ಒಂದು ಜಿಲ್ಲೆ ಒಂದು ಬೆಳೆ, ಕೇ೦ದ್ರ ಸರ್ಕಾರದ ಆತ್ಮ ನಿರ್ಬರ್ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ.
#ಒಂದು_ಜಿಲ್ಲೆ_ಒಂದು_ಬೆಳೆ_ಏನಿದು? #ಈ_ಯೋಜನೆಯಲ್ಲಿ_ಶಿವಮೊಗ್ಗದ್ದು_ಅನಾನಸ್ #ಅನಾನಸ್_ಹಣ್ಣು_ಮತ್ತು_ಸಂಸ್ಕರಣೆ. #ಬನವಾಸಿ_ರೋಪ್_ಸಾಹೇಬರು_ಮಾವಿನಗುಂಡಿ_ಐನಕೈ_ಅಶೋಕಹೆಗ್ಗಡೆ_ಮತ್ತಿಕೊಪ್ಪ_ಜಾನ್_ಪಾಸ್_ಜಯಪ್ರಕಾಶ್_ಹೆಗ್ಗಡೆ_ಅಗ್ರಗಣ್ಯರು. ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಬರ್ ಯೋಜನೆಯಲ್ಲಿ ದೇಶದ ಸುಮಾರು 728 ಜಿಲ್ಲೆಗಳಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಲ್ಲಿ ಶೇಕಡಾ 35% ಸಹಾಯಧನ ಪ್ರೋತ್ಸಾಹದಲ್ಲಿ ಒ0ದೊಂದು ಬೆಳೆಯನ್ನು ಬೆಳೆಸಿ ಸಂಸ್ಕರಿಸಿ ಮಾರಾಟಕ್ಕೆ ಯೋಜನೆ ರೂಪಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ,ಈಗ ಪ್ರಗತಿ ಪರ ಕೃಷಿ ಮಿತ್ರ ನಾಗೇಂದ್ರ ಸಾಗರ್ ದಂಪತಿಗಳಿಗೆ ಕೃಷಿ ಇಲಾಖೆ ಆಸಕ್ತ ಸ್ವಯಂ ಉದ್ಯಮಿಗಳಿಗೆ ಅನಾನಸ್ ಹಣ್ಣು ಸಂಸ್ಕರಣ ಮತ್ತು ಮಾರಾಟ ತರಬೇತಿ ಹಾಗೂ ಇದಕ್ಕೆ ಬೇಕಾದ ಬ್ಯಾಂಕ್ ಸಾಲ ಯೋಜನೆ ಮಂಜೂರಾತಿಗೆ ತಯಾರು ಮಾಡುವ ಜವಾಬ್ದಾರಿ ನೀಡಿದೆ. ಮೊನ್ನೆ ಮೊದಲ ತರಬೇತಿಗೆ 70 ಮಹಿಳೆಯರೇ ಭಾಗವಹಿದ್ದರೆಂದು ಅವರು FB ಪೋಸ್ಟ್ ಮಾಡಿದ್ದಾರೆ. ಖುಷ್ಕಿ ಜಮೀನಲ್ಲಿ ಕಡಿಮೆ ನೀರಿನಲ್ಲಿ ಉಷ್ಣ ಪ್ರದೇಶದಲ್ಲಿ ಬೆಳೆಯುವ ಈ ಅನಾನಸ್ ಮೂಲ ದಕ್ಷಿಣ ಅಮೇರಿಕಾ, ಇದು ಭಾರತಕ್ಕೆ ಪೋರ್ಚುಗೀಸರಿಂದ 1548 ರಲ್ಲಿ ಅವರು ಇಂಡೋನೇಷಿಯದಿಂದ ತಂದ ಬಗ್ಗೆ ಮಾಹಿತಿ ಇದೆ. ಇದಕ್ಕೂ ಹಿಂದೆ ಕ್ರಿಸ್ತ ಪೂರ...