Blog number 1013. ತೀರ್ಥಹಳ್ಳಿಯ ಪ್ರಖ್ಯಾತ ವಾರಪತ್ರಿಕೆ ಹೆಸರು ಲಕ್ಷ್ಮೀಶ್ ವಾರಪತ್ರಿಕೆ ಇದರ ಸಂಪಾದಕರು ಲಕ್ಷ್ಮೀಶ್ ರು ಇವರು ನನ್ನ ಕಾದಂಬರಿ ಓದಿ ವಿಮರ್ಶೆ ಮಾಡಿದ್ದಾರೆ.
#ಲಕ್ಷ್ಮೀಶ್_ಪತ್ರಿಕೆ ತಮ್ಮದೇ ಹೆಸರಿನಲ್ಲಿ ತೀಥ೯ಹಳ್ಳಿಯಿಂದ ವಾರ ಪತ್ರಿಕೆ ಮೂಲಕ ಪ್ರಖ್ಯಾತಿ ಪಡೆದಿರುವ, ತಮ್ಮದೇ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಅಪಾರ ಅಭಿಮಾನಿಗಳನ್ನ ಹೊಂದಿರುವ ಲಕ್ಷ್ಮೀಶ್ ರು ನನ್ನ ಕಾದ೦ಬರಿಯನ್ನು ಸಂಪೂಣ೯ವಾಗಿ ಓದಿ ವಸ್ತು ನಿಷ್ಟವಾಗಿ ಬರೆದ ವಿಮಷೆ೯ಗಾಗಿ ಅವರನ್ನು ಅಭಿನಂದಿಸುತ್ತೇನೆ. ಚಂಪಕಾಳ ಬಗ್ಗೆ ಇನ್ನೂ ಹೆಚ್ಚು ಒತ್ತು ಕೊಡಬೇಕಿತ್ತೆಂಬ ಅವರ ಅಭಿಪ್ರಾಯ ಸರಿ ಇದೆ, ಇಲ್ಲಿ ನಾನು ಎಡವಿರುವುದು ಒಪ್ಪಿದ್ದೇನೆ ಬಹುಶಃ ಇದು ನನ್ನ ಮಿತಿ ಅಥವ ಮೊದಲ ಕಾದಂಬರಿಯ ಕಾರಣವಿರಬಹುದು. ಲಕ್ಷ್ಮೀಶರ ಬರವಣಿಗೆಯ ಶೈಲಿಗೆ ಮನಸೋತು ಅವರ ಅಭಿಮಾನಿ ಆಗಿರುವ ನನಗೆ, ಅವರ ಈ ವಿಮಶೆ೯ಯ ಜೊತೆಗೆ ಮುಂದಿನ ದಿನದಲ್ಲಿ ನನ್ನಿಂದ ಹೆಚ್ಚಿನ ಬರವಣಿಗೆ ಬರಲಿ ಎಂಬ ಹಾರೈಕೆಯ ಪ್ರೋತ್ಸಾಹ ನನಗೆ ನೀಡಿದ್ದು ಖುಷಿ ತಂದಿದೆ. #ಚರಿತ್ರೆಯ_ವ್ಯಾಖ್ಯಾನದ_ಮಧ್ಯೆ_ಸೊರಗಿದ_ಚಂಪಕಾ ಕೃತಿ ವಿಮರ್ಶೆ; ಲಕ್ಷ್ಮೀಶ ಕಾ.ಸು., ಸಂಪಾದಕ, ಲಕ್ಷ್ಮೀಶಪತ್ರಿಕೆ, ತೀರ್ಥಹಳ್ಳಿ.9448218666. ಪಕ್ಕದ ಸಾಗರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ *ಆನಂದಪುರ* ಒಂದೊಮ್ಮೆ ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಕೆಳದಿ ಹೊರತು ಪಡಿಸಿದ ಪ್ರಮುಖ ನೆಲೆಯಾಗಿತ್ತು. ಅದೇ ಆನಂದಪುರದಲ್ಲಿ ಈಗಲೂ *ಚಂಪಕ ಸರಸ್ಸು* ಅರ್ಥಾತ್ ಚಂಪಕ ಕೊಳ ಎಂಬ ಮನಮೋಹಕ ಪ್ರವಾಸೀ ತಾಣವಿದೆ. ಆ ಸ...