# ಬೆಲಗೂರು ಬಿಂದು ಮಾದವ ಶಮಾ೯
#ಅಭಿನವ_ಆಂಜನೇಯ
#ಅವದೂತರು.
ಬೆಲಗೂರಿನ ಅಭಿನವ ಆಂಜನೇಯ, ಅವದೂತರು ಅಂತೆಲ್ಲ ಜನ ಕರೆಯುವ ಬಿಂದು ಮಾದವ ಶಮ೯ರ ಬಗ್ಗೆ ಸ್ವಲ್ಪ ತಿಳಿದಿತ್ತು, ಮೊನ್ನೆ ಇವರ ನೇತೃತ್ವದಲ್ಲಿ 5 ಕೆಜಿ ಬಂಗಾರ ಶೃ೦ಗೇರಿ ದೇವಾಲಯಕ್ಕೆ ಅಪಿ೯ಸಿದ ಸುದ್ದಿ ಪತ್ರಿಕೆಯಲ್ಲಿ ಓದಿದ್ದೆ.
ಮೊನ್ನೆ ಜೋತಿಷಿ ಬೂದ್ಯಪ್ಪ ಗೌಡರು ಚಿತ್ರದುಗ೯ದ ಕಾಲೇಜು ಉಪನ್ಯಾಸಕರಾದ ಡಾ.ಲೋಕೇಶ್ ಆಗಸನ ಕಟ್ಟೆ ಬರೆದು ಪ್ರಕಟಿಸಿರುವ * ಅತೀತ ಲೋಕದ ಮಹಾಯಾತ್ರಿಕ* ಎಂಬ ಸುಮಾರು 400 ಪುಟದ ಪುಸ್ತಕ ಕೊಟ್ಟಿದ್ದರು, ಒಂದು ರೀತಿ ಕಾದ೦ಬರಿ ರೀತಿ ಬರೆದಿರುವ ಈ ಪುಸ್ತಕ ಅವದೂತರಾದ ಬೆಲಗೂರಿನ ಬಿ೦ದು ಮಾದವ ಶಮ೯ರ ಜೀವನ ಚರಿತ್ರೆಯೇ ಆಗಿದೆ, ಮೊದಲ ಪುಟದಿಂದ ಕೊನೆಯ ಪುಟದವರೆಗೆ ಬಿಡದಂತೆ ಓದಿಸಿಕೊಂಡು ಹೋಗುವ ಈ ಪ್ರಸ್ತಕದಲ್ಲಿ ಬಿಂದು ಮಾದವ ಶಮ೯ರ ಜಾತ್ಯಾತೀತವಾಗಿ ಜನ ಸೇವೆ ಮಾಡುವುದು, ಮಡಿ ಮೈಲಿಗೆಯನ್ನ ಆಚರಿಸದಿರುವುದು ಕೇಳಿ ಆಶ್ಚಯ೯ವಾಯಿತು, ಎಲ್ಲಾ ಜಾತಿಯ ಜನರ ಜೊತೆ ಪಂಕ್ತಿಬೋಜನ, ಎಲ್ಲಾ ಜಾತಿಯವರ ಮನೆಯಲ್ಲಿ ಆಹಾರ ಸ್ವೀಕರಿಸುವ ಪರಿ ದೇವರಿಗೆ ಜಾತಿ ಇಲ್ಲ ಎಂಬ ನೀತಿ ಪಾಠವಾಗಿದೆ.
ಒಮ್ಮೆ ಇವರನ್ನ ಸ೦ದಶಿ೯ಸಬೇಕೆ೦ಬ ಬಯಕೆ ಕೂಡಾ ಉoಟಾಯಿತು.
Comments
Post a Comment