ಅಧಿಕ_ಮಾಸ_2026 ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಆಂಜನೇಯರ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? .... ಈ ಮೂರು ಅಂಜನೇಯ ವಿಗ್ರಹದಲ್ಲಿ ಸಾಲಿಗ್ರಾಮ ಅಳವಡಿಸಿದ್ದಾರೆ. ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ. ಅಧಿಕ ಮಾಸದಲ್ಲಿಯೇ ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ, ಶಿಕಾರಿಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಕದರಮಂಡಲಗಿ ಮತ್ತು 35 ಕಿ.ಮೀ ದೂರದಲ್ಲಿ ಸಾತೇನಹಳ್ಳಿ ಇರುವುದರಿಂದ, ಒಂದೇ ದಿನ ಈ ಮೂರೂ ಕ್ಷೇತ್ರಗಳನ್ನು ಭೇಟಿ ಮಾಡುವುದು ಸುಲಭ. ಈ ಮಾಸದಲ್ಲಿ ದಾನ, ಪೂಜೆ, ವ್ರತ ಮತ್ತು ತೀರ್ಥಯಾತ್ರೆ (ವಿಶೇಷವಾಗಿ ಮಥುರಾ-ವೃಂದಾವನ) ಅತ್ಯಂತ ಫಲದಾಯಕವೆಂದು ಪರಿಗಣಿಸಲಾಗಿದೆ. ಈ ಪವಿತ್ರ ತಿಂಗಳು ಪುರುಷೋತ್ತಮ ಮಾಸ ಅಥವ ಮಲಮಾಸ ಎಂದು ಕರೆಯುತ್ತಾ...