Skip to main content

Posts

Showing posts with the label Ripponpet T.R.Krishnappa activist

Blog number 1600. ಜನಪರ ಹೋರಾಟಗಾರ ರಿಪ್ಪನ್ ಪೇಟೆಯ 80 ವರ್ಷದ ತರುಣ ಟಿ.ಆರ್.ಕೃಷ್ಣಪ್ಪ. (15- ಜೂನ್ -2021)

#ಶಿವಮೊಗ್ಗ_ಜಿಲ್ಲೆ_ಸ್ಮಾರ್ಟ್_ಜಿಲ್ಲೆ_ಮಾಡುವ_ಕನಸು_ಮುಖ್ಯಮಂತ್ರಿ_ಯಡೂರಪ್ಪನವರದ್ದು. #ಜಿಲ್ಲೆಗೆ_ಹರಿದು_ಬರುತ್ತಿರುವ_ಹಣವೂ_ಸಾವಿರಾರು_ಕೋಟಿ. #ಆದರೆ_ಅದರ_ಅನೂಷ್ಟಾನ_ಸರಿಇಲ್ಲ_ಎ೦ದು_ರಿಪ್ಪನ್ಪೇಟೆಯ_ಹೋರಾಟಗಾರ_ಟಿಆರ್_ಕೃಷ್ಣಪ್ಪ_ತೋರಿಸಿದ್ದಾರೆ.    ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ವಿಶಿಷ್ಟ ರೀತಿಯಲ್ಲಿ ಸಮಾಜದ ಅಂಕು ಡೊಂಕು ಎತ್ತಿ ತೋರಿಸಿ ಅದರ ಪರಿಹಾರಕ್ಕೆ ಕಾರಣಕರ್ತರಾಗುತ್ತಾರೆ ಅದೂ ಒಬ್ಬಂಟಿ ಹೋರಾಟ.   ಇವರ ಹೋರಾಟದಿಂದ ಸಂಬಂದ ಪಟ್ಟ ಇಲಾಖೆಗೆ ಮತ್ತು ಭ್ರಷ್ಟಾಚಾರ ಮಾಡಿದವರಿಗೆ ಯಾವಾಗಲೂ ಆತಂಕವೇ, ಕಾನೂನು ಸುವ್ಯವಸ್ಥೆ ಮಾಡುವ ಪೋಲಿಸರಿಗೆ ತಲೆ ನೋವು, ಸಾರ್ವಜನಿಕರಿಗೆ ಮನರಂಜನೆ, ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಪ್ರಸರಣ, ಪತ್ರಿಕೆಗಳಿಗೆ ಒಳ್ಳೆ ಸುದ್ದಿ ಕೂಡ.   80 ರ ಮುಪ್ಪನಲ್ಲಿ ಇದೆಲ್ಲ ಬೇಡಿತ್ತು ಎನ್ನುವ ಮಾತು ಇವರ ಹಿತೈಷಿಗಳಲ್ಲಿ, ಮೈ ಕೈ ಕೆಸರು ಮಾಡಿಕೊಂಡು ಮಾಡುವ ಹೋರಾಟಕ್ಕಿಂತ ಸೌಮ್ಯ ರೀತಿಯ ಬಿಳಿ ಕಾಲರ್ ಸಂಸ್ಕೃತಿಯ ಪತ್ರಿಕಾ ಹೇಳಿಕೆ, ಖಂಡನಾ ಹೇಳಿಕೆ, ಮನವಿ ಕೊಡುವುದು ಮಾಡಬಾರದೇ ಎಂಬ ಅಭಿಪ್ರಾಯ ಇವರನ್ನು ಬಲ್ಲ ಪತ್ರಕರ್ತರು ಮತ್ತು ಜನಪ್ರತಿನಿದಿಗಳದ್ದು ಆದರೆ 20 ವರ್ಷದ ಯುವಕರ ಮೈಕಟ್ಟಿನ ಪಿಟ್ ನೆಸ್ ಇರುವ ಕೃಷ್ಣಪ್ಪ ಇದಾವುದನ್ನು ಗಂಬೀರವಾಗಿ ತೆಗೆದುಕೊಳ್ಳದ ಹಠಮಾರಿ ಕೂಡ ಆದ್ದರಿಂದ ಇವರನ್ನು ಅರೆ ಹುಚ್ಚರೆಂದು ಪ್ರೀತಿಯಿಂದ ಗದ...