೆಲ್ಲದ ಲಭ್ಯತೆ ಕಡಿಮೆ ಆಗಲಿದೆ ಆದರೆ ಪಶ್ಚಿಮ ಬಂಗಾಳದಲ್ಲಿ ತಾಳೆ ಮರದಿಂದ ತಯಾರಿಸಿದ ಬೆಲ್ಲ ಪೂಜೆಗೆ ಕಡ್ಡಾಯ ಆದ್ದರಿಂದ ಅಲ್ಲಿ ವಾಲೆ ಬೆಲ್ಲ ನಿರಂತರವಾಗಿ ತಯಾರಾಗುತ್ತಿದೆ ಆದರೆ ಈ ರೀತಿಯ ಚಕ್ರಾಕಾರದ ವಾಲೆ ಗರಿ ಅಂಟಿಸಿದ ವಾಲೆ ಬೆಲ್ಲ ಅಲ್ಲಿ ಮಾಡುವುದಿಲ್ಲ ಚೌಕಾಕಾರದ ತಾಳೆ ಬೆಲ್ಲದ ಅಚ್ಚು ಕೆಜಿ ಲೆಕ್ಕದಲ್ಲಿ ಅಮೇಜಾನ್ ನಲ್ಲೂ ಲಭ್ಯವಿದೆ.
Comments
Post a Comment