#ಶ್ರದ್ಧಾಂಜಲಿಗಳು.
#ಸಜ್ಜನ_ಮಿತಭಾಷಿ_ನಮ್ಮ_ಊರಿನ_ಪದ್ಮಾವತಿ_ಲಾರಿ_ಮಾಲಿಕ_ರಾಮಣ್ಣ.
#ಚಾಮರಾಜ_ನಗರ_ಜಿಲ್ಲೆಯ_ಕಾಡಳ್ಳಿಯವರು.
#ಆನಂದಪುರಂನ_ಗುತ್ತಿಗೆದಾರ_ಕೊಲ್ಲಾ_ಮೇಸ್ತ್ರಿಗಳ_ಲಾರಿ_ಡ್ರೈವರ್_ಮಾದಣ್ಣ_ಇವರ_ಅಣ್ಣ.
#ಸೂರ್ಯಾಸ್ತದ_ನಂತರ_ಮತ್ತು_ಮಳೆಗಾಲದಲ್ಲಿ_ಲಾರಿ_ಓಡಿಸುತ್ತಿರಲಿಲ್ಲ
#ದುಡ್ಡಿನ_ಹಪಾಹಪಿ_ಇಲ್ಲದ_ನಿರ್ಲಿಪ್ತ_ಮನುಷ್ಯ.
ಲಾರಿ ರಾಮಣ್ಣ ಅಂತನೇ ಆನಂದಪುರಂನಲ್ಲಿ ಪ್ರಸಿದ್ಧಿ ಆಗಿದ್ದ ಪದ್ಮಾವತಿ ಲಾರಿ ಮಾಲೀಕರಾದ ರಾಮಣ್ಣರ ಸ್ವಂತ ಊರು ಚಾಮರಾಜ ನಗರದ ಸಮೀಪದ ಕಾಡಳ್ಳಿ.
ಇವರ ಅಣ್ಣ ಮಾದಣ್ಣ ಆನಂದಪುರಂನ ಆ ಕಾಲದ ಗುತ್ತಿಗೆದಾರರಾದ ಕೊಲ್ಲಾ ಬೋವಿ ಮೇಸ್ತ್ರಿಗಳ ಲಾರಿ ಚಾಲಕರಾಗಿ ಬಂದವರು ನಂತರ ಚಿಕ್ಕ ಬಾಲಕನಾದ ಅವರ ತಮ್ಮ ರಾಮುನನ್ನ ಕರೆದುಕೊಂಡು ಬಂದು ತಮ್ಮ ಜೊತೆ ಕಂಡಕ್ಟರಾಗಿ ಇಟ್ಟುಕೊಂಡು ನಂತರ ಡ್ರೈವರ್ ಮಾಡುತ್ತಾರೆ.
ನಂತರ ಡ್ರೈವರ್ ಆದ ರಾಮಣ್ಣ ಬಹಳ ವರ್ಷ ಸೌದಿಯಿಂದ ಬಂದು ಲಾರಿ ಮಾಲಿಕರಾಗಿದ್ದ ಆನಂದಪುರಂ ರೋಡ್ ಲೈನ್ಸ್ ನ ಗೌಸು ಅವರ ಲಾರಿಯಲ್ಲಿ ಡ್ರೈವರ್ ಆಗಿದ್ದರು.
ಗೌಸ್ ಅವರ ಲಾರಿ ಆನಂದಪುರಂನ ಲಾಟೆರೇಟ್ (ಜಂಬಿಟ್ಟಿಗೆ) ಕಲ್ಲು ಸಾಗಾಣಿಕೆ ಮಾಡುತ್ತಿತ್ತು ಆಗ ಗೌಸ್ ಅವರ ರೂಲ್ಸ್ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಓಡಿಸಬೇಕಿತ್ತು, ಅವಸರ - ವೇಗದ ಚಾಲನೆ ಅವರಿಗೆ ನಿಶೇದವಾಗಿತ್ತು.
ನಂತರ ಸ್ವಂತ ಲಾರಿ ಖರೀದಿಸಿದ್ದ ರಾಮಣ್ಣ ಅದಕ್ಕೆ ಹುಂಚಾದ ಪದ್ಮಾವತಿ ದೇವರ ಹೆಸರು ಇಟ್ಟಿದ್ದರಿಂದ ಇವರಿಗೆ ಪದ್ಮಾವತಿ ರಾಮಣ್ಣ ಅಂತಲೇ ಹೆಸರಾಯಿತು ರಾಮಣ್ಣ ಕೂಡ ಅವರ ಹಳೆಯ ಮಾಲಿಕರಾದ ಗೌಸ್ ಸಾಹೇಬರಂತೆ ಸೂರ್ಯಾಸ್ತದ ನಂತರ ಲಾರಿ ಓಡಿಸುತ್ತಿರಲಿಲ್ಲ.
ನಮ್ಮ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಸ್ವಂತ ಮನೆ ಮಾಡಿದ್ದಾರೆ, ನಮ್ಮ ಊರಿನ ವರಸಿದ್ಧಿವಿನಾಯಕ ದೇವರ ದೇವಾಲಯ ನಿರ್ಮಾಣದಲ್ಲಿ, ಪ್ರತಿಷ್ಟಾಪನೆಯಲ್ಲಿ ಮತ್ತು ಪ್ರತಿ ವರ್ಷದ ಜಾತ್ರೆಯಲ್ಲಿ ನನ್ನ ಜೊತೆ ಇದ್ದವರು.
ಸ್ವಭಾವತ ರಾಮಣ್ಣ ಮಿತಭಾಷಿ ಮತ್ತು ಸಜ್ಜನರಾಗಿದ್ದರು ವ್ಯವಹಾರದಲ್ಲಿ ಮೋಸ ದಗಾ ಅವರಿಗೆ ಆಗಿ ಬರುತ್ತಿರಲಿಲ್ಲ, ಯಾರೊಬ್ಬರ ಮನಸ್ಸೂ ನೋಯಿಸದ ವ್ಯಕ್ತಿತ್ವ ಅವರದ್ದು.
ಇತ್ತೀಚೆಗೆ ತೀವ್ರವಾದ ಜಾಂಡೀಸ್ ಕಾಯಿಲೆಯಿಂದ ಮಂಗಳೂರಿನ ವೆನ್ ಲಾಕ್ ಆಸ್ಟತ್ರೆಗೆ ಅಡ್ಮಿಟ್ ಆದವರು ಮೊನ್ನೆ ಅಲ್ಲೇ ಜೀವ ತ್ಯಾಗ ಮಾಡಿದರು (8- ಆಗಸ್ಟ್ -2023) ನಿನ್ನೆ ಅವರ ಅಂತ್ಯ ಸಂಸ್ಕಾರ ಚಾಮರಾಜನಗರದ ಕಾಡಳ್ಳಿಯಲ್ಲಿ ನೆರವೇರಿತು.
ನನಗೆ ತಡವಾಗಿ ಸುದ್ದಿ ತಿಳಿಯಿತು ಇವರ ಅತ್ಯಾಪ್ತ ಗೆಳೆಯ ಕ್ಯಾಂಟೀನ್ ನಾಗರಾಜ ಮತ್ತು ಇವರು ಸದಾ ಜೊತೆಯಲ್ಲಿರುವವರು ಅವರೂ ರಾಮಣ್ಣರ ಅಕಾಲಿಕ ಸಾವಿನಿಂದ ದಿಗ್ಮೂಡರಾಗಿದ್ದಾರೆ.
Comments
Post a Comment