#ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು #ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ #ಅವರ_ತಂದೆ_ಪೋಟೋ_ನೋಡಿದಾಗ 1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ. ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್ ಮಗಳು ಲಲಿತಮ್ಮನಿಗೆ ಸುಮಾರು 35 ವರ್ಷದ ನಂತರ ಅವರ ತಂದೆಯ ಪೋಟೋ ನೋಡಿದಾಗ... #photo #memories #Anandapuram #yadehalli #gowthamapura #vishwakarma #Acharya #carpentar ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"... 35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು. ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು. ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್...