#ಶಿವಮೊಗ್ಗ_ಜಿಲ್ಲೆ_ಸ್ಮಾರ್ಟ್_ಜಿಲ್ಲೆ_ಮಾಡುವ_ಕನಸು_ಮುಖ್ಯಮಂತ್ರಿ_ಯಡೂರಪ್ಪನವರದ್ದು.
#ಜಿಲ್ಲೆಗೆ_ಹರಿದು_ಬರುತ್ತಿರುವ_ಹಣವೂ_ಸಾವಿರಾರು_ಕೋಟಿ.
#ಆದರೆ_ಅದರ_ಅನೂಷ್ಟಾನ_ಸರಿಇಲ್ಲ_ಎ೦ದು_ರಿಪ್ಪನ್ಪೇಟೆಯ_ಹೋರಾಟಗಾರ_ಟಿಆರ್_ಕೃಷ್ಣಪ್ಪ_ತೋರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ವಿಶಿಷ್ಟ ರೀತಿಯಲ್ಲಿ ಸಮಾಜದ ಅಂಕು ಡೊಂಕು ಎತ್ತಿ ತೋರಿಸಿ ಅದರ ಪರಿಹಾರಕ್ಕೆ ಕಾರಣಕರ್ತರಾಗುತ್ತಾರೆ ಅದೂ ಒಬ್ಬಂಟಿ ಹೋರಾಟ.
ಇವರ ಹೋರಾಟದಿಂದ ಸಂಬಂದ ಪಟ್ಟ ಇಲಾಖೆಗೆ ಮತ್ತು ಭ್ರಷ್ಟಾಚಾರ ಮಾಡಿದವರಿಗೆ ಯಾವಾಗಲೂ ಆತಂಕವೇ, ಕಾನೂನು ಸುವ್ಯವಸ್ಥೆ ಮಾಡುವ ಪೋಲಿಸರಿಗೆ ತಲೆ ನೋವು, ಸಾರ್ವಜನಿಕರಿಗೆ ಮನರಂಜನೆ, ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಪ್ರಸರಣ, ಪತ್ರಿಕೆಗಳಿಗೆ ಒಳ್ಳೆ ಸುದ್ದಿ ಕೂಡ.
80 ರ ಮುಪ್ಪನಲ್ಲಿ ಇದೆಲ್ಲ ಬೇಡಿತ್ತು ಎನ್ನುವ ಮಾತು ಇವರ ಹಿತೈಷಿಗಳಲ್ಲಿ, ಮೈ ಕೈ ಕೆಸರು ಮಾಡಿಕೊಂಡು ಮಾಡುವ ಹೋರಾಟಕ್ಕಿಂತ ಸೌಮ್ಯ ರೀತಿಯ ಬಿಳಿ ಕಾಲರ್ ಸಂಸ್ಕೃತಿಯ ಪತ್ರಿಕಾ ಹೇಳಿಕೆ, ಖಂಡನಾ ಹೇಳಿಕೆ, ಮನವಿ ಕೊಡುವುದು ಮಾಡಬಾರದೇ ಎಂಬ ಅಭಿಪ್ರಾಯ ಇವರನ್ನು ಬಲ್ಲ ಪತ್ರಕರ್ತರು ಮತ್ತು ಜನಪ್ರತಿನಿದಿಗಳದ್ದು ಆದರೆ 20 ವರ್ಷದ ಯುವಕರ ಮೈಕಟ್ಟಿನ ಪಿಟ್ ನೆಸ್ ಇರುವ ಕೃಷ್ಣಪ್ಪ ಇದಾವುದನ್ನು ಗಂಬೀರವಾಗಿ ತೆಗೆದುಕೊಳ್ಳದ ಹಠಮಾರಿ ಕೂಡ ಆದ್ದರಿಂದ ಇವರನ್ನು ಅರೆ ಹುಚ್ಚರೆಂದು ಪ್ರೀತಿಯಿಂದ ಗದರಿಸುವವರೂ ಇದ್ದಾರೆ.
ಇವತ್ತು ಕೃಷ್ಣಪ್ಪರ ಪ್ರತಿಭಟನೆ ವಿಭಿನ್ನವಾಗಿರುವ ವಿಡಿಯೋ ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಟ್ರಾವೆಲ್ಸ್ ಮಾಲಿಕರಾದ ಶಿವಕುಮಾರ್ ಪಾರ್ವರ್ಡ್ ಮಾಡಿದ್ದಾರೆ ಇದು ರಿಪ್ಪನ್ ಪೇಟೆಯಿಂದ ಆನಂದಪುರಂಗೆ ಬರುವ ರಾಜ್ಯ ಹೆದ್ದಾರಿ, ರಿಪ್ಪನ್ ಪೇಟೆ ಅಂಚೆ ಕಚೇರಿ ಎದರು ಕೆರೆ ಆಗಿದೆ, ಮುಂಗಾರು ಪ್ರಾರಂಭದ ಎರೆಡು ದಿನದಲ್ಲೇ ಈ ಪರಿಸ್ಥಿತಿ ಆದರೆ ಮುಂದಿನ ನಾಲ್ಕು ತಿಂಗಳ ಮಳೆಗಾಲದಲ್ಲಿ ಏನಾಗಬಹುದು ಎಂಬ ಪ್ರಶ್ನೆ ಇಲ್ಲಿದೆ, ತಕ್ಷಣ ಸರಿ ಮಾಡಿ ಎ೦ಬ ಒತ್ತಾಯವೂ ಅಡಗಿದೆ.
ಇದೆಲ್ಲದರ ಮಧ್ಯೆ ಜಾಗೃತ ಸಮಾಜಕ್ಕೆ ಸವಾಲು ಇದೆ ಜಿಲ್ಲೆಗೆ ಮುಖ್ಯಮಂತ್ರಿಗಳು ತಂದ ಸಾವಿರಾರು ಕೋಟಿ ಸದ್ವಿನಿಯೋಗ ಆಗುತ್ತಿದೆಯಾ? ಈ ರೀತಿ ಕಳಪೆ ಕಾಮಗಾರಿಯಿಂದ ಜನರ ತೆರಿಗೆ ಹಣ ಪೋಲಾಗುತ್ತಿಲ್ಲವೆ? ಎಂಬುದು.
ಆದರೆ ಇದಕ್ಕೆಲ್ಲ ಉತ್ತರದಾಯಿತ್ವ ಯಾರು? ಈ ವ್ಯವಸ್ಥೆ ಸರಿ ಆಗುತ್ತಾ? ಎನ್ನುವುದಕ್ಕೆ ಉತ್ತರ ಮತ್ತು ಪರಿಹಾರ ಮರಿಚಿಕೆಯೇ ಆಗಿದೆ.
#ಯಾರು_ಏನಾದರೂ_ಹೇಳಲಿ_ಈರೀತಿ_ವಿಷಲ್_ಊದುವ_ಟಿಆರ್_ಕೃಷ್ಣಪ್ಪಗೆ_ನನ್ನ_ಬೆಂಬಲ.
Comments
Post a Comment