#ಶಾಲೆ_ಪ್ರಾರಂಭದ_ಬಗ್ಗೆ_ಇದಕ್ಕಿ೦ತ_ತಜ್ಞರ_ಉತ್ತರ_ಬೇಕಾ?
ಶಿಕ್ಷಣ ಸಚಿವ ಸುರೇಶ್ ಕುಮಾರಗೆ ಅಚಾನಕ್ ಬೇಟಿ ಆದ ಒಂದನೆ ತರಗತಿ ವಿದ್ಯಾಥಿ೯ನಿ ಇವರಿಬ್ಬರ ಸಂಬಾಷಣೆ ನಿಜಕ್ಕೂ ಸಂವೇದನಾಶೀಲ.
ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು.
"ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು ಮಹನ್ಯಾ ಎಂಬ ಈ ಬಾಲೆ.
"ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಕೇಳಿದಳು.
" ಯಾವಾಗ ಶುರು ಮಾಡಬೇಕು?" ಎಂಬ ನನ್ನ ಪ್ರಶ್ನೆಗೆ "ಕೊರೋನಾ ಹೋದ ಮೇಲೆ" ಎಂದಳು First Std ಓದುತ್ತಿರುವ ಈ ಚಿನ್ನಾರಿ.
"ತುಂಬಾ ದಿನ ಕೊರೋನಾ ಹೋಗದಿದ್ದರೆ" ಎಂದು ನಾನು ಪ್ರಶ್ನಿಸಿದ್ದಕ್ಕೆ "ಇಲ್ಲ. ಕೊರೋನಾ ಹೋದ ಮೇಲೇ ಓಪನ್ ಮಾಡಿ" ಎಂದಳಾ ಪೋರಿ.
"ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ" ಎಂಬ ನನ್ನ ಪ್ರಶ್ನೆಗೆ "ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ" ಎಂದು ಬೀಗುತ್ತಾ ನುಡಿದಳು ಮಹನ್ಯಾ.
ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.
Comments
Post a Comment