Blog number 1713. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಶ್ರೀಖಂಡ್ ಇದನ್ನು ಚಪಾತಿ ರೋಲ್ ಆಗಿ, ಬ್ರೆಡ್ ಸ್ಲೈಸ್ ಜೊತೆ ಮತ್ತು ಐಸ್ ಕ್ರಿಂ ನಂತೆ ಸ್ವಾದಿಸಬಹುದು.
#ಶ್ರೀಖಂಡ_ಅಮ್ರಖಂಡ_ಸ್ವಾದಿಷ್ಟ_ಸಿಹಿ_ಖಾದ್ಯ
#ನೀರು_ತೆಗೆದ_ಮೊಸರು_ಸಕ್ಕರೆ_ಏಲಕ್ಕಿ.
#ಚಪಾತಿಗೆ_ಬ್ರೆಡ್_ಅಕ್ಕಿರೊಟ್ಟಿಗೆ_ಸವರಿ_ರೋಲ್_ಮಾಡಿ_ತಿಂದು_ನೋಡಿ.
#ಗುಜರಾತಿ_ಮರಾಠಿಗರ_ಪೆವರಿಟ್.
#ಮಾವಿನ_ಹಣ್ಣಿನ_ಸೀಸನದಲ್ಲಿ_ಮಾವಿನ_ಹಣ್ಣು_ಸೇರಿಸಿದರೆ_ಅಮ್ರಖಂಡ
#ಅಮುಲ್_ಸಂಸ್ಥೆ_ಇದನ್ನು_ವಿವಿದ_ಸ್ವಾದದಲ್ಲಿ_ಮಾರುಕಟ್ಟಿಯಲ್ಲಿ_ಮಾರುತ್ತಿದೆ.
#ಸುಲಭವಾಗಿ_ಮನೆಯಲ್ಲಿ_ತಯಾರಿಸಿ_ಬಡಿಸುವ_ದಿಡೀರ್_ಸಿಹಿ_ಖಾದ್ಯ.
https://youtu.be/E8ykhRAsVXM
ಪೂನಾದಿಂದ ಇನ್ನೋವ ಕಾರ್ ಕ್ಲಬ್ ನಿಂದ ಬರುತ್ತಿದ್ದ ಗೆಳೆಯರು ತಮ್ಮ ಡ್ರೈವಿಂಗ್ ನಲ್ಲಿ ಹಸಿವಾದಾಗ ತಿನ್ನಲು ಪೂನಾದ ಪ್ರಸಿದ್ಧ ಹೋಟೆಲ್ ನಿಂದ ಶ್ರೀಖಂಡ್ ಸವರಿದ ಚಪಾತಿ ರೋಲ್ ಗಳನ್ನು ತರುತ್ತಿದ್ದರು ಆ ಮೂಲಕ ನನಗೆ ಶ್ರೀಖಂಡ್ ರುಚಿ ಗೊತ್ತಾಗಿದ್ದು.
ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣು ಸೇರಿಸಿದರೆ ಅಮ್ರಖಂಡ್ ಆಗುತ್ತದೆ ಅಷ್ಟೇ ಅಲ್ಲ ಇದಕ್ಕೆ ಕೇಸರಿ ಸೇರಿಸುವ , ಪಿಸ್ತಾ ಸೇರಿಸುವ, ಬಾದಾಮಿ ಸೇರಿಸುವ ವಿವಿದ ಸ್ವಾದದ ಶ್ರೀಖಂಡ್ ಮಾಡಬಹುದು.
ಇದು ಗುಜರಾತಿ ಮತ್ತು ಮರಾಠಿ ಪ್ರದೇಶದ ಜನರ ಪೆವರಿಟ್ ಸಿಹಿ ಆಗಿದೆ.
ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇರುವ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಂತಹ ಅನೇಕ ರೆಸಿಪಿ ಪ್ರಯೋಗ ಮತ್ತು ಅದನ್ನು ನಿತ್ಯ ಗ್ರಾಹಕರಿಗೆ ಸಿಗುವಂತೆ ಮಾಡುವ ನನ್ನ ಪ್ರಯತ್ನದಲ್ಲಿ ಶ್ರೀಖಂಡ್ ಚಪಾತಿ ರೋಲ್ ಸದ್ಯದಲ್ಲೇ ವರ್ಷ ಪೂರ್ತಿ ಸಿಗಲಿದೆ ಈಗಾಗಲೇ ಹಲಸಿನ ಎಲೆ ಕಡಬು, ಪೋಡಿ ಇಡ್ಲಿ ಎರಡು ವರ್ಷದಿಂದ ನಿತ್ಯ ಗ್ರಾಹಕರಿಗೆ ಸಿಗುತ್ತಿದೆ.
#ಶ್ರೀಖಂಡ್_ತಯಾರಿ_ಸುಲಭ_ಇದಕ್ಕೆ_ಬೇಕಾಗುವುದು...
(ಅಂದಾಜು ಒಂದು ಕಿಲೋ ಶ್ರೀಖಂಡ್ ತಯಾರಿಸಲು)
1. ಮೊಸರು 2 ಲೀಟರ್
2 . ಸಕ್ಕರೆಪುಡಿ 200 ಗ್ರಾಂ.
3. ಏಲಕ್ಕಿ 4.
4. ಜಾಯಿಕಾಯಿ ಪುಡಿ ಕಾಲು ಚಮಚ.
#ತಯಾರಿಸುವ_ವಿಧಾನ
ಹಿಂದಿನ ರಾತ್ರಿ 2 ಲೀಟರ್ ಮೊಸರು ನೀರು ಬಸಿಯುವ ಬಟ್ಟೆಯಲ್ಲಿ ಕಟ್ಟಿ ಇಡಿ, ಬೆಳಿಗ್ಗೆ ಅದನ್ನು ಬಟ್ಟೆಯಿಂದ ಬೇರ್ಪಡಿಸಿ ಗಟ್ಟಿಯಾದ ಮೊಸರು ಚೆನ್ನಾಗಿ ವಿಸ್ಕ್ ಮಾಡಿ ಬೆಣ್ಣೆಯಂತೆ ರೂಪಾಂತರ ಆಗುತ್ತದೆ ಅದಕ್ಕೆ ಪುಡಿ ಮಾಡಿದ 200 ಗ್ರಾಂ ಸಕ್ಕರೆ, ಏಲಕ್ಕಿ ಮತ್ತು ಜಾಯಿಕಾಯಿ ಪುಡಿ ಸೇರಿಸಿ ಮತ್ತೊಮ್ಮೆ ವಿಸ್ಕರ್ ನಿಂದ ಚೆನ್ನಾಗಿ ಕಲೆಸಿ ನಿಮ್ಮ ಶ್ರೀಖಂಡ್ ತಯಾರು.
ಇದಕ್ಕೆ ನಿಮ್ಮ ಇಷ್ಟದ ಕೇಸರಿ, ಪಿಸ್ಟಾ ಅಥವಾ ಬಾದಾಮಿ ಸೇರಿಸ ಬಹುದು ಅಥವ ಮಾವಿನ ಹಣ್ಣು ಸೇರಿಸಿ (ಅಮ್ರ ಖಂಡ್) ರೊಟ್ಟಿ -ಚಪಾತಿಗೆ ಸವರಿ ರೋಲ್ ಮಾಡಿದರೆ ಈಗಿನ ಜಮಾನದ ಮಕ್ಕಳು ಇಷ್ಟ ಪಡುತ್ತಾರೆ.
ಬ್ರೆಡ್ ಸ್ಲೈಸ್ ಗೆ ಸವರಿ ಕೂಡ ತಿನ್ನಬಹುದು ಅಥವ ಹಾಗೇ ಪ್ರಿಜ್ ನಲ್ಲಿಟ್ಟು ಬೇಕಾದಾಗ ಐಸ್ ಕ್ರೀಮ್ ನಂತೆ ಸವಿಯಬಹುದು.
Comments
Post a Comment