ಮಂಜುನಾಥ_ಗೌಡರು_ಅಧ್ಯಕ್ಷರು ಮಲೆನಾಡು_ಪ್ರದೇಶಾಭಿವೃದ್ಧಿ_ಮಂಡಳಿ
Malnad_Area_Development_Board_MADB.
ನಮ್ಮ ಜಿಲ್ಲೆಯವರೇ ಆದ ಆರ್. ಎಂ. ಮಂಜುನಾಥ ಗೌಡರು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ ಇದು ಕ್ಯಾಬಿನೆಟ್ ಸಚಿವ ಸ್ಥಾನಮಾನದ ಹುದ್ದೆ.
ಇವರು ಕಸ್ತೂರಿ ರಂಗನ್ ವರದಿ ಮಾರ್ಪಾಡಿಗೆ ರಾಜ್ಯ ಸರ್ಕಾರ ಮತ್ತು ಮಲೆನಾಡಿನ ಜನರ ಮಧ್ಯೆ ಕೊಂಡಿ ಆಗಿ ಕೀ ರೋಲ್ ಕೆಲಸ ಮಾಡಬಹುದಾಗಿದೆ.
ಇವರ ಅಧಿಕಾರ ವ್ಯಾಪ್ತಿ ರಾಜ್ಯದ 13 ಜಿಲ್ಲೆಗಳು ಮತ್ತು 66 ವಿಧಾನಸಭಾ ಕ್ಷೇತ್ರಗಳು ಬರುತ್ತದೆ ಇದು ಸಣ್ಣ ಕ್ಷೇತ್ರವಲ್ಲ, ರಾಜ್ಯದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟದ ಪೂರ್ತಿ ಪ್ರದೇಶ ಇವರ ವ್ಯಾಪ್ತಿಯಿಲ್ಲಿದೆ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (Malnad Area Development Board - MADB) ಮಲೆನಾಡಿನ 13 ಜಿಲ್ಲೆಗಳ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಶಾಸನಬದ್ಧ ಸಂಸ್ಥೆಯಾಗಿದೆ.
ಕಸ್ತೂರಿ ರಂಗನ್ ವರದಿಯಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯದಲ್ಲಿ ಮಂಡಳಿಯು ಕೇವಲ ರಸ್ತೆ-ಸೇತುವೆ ನಿರ್ಮಾಣಕ್ಕೆ ಸೀಮಿತವಾಗದೆ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಈ ಕೆಳಗಿನ ಜವಾಬ್ದಾರಿಗಳನ್ನು ವಹಿಸಬಹುದಾಗಿದೆ.
ಮಂಡಳಿ ವಹಿಸಬಹುದಾದ ಪ್ರಮುಖ ಜವಾಬ್ದಾರಿಗಳು
ವಾಸ್ತವಾಂಶದ ಸಮೀಕ್ಷೆ, ಉಪಗ್ರಹ ಆಧಾರಿತ ಸಮೀಕ್ಷೆಯಲ್ಲಿ ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು 'ಪರಿಸರ ಸೂಕ್ಷ್ಮ ವಲಯ' ಎಂದು ತಪ್ಪಾಗಿ ಗುರುತಿಸಿರುವ ಬಗ್ಗೆ ತಜ್ಞರ ಸಮಿತಿ ರಚಿಸಿ, ನೈಜ ಗಡಿಗಳನ್ನು ಗುರುತಿಸುವ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬಹುದು.
ಪಂಚಾಯಿತಿ ಮಟ್ಟದ ಜಾಗೃತಿ ಅಭಿಯಾನ, ಮಲೆನಾಡಿನ ಪ್ರತಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಗಾರ ನಡೆಸಿ, ವರದಿಯಿಂದ ಯಾವ ಚಟುವಟಿಕೆಗಳಿಗೆ ನಿಷೇಧವಿದೆ ಮತ್ತು ಯಾವುವುಗಳಿಗೆ ರಿಯಾಯಿತಿ ಇದೆ ಎಂಬುದರ ಬಗ್ಗೆ ರೈತರಿಗೆ ನಿಖರ ಮಾಹಿತಿ ನೀಡಿ ಗೊಂದಲ ನಿವಾರಿಸುವ ಕೆಲಸ ಮಾಡಬೇಕು.
ಜೀವನಾಧಾರ ಮತ್ತು ಪರಿಸರ ಸಮತೋಲನದ ವರದಿ ತಯಾರಿಸಿ, ಪರಿಸರಕ್ಕೆ ಹಾನಿಯಾಗದಂತೆ ಮಲೆನಾಡಿಗರ ಕೃಷಿ, ತೋಟಗಾರಿಕೆ ಮತ್ತು ಸಾಂಪ್ರದಾಯಿಕ ಅರಣ್ಯ ಹಕ್ಕುಗಳನ್ನು ಕಾಪಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಪರ್ಯಾಯ ನೀತಿ ಚೌಕಟ್ಟನ್ನು (Policy Recommendations) ಶಿಫಾರಸು ಮಾಡಬೇಕು.
ಸರ್ಕಾರಕ್ಕೆ ಅಧಿಕೃತ ಅಹವಾಲು ಸಲ್ಲಿಕೆ ಮಾಡಿ ಮಲೆನಾಡು ವ್ಯಾಪ್ತಿಯ ಶಾಸಕರು, ಸಂಸದರು ಮತ್ತು ಸಾರ್ವಜನಿಕ ಮುಖಂಡರ ಸಭೆ ಕರೆದು ಜನರ ಆತಂಕ ಹಾಗೂ ಬೇಡಿಕೆಗಳ ಸಮಗ್ರ ದಾಖಲೆಯನ್ನು ಸಿದ್ಧಪಡಿಸಿ ಸಚಿವ ಸಂಪುಟಕ್ಕೆ ಅಧಿಕೃತವಾಗಿ ಸಲ್ಲಿಸಬಹುದು.
ಇದರ ಪ್ರಧಾನ ಕಚೇರಿ ಶಿವಮೊಗ್ಗದಲ್ಲಿದೆ ಇದರ
ಕಾರ್ಯವ್ಯಾಪ್ತಿ
ಮಂಡಳಿಯು ರಾಜ್ಯದ ಪಶ್ಚಿಮ ಘಟ್ಟದ ತಪ್ಪಲು ಮತ್ತು ಮಲೆನಾಡು ವ್ಯಾಪ್ತಿಗೆ ಒಳಪಡುವ ಒಟ್ಟು 13 ಜಿಲ್ಲೆಗಳ 66ಕ್ಕೂ ಹೆಚ್ಚು ತಾಲೂಕುಗಳನ್ನು ಒಳಗೊಂಡಿದೆ.
#ಶಿವಮೊಗ್ಗ
#ಚಿಕ್ಕಮಗಳೂರು
#ಕೊಡಗು
#ಉತ್ತರ_ಕನ್ನಡ
#ದಕ್ಷಿಣ_ಕನ್ನಡ
#ಉಡುಪಿ
#ಹಾಸನ
#ಬೆಳಗಾವಿ (ಭಾಗಶಃ ಮಲೆನಾಡು ತಾಲೂಕುಗಳು)
#ಧಾರವಾಡ (ಭಾಗಶಃ)
#ಹಾವೇರಿ (ಭಾಗಶಃ)
#ಚಾಮರಾಜನಗರ (ಭಾಗಶಃ)
#ಮೈಸೂರು (ಭಾಗಶಃ)
#ದಾವಣಗೆರೆ (ಚನ್ನಗಿರಿ ಮುಂತಾದ ಭಾಗಶಃ ತಾಲೂಕುಗಳು).
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯು ಕೇವಲ ಕಾಂಕ್ರೀಟ್ ಕಾಮಗಾರಿಗಳಿಗೆ ಸೀಮಿತವಾಗದೆ, ಮಲೆನಾಡಿನ ಸೂಕ್ಷ್ಮ ಪರಿಸರವನ್ನು ರಕ್ಷಿಸುತ್ತಲೇ ಜನರ ಮೂಲಭೂತ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ಸಮತೋಲನದಲ್ಲಿಡುವ ಪ್ರಮುಖ ಆಡಳಿತಾತ್ಮಕ ವೇದಿಕೆಯಾಗಿದೆ ಇದನ್ನು ಆರ್. ಎಂ. ಮಂಜುನಾಥ ಗೌಡರು ಸರಿಯಾಗಿ ಬಳಸಿಕೊಂಡರೆ ಶಿವಮೊಗ್ಗ ಜಿಲ್ಲೆಯಿಂದ ಸಮರ್ಥ ನಾಯಕತ್ವ ಅವರಿಗೆ ದೊರೆಯಲಿದೆ.
#manjunathgowda #dcc #madb #chairmen #kasturiranganreport #westernghats
Comments
Post a Comment