Skip to main content

Blog number 1700. ದೇಸಿ ಬರ್ಗರ್ ಮಲೆನಾಡಿನ ಪತ್ರೋಡೆ ರೆಸಿಪಿ.

https://youtu.be/DYjKTGe-pkA

#ದೇಸಿ_ಬಗ೯ರ್_ಪತ್ರೋಡೆ 

#ಮರ_ಕೆಸದ_ಎಲೆ_ಪತ್ರೋಡೆ

#ಸಾವಯವ_ಕೆಸದ_ಎಲೆಗಳು

#ರುಚಿಕರ_ಆರೋಗ್ಯಕರ_ತಿನಿಸು

#ಮು೦ಗಾರು_ನಂತರ_ಮರ_ಕೆಸ_ಅಪರೂಪ.


  ವಿವಿದ ಕೆಸುವಿನ ಎಲೆಯಿಂದ ಪತ್ರೋಡೆ ತಯಾರಿಸ ಬಹುದಾದರೂ ಮರದ ಮೇಲೆ ಪರಾವಲಂಬಿಯಾಗಿ ಬೆಳೆಯುವ (ಆರ್ಕಿಡ್ ರೀತಿ ) ಮರ ಕೆಸುವಿನ ಎಲೆಯಲ್ಲಿ ತಯಾರಿಸುವ ಪತ್ರೋಡೆಯ ರುಚಿ ಘಮ ವಿಶಿಷ್ಟವಾಗಿರುತ್ತದೆ. 
  ಪತ್ರೋಡೆ ತಯಾರಿಸುವುದು ಸುಲಭ ಮಸಾಲೆ ಹಿಟ್ಟು ತಯಾರಿಸಿಕೊಂಡು ಕೆಸುವಿನ ಎಲೆಗೆ ಸವರುವುದು ಅದರ ಮೇಲೆ ಇನ್ನೊಂದ ಕೆಸುವಿನ ಎಲೆ... ಒಟ್ಟು ಐದು ಎಲೆಯ ಪದರ ಮಾಡಿ ಅದನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ ನಂತರ ಕಾವಲಿಯಲ್ಲಿ ಹುರಿದು ಬಿಸಿ ಬಿಸಿಯಾಗಿ ತಿನ್ನಬೇಕು.
  ಈ ಎಲೆಗಳು ಯಾವುದೇ ರಾಸಾಯನಿಕ ಗೊಬ್ಬರ ಅಥವ ಕೀಟನಾಶಕ ತಾಗದ ಶುದ್ಧ ಸಾವಯವ ಇದಕ್ಕೆ ಬಳಸುವ ಮಸಾಲೆ ಕೂಡ ಆದ್ದರಿಂದ ಇದು ಶುದ್ದ ಸಾವಯುವ ದೇಶಿ ಬರ್ಗರ್ ಎನ್ನಬಹುದು.
   50 ಮರ ಕೆಸುವಿನ ಎಲೆಯಲ್ಲಿ 10 ಪತ್ರೋಡೆ ತಯಾರಿಸ ಬಹುದು, ಪ್ರತಿ ಪತ್ರೋಡೆ 3 ಭಾಗವಾಗಿ ಕತ್ತರಿಸಬಹುದು.

  #ಮರ_ಕೆಸುವಿನ_ರೆಸಿಪಿ.

1.ಮರ ಕೆಸುವಿನ ಎಲೆ 50.
2. ಅಕ್ಕಿ 2.5 ಕಪ್.
3. ಕಡಲೆಬೇಳೆ ಅರ್ಧ ಕಪ್ 
4. ತೊಗರಿ ಬೇಳೆ ಕಾಲು ಕಪ್
5 . ಉದ್ದಿನ ಬೇಳೆ ಅರ್ಧ ಕಪ್,
6. ಹೆಸರು ಬೇಳೆ 2 ಟೇಬಲ್ ಚಮಚ.
7. ಕಾಳು ಮೆಣಸು 2 ಟೇಬಲ್ ಚಮಚ.
8. ತೆಂಗಿನ ಕಾಯಿ ತುರಿ ಅರ್ಧ ಕಾಯಿ.
9.ಓಮ ಒಂದೂವರೆ ಟೀ ಚಮಚ.
10. ಇಂಗು ಅರ್ಧ ಟೀ ಚಮಚ .
11. ದ್ಯಾವನೂರು ಒಣ ಮೆಣಸು 60 
12. ಹುಳಿ ಒಂದು ಕಿತ್ತಳೆ ಹಣ್ಣಿನ ಗಾತ್ರ.
13. ಬೆಳ್ಳುಳ್ಳಿ ಎರೆಡು.
14 . ಹುರಿಯಲು ಕೊಬ್ಬರಿ ಎಣ್ಣೆ.
15. ಕೊತ್ತುಂಬರಿ 4 ಟೇಬಲ್ ಚಮಚ
16, ಜೀರಿಗೆ 2 ಟೇಬಲ್ ಚಮಚ.
17. ಮೆಂತೆ ಅರ್ಧ ಟೀ ಚಮಚ.
18, ಬೆಲ್ಲ ಒಂದು ಟೀ ಚಮಚ.
19. ಅರಿಶಿಣ ಪುಡಿ,
20 ರುಚಿಗೆ ತಕ್ಕಷ್ಟು ಉಪ್ಪು.

#ಮಾಡುವ_ವಿಧಾನ
  
ಅಕ್ಕಿ ನಾಲ್ಕು ಗಂಟೆ ನೆನೆಸಿ ಅದಕ್ಕೆ ತೆಂಗಿನ ಕಾಯಿ ಹುಳಿ ಅರಿಶಿಣ ಬೆಲ್ಲ ಉಪ್ಪು ಸೇರಿಸುವುದು ಮತ್ತು ಪ್ರತ್ಯೇಕವಾಗಿ ಉಳಿದ ಎಲ್ಲಾ ಪದಾರ್ಥಗಳನ್ನು ಹುರಿದು ಸೇರಿಸಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಿ ಇದನ್ನ ಮರ ಕೆಸುವಿನ 5 ಎಲೆಗಳಿಗೆ ಪದರವಾಗಿ ಸವರಿ ನಂತರ ರೋಲ್ ಮಾಡಿ ಹಬೆ ಬರುವ ಇಡ್ಲಿ ಪಾತ್ರೆಯಲ್ಲಿ ಬಾಳೆ ಎಲೆ ಹರಡಿ ಅದರ ಮೇಲೆ ಪತ್ರೋಡೆ ರೋಲ್ ಮೀಡಿಯಂ ಉರಿಯಲ್ಲಿ  40 ನಿಮಿಷ ಬೇಯಿಸಿ ನಂತರ ಸ್ವಲ್ಪ ತಣ್ಣಗಾದ ಮೇಲೆ ರೋಲ್ ಗಳನ್ನು ನಿಮಗಿಷ್ಟದ ಅಳತೆಗೆ ಕತ್ತರಿಸಿ ಕಾವಲಿಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಗರಿ ಗರಿಯಾಗಿ ಹುರಿದರೆ ಪತ್ರೋಡೆ ಸವಿ ಸವಿಯಾಗಿ ತಿನ್ನಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...