Blog 1705. ಸರ್ವಜ್ಞನ ಜನ್ಮಸ್ಥಳ ಶಿಕಾರಿಪುರದಿಂದ 18 ಕಿ.ಮಿ. ದೂರದ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಮಾಸೂರು ಈಗ ಅದು ಸರ್ವಜ್ಞನ ಮಾಸೂರು.
#ಎಲ್ಲವನ್ನು_ಬಲ್ಲವನೆ_ಸರ್ವಜ್ಞ.
#ವಾಸ್ತವವಾದಿ_ತತ್ವಜ್ಞಾನಿ_ವಿರಾಗಿ_ಕವಿ
#ಸರ್ವಜ್ಞರ_ಹುಟ್ಟೂರು_ಮಾಸೂರು
#ಏಳು_ಸಾವಿರ_ವಚನಗಳು_ಲಭ್ಯ.
#ಶಿವಮೊಗ್ಗ_ಜಿಲ್ಲೆಯಿಂದ_ಮಾಸೂರು_18_ಕಿಮಿ.
https://youtu.be/j-qxPrOqlZs
"ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ"
"ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯಕೀಲು ಮುರಿದಂತೆ "
- ಸವ೯ಜ್ಞ.
ಈ ವಚನ ಕೇಳದವರಿಲ್ಲ ಸರ್ವಜ್ಞ ರಚಿಸಿದ ಇಂತಹ 7000 ವಚನಗಳು ಮತ್ತು ಒಂದು ಸಾವಿರ ತ್ರಿಪತಿಗಳು ಲಭ್ಯವಿದೆ.
1985 ರಿಂದ 2000 ಇಸವಿ ತನಕ ನಮ್ಮ ರೈಸ್ ಮಿಲ್ ಬಿಲ್ ನ ಕೆಳಭಾಗದಲ್ಲಿ ಸರ್ವಜ್ಞರ ಒಂದು ವಚನ ಖಾಯಂ ಆಗಿ ಪ್ರಿಂಟ್ ಮಾಡಿಸುತ್ತಿದ್ದೆ ಅದು "ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ" - ಸವ೯ಜ್ಞ ಅನ್ನುವುದು.
16 ನೇ ಶತಮಾನದಲ್ಲಿ ಸರ್ವಜ್ಞ ಜನಿಸಿದ್ದು ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಅಂಬಲೂರು ಮಾಸೂರು ಅನ್ನುವುದು ವಿಶೇಷ.
ಮಾಸೂರು ಶಿಕಾರಿಪುರದಿಂದ ಕೇವಲ 18 ಕಿ.ಮಿ.ದೂರದಲ್ಲಿದೆ ಮೊನ್ನೆ ಶಿಕಾರಿಪುರದಿಂದ ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹೋಗುವಾಗ ಮಾಸೂರು ಮುಖಾಂತರ ಹೋಗುವಾಗ ಮಾಸೂರು ಕೇಂದ್ರ ಸ್ಥಳದಲ್ಲಿ ನಿರ್ಮಿಸಿರುವ ಸರ್ವಜ್ಞನ ಪ್ರತಿಮೆ ಸಂದರ್ಶಿಸಿ ಪೋಟೊ ತೆಗೆದು ಕೊಂಡು ಬಂದಿದ್ದೆ.
ಕೆಲವು ವರ್ಷಗಳ ಕಾಲ ದಾರವಾಡ ಜಿಲ್ಲೆಯ ಅಂಬಲೂರು ಸರ್ವಜ್ಞರ ಜನ್ಮ ಸ್ಥಳ ಎಂದೇ ಭಾವಿಸಲಾಗಿತ್ತು ನಂತರ ಅನೇಕ ಸಂಶೋದನೆಗಳಿಂದ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಮಾಸೂರು ಸರ್ವಜ್ಞರ ಜನ್ಮ ಸ್ಥಳ ಎಂದು ತಿಳಿದು ಬಂದಿದೆ ಅಷ್ಟೆ ಅಲ್ಲ ಸರ್ವಜ್ಞರ ಸಮಾದಿ ಕೂಡ ದೊರೆತಿದೆ ಆದ್ದರಿಂದ ನಮ್ಮ ಮಾಸೂರು ಈಗ #ಸರ್ವಜ್ಞನ_ಮಾಸೂರು ಆಗಿದೆ.
ಸರ್ವಜ್ಞ ಹೆತ್ತಮ್ಮ ಕುಂಬಾರ ಮಾಳೆ, ಸಾಕು ತಾಯಿ ಮಲ್ಲಕ್ಕ ತಂದೆ ಬಸವರಸ.
ಬ್ರಾಹ್ಮಣ ಬಸವರಸ ಮತ್ತು ಮಲ್ಲಮ್ಮ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದಿದ್ದರಿಂದ ಪುತ್ರ ಸಂತಾನಕ್ಕಾಗಿ ಬಸವರಸ ಕಾಶಿ ಯಾತ್ರೆ ಮಾಡುತ್ತಾರೆ ಅಲ್ಲಿ ಅವರಿಗೆ ಕನಸಿನಲ್ಲಿ ಕಾಶಿ ವಿಶ್ವನಾಥ ಪ್ರತ್ಯಕ್ಷನಾಗಿ ನಿನಗೆ ಹುಟ್ಟುವ ಮಗು ಮಹಾಜ್ಞಾನಿ ಆಗುತ್ತಾನೆ ಎಂದು ಆಶ್ರೀವಾದ ಮಾಡುತ್ತಾರೆ.
ಕಾಶಿ ಯಾತ್ರೆ ಮುಗಿಸಿ ಅಂಬಲೂರು ಗ್ರಾಮಕ್ಕೆ ಸಮೀಪಿಸುವಾಗ ಊರಿನಲ್ಲಿ ವಿಪರೀತ ಗುಡುಗು ಸಿಡಿಲು ಮಳೆ ಪ್ರಾರಂಭವಾಗುತ್ತದೆ ಆಗ ಅಲ್ಲಿನ ಕುಂಬಾರ ಸಾಲೆಯಲ್ಲಿ ಕುಂಬಾರ ಮಾಳೆ ಎಂಬುವವಳ ಮನೆಯಲ್ಲಿ ಬಸವರಸ ಕಾಶಿ ಯಾತ್ರೆಯ ಪ್ರಸಾದದ ಜೊತೆ ವಸತಿ ಮಾಡುತ್ತಾರೆ.
ಕು೦ಬಾರ ಮಾಳೆಯಲ್ಲಿ ಆಕಷಿ೯ತರಾದ ಬಸವರಸ ಕಾಶಿ ಯಾತ್ರೆ ಪ್ರಸಾದ ನೀಡಿ ಅವಳಲ್ಲಿ ಸಂಪರ್ಕವಾಗಿ 9 ತಿಂಗಳ ನಂತರ ದಿವ್ಯ ತೇಜಸ್ಸಿನ ಗಂಡು ಮಗು ಹುಟ್ಟುತ್ತಾನೆ ಅವನಿಗಿ ಪುಷ್ಪದತ್ತ ಎಂದು ನಾಮಕರಣ ಮಾಡುತ್ತಾರೆ ಆ ಮಗುವೇ ಮಹಾ ಜ್ಞಾನಿ ಸರ್ವಜ್ಞ.
ಪ್ರತಿ ವರ್ಷ ಫೆಬ್ರವರಿ 20ರಂದು ರಾಜ್ಯ ಸರ್ಕಾರ ಸರ್ವಜ್ಞ ಜಯಂತಿ ಆಚರಿಸುತ್ತಿದೆ.
ಸರ್ವಜ್ಞನನ ಜಾತಿ ಮಾನವ ಜಾತಿ
ಸರ್ವಜ್ಞನನ ಮತ ದೇವ ಮತ
ಸರ್ವಜ್ಞನನ ಕಾಲ ಸರ್ವ ಕಾಲ.
ಎಂಬುದು ಸರ್ವಜ್ಞನ ಬಗ್ಗೆ ಇರುವ ಅಭಿಪ್ರಾಯ.
ಬ್ರಾಹ್ಮಣ ಬಸವರಸ ಮತ್ತು ಕುಂಬಾರ ಮಾಳೆ ಪುತ್ರ ಮಹಾ ಜ್ಞಾನಿ,ಕವಿ ಸರ್ವಜ್ಞ ಜಾತಿ ಬಗ್ಗೆ ಬರೆದ ತ್ರಿಪದಿ
"ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ?"
"ಜಾತಿ ವಿಜಾತಿ ಎನಬೇಡ"
" ದೇವನೊಲಿದಾತನೆ ಜಾತ ಸರ್ವಜ್ಞ"
Comments
Post a Comment