Blog number 1693. ಓಲೆ ಬೆಲ್ಲ ... ವಾಲೆ ಬೆಲ್ಲ ಅತ್ಯಂತ ರುಚಿಕರ, ತಾಳೆ ಮರದಿಂದ ತೆಗೆದ ನೀರಾದಿಂದ ತಯಾರಾಗುತ್ತದೆ ಇದನ್ನು ಓಲೆ ಮರದ ಗರಿಗಳಿಂದಲೇ ಸುಂದರವಾಗಿ ಪ್ಯಾಕ್ ಮಾಡುತ್ತಾರೆ ಕರಾವಳಿಯ ಓಲೆ ಬೆಲ್ಲ ತಯಾರಕರು.
#ವಾಲೆ ಬೆಲ್ಲ ಉಪು೯ ನೀರಾ ಬೆಲ್ಲ
ಕಬ್ಬಿನಿಂದ ತಯಾರಿಸಿದ ಬೆಲ್ಲ ಹಾಗೂ ಸಕ್ಕರೆ ಎಲ್ಲರಿಗೂ ಪರಿಚಿತ ಆದರೆ ತಾಳೆಮರದ ಹಾಗೂ ತೆಂಗಿನ ಮರದಿಂದ ಇಳಿಸಿದ ನೀರಾ (ಕಳ್ಳು ಅಥವ ಶೇಂದಿ )ದಿಂದ ತಯಾರಿಸುವ ಬೆಲ್ಲ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ .
ಮೊದಲೆಲ್ಲ ಕರಾವಳಿಯಲ್ಲಿ ಎಲ್ಲಾ ಕಡೆ ಸಿಗುತ್ತಿತ್ತು, ಈ ಬೆಲ್ಲದ ರುಚಿಯು ವಿಶಿಷ್ಟ ಮತ್ತು ಇದನ್ನ ಗಾಲಿ ಆಕಾರದಲ್ಲಿ ಅಚ್ಚಿನಲ್ಲಿ ಹೋಯ್ದು ಅದಕ್ಕೆ ಅಂಚಿಗೆ ತಾಳೆ ಮರದ ಗರಿಯನ್ನ ಸುತ್ತುತ್ತಾರೆ, ಹತ್ತಾರು ವಾಲೆ ಬೆಲ್ಲದ ಗಾಲಿಗಳನ್ನ ದೊಡ್ಡದಾದ ತಾಳೆ ಎಲೆಯ ಕೊಟ್ಟೆಯಲ್ಲಿ ಕಟ್ಟಿರುತ್ತಾರೆ, ಇದನ್ನ ತಯಾರಿಸಿ ಪ್ಯಾಕ್ ಮಾಡುವುದು ಒಂದು ಕಲೆಯೇ ಸರಿ.
ಅನೇಕ ಬಾರಿ ಕರಾವಳಿಗೆ ಹೋದಾಗ ಇದನ್ನ ಹುಡುಕಿದರೂ ಸಿಗಲಿಲ್ಲ ಕಾರಣ ಕೇಳಿದರೆ ಈಗ ಯಾರೂ ಇದನ್ನ ಕೇಳುವುದಿಲ್ಲ ಮತ್ತು ಇದನ್ನ ತಯಾರಿಸುವವರೂ ಕಡಿಮೆ ಅಂದರು.
ಕುಂದಾಪುರದ ಸಮೀಪದ ಕೋಟೇಶ್ವರದಿಂದ ತಲಾಷ್ ಮಾಡಿ ಎರೆಡು ಕೊಟ್ಟೆ ವಾಲೆ ಬೆಲ್ಲ ಬಂದುಗಳಾದ ಹಿರಿಯರು ಶ್ರೀ ನಾರಾಯಣ ಮೆಂಡನ್ ಉಪ್ಪಿನಕೊಟೆಯವರು ತಂದು ಕೊಟ್ಟಿದ್ದಾರೆ.
Comments
Post a Comment