ನಿಮ್ಮ ನಿಮ್ಮ ಇಷ್ಟದಂತೆ ನೀವಿರುವ ಬಗ್ಗೆ ಯಾರೂ ಚಿಂತನೆ ಮಾಡಬೇಕಾಗಿಲ್ಲ.
ನೀವು ಹೇಳಿದ್ದು ಸರಿ 2012 ರ ನಂತರ ಇಡೀ ದೇಶದಲ್ಲೇ ಪೀತ ಪತ್ರಿಕೊದ್ಯಮ, ಬ್ಲಾಕ್ ಮೇಲ್ ಪತ್ರಕತ೯ರು ಹೆಚ್ಚಾದರು ಜೊತೆಯಲ್ಲಿ ಟಿವಿ ಮಾಧ್ಯಮ ಕೂಡ.
ಅಂಡ್ರಾಯಿಡ್ ಫೋನ್ ಬಳಕೆದಾರರು ಹೆಚ್ಚಾದರು, ಸೊಷಿಯಲ್ ಮೀಡೀಯದಲ್ಲಿ ಇಂಗ್ಲಿಷ್ ಬಳಸುವವರು ಮಾತ್ರ ಹೆಚ್ಚು ಕ್ರಿಯಾಶೀಲರಿದ್ದರು ಆದರೆ ಈಗ ಅಲ್ಲಿ ಸ್ಥಳೀಯ ಭಾಷೆಗಳಿಗೆ ಅವಕಾಶ ಇರುವುದರಿಂದ ಈಗ ಕನ್ನಡಿಗರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
ಹಾಗಾಗಿಯೆ ಕ್ರಿಯೆ ಪ್ರತಿಕ್ರಿಯೆ, ಧ್ವನಿ ಪ್ರತಿಧ್ವನಿ ಹೆಚ್ಚಾಗಿದೆ.
ಹುಚ್ಚು ಅಭಿಮಾನದಿಂದ, ಹತಾಷೆ ಯಿ೦ದ ಕೊಳಕು ಬಾಷೆಯಲ್ಲಿ ಬರೆಯುತ್ತಿದ್ದಾರೆ.
ನಿಜವಾದ ಆರ್ ಎಸ್ ಎಸ್ ನವರು ಈ ರೀತೀ ವತಿ೯ಸುವುದು ಕಡಿಮೆಯೆ ಆದರೆ ಅಲ್ಲಿ ಈಗ ತೀವ್ರಗಾಮಿಗಳ ಹಿಡಿತ ಹೆಚ್ಚಾಗುತ್ತಿರುವುದು ಬಿಜೆಪಿ ಪಕ್ಷದಲ್ಲೂ ನೋಡಬಹುದು, ಅಡ್ವಾನಿಯ೦ತವರು ಅಲ್ಲಿ ಮೂಲೆಗುಂಪು ಮಾಡಲಾಗಿದೆ.
ಕಾ೦ಗ್ರೆಸ್ ತನ್ನ ಮತ ಬ್ಯಾ೦ಕ್ ರಕ್ಷಣೆಯ ಬರದಲ್ಲಿ ದೇಶದಲ್ಲಿನ ಆಂತರಿಕ ಭಯೋತ್ಪಾದಕರನ್ನ ರಕ್ಷಿಸುತ್ತಿದೆ ಎಂಬ ಭಾವನೆ ಸಾವ೯ಜನಿಕರಲ್ಲಿ ಬರುವಂತೆ ಅದು ವತಿ೯ಸುತ್ತಿದೆ ಉದಾಹರಣೆ ಕನಾ೯ಟಕದಲ್ಲಿ ಆತಂಕವಾದಿಗಳಿಗೆ ಅನುಕೂಲ ಮಾಡಿಕೊಡುವ ಸಂಘಟನೆಗಳನ್ನ ಬಗ್ಗೆ ಉದಾರವಾಗಿ ರುವುದು ಹಾಗೆಯ ಅವರ ಸಕಾ೯ರವೇ ಇದ್ದರು ನೈತಿಕ ಪೋಲಿಸ್ ಗಿರಿ ನಿಲ್ಲಿಸಲು ಸಾಧ್ಯವಿಲವಾಗಿರುವುದು.
ದಿನೇಶ್ ಅಮಿನರು ಒಳ್ಳೆಯ ಪತ್ರಕತ೯ರು ಆದರೆ ಇತ್ತಿಚಿಗೆ ಹೆಚ್ಚು ಅಕ್ರೊಶದಿಂದ ಪ್ರತಿಕ್ರಿಯೆ ನೀಡುವುದು ನನಗೂ ಸರಿ ಅನ್ನಿಸುತ್ತಿಲ್ಲ.
ಜನಾದ೯ನ ಪೂಜಾರರ ಬಗ್ಗೆ ಅವರಿಗೆ ವೈಯಕ್ತಿಕವಾಗಿ ಏನಾದರು ಇರಲಿ ಅವರೊಬ್ಬ ಒಬ್ಬ ಮುಖ್ಯಮಂತ್ರಿಯ ಪತ್ರಿಕಾ ಸಲಹೆಗಾರರಾಗಿ ಅವರ ಪಕ್ಷದ ಹಿರಿಯರನ್ನ ಹೀಗೆ ಸಾವ೯ಜನಿಕವಾಗಿ ನಿಂದಿಸಿದರೆ ವಿರೊದಿಗಳಿಗೆ ಇವರೆ ರತ್ನಗಂಬಳಿ ಹಾಕಿದ೦ತೆ ಅಲ್ಲವೆ.
ಅ೦ಗವಿಕಲೆ ಎಂದು ಬರೆದಿದ್ದು ಜಾತಿ ನಿಂದನೆಯ ಸಮವಾದದ್ದು , My Foot ಎಂಬ ಪದ ಸರಿಯಲ್ಲ.
ಇವೆಲ್ಲ ದಿನೇಶ ಅಮೀನ ಮಟ್ಟು ಎಂಬ ಪತ್ರಕತ೯ ಅಥವ ರಾಜ್ಯ ಒಂದರ ಮುಖ್ಯಮ೦ತ್ರಿಯ ಪತ್ರಿಕಾ ಸಲಹೆಗಾರರ ಬಾಯಿ೦ದ, ಲೇಖನದಿಂದ ಜನ ನಿರೀಕ್ಷಿಸಿರಲಿಲ್ಲ.
ಇದೆಲ್ಲ ಕೊಳಕು ಜನ ಸಾವ೯ಜನಿಕ ಟಾಯಿಲೆಟ್ ಗೋಡೆ ಮೇಲೆ ಬರೆಯುವ ಕೊಳಕು ಬರಹದಂತೆ ಕಾಣುತ್ತಿದೆ.
ಪೇಸ್ ಬುಕ್ ಗೊಡೆ ಕೊಳಕು ಟಾಯಲೆಟ್ ಗೊಡೆ ಆಗಿ ಬದಲಾಗುತ್ತಿದೆ.
Comments
Post a Comment