Blog number 1580. ಜಂಪಿಂಗ್ ಚಿಕನ್ ಹೆಸರಲ್ಲಿ ಸ್ಟಾರ್ ಹೋಟೆಲ್ ಗಳಲ್ಲಿ ವಿದೇಶಿ ಪ್ರವಾಸಿಗರಿಗೆ ತಯಾರಾಗುವ ಪಶ್ಚಿಮ ಘಟ್ಟದ ಬುಲ್ ಪ್ರಾಗ್ ತೊಡೆಗಳ ಸೂಪ್ ಮತ್ತು ಪ್ರೈ.
#ಪಶ್ಚಿಮಘಟ್ಟದ_ಕಪ್ಪೆಗಳಿಗೆ_ಭಾರೀ_ಬೇಡಿಕೆ
#ಅರಣ್ಯಇಲಾಖೆ_ಈ_ಕಪ್ಪೆ_ಸಾಗಾಟಕ್ಕೆ_ನಿರ್ಬಂದ_ವಿದಿಸಿದೆ
#ಜಂಪಿಂಗ್_ಚಿಕನ್_ಹೆಸರಲ್ಲಿ_ಸ್ಟಾರ್_ಹೋಟೆಲಗಳಲ್ಲಿ_ಲಭ್ಯವಿದೆ.
#ದೊಡ್ಡ_ಗಾತ್ರದ_ಬುಲ್_ಪ್ರಾಗ್_ಬೆಲೆ_5ರಿಂದ_7ಸಾವಿರ
#ಚೀನಾ_ರಷ್ಯಾ_ಪ್ರವಾಸಿಗಳಿಗೆ_ಇದು_ವಿಶೇಷ_ಖಾದ್ಯ
ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ 5000 ಟನ್ ಕಪ್ಪೆ ಕಾಲು ರಪ್ತು ಮಾಡುವುದು ಇಂಡೋನೇಷಿಯ,
ಪ್ರೆಂಚ್ ದೇಶದಲ್ಲಿ ಇದು ಸುಪ್ರಸಿದ್ಧ ಖಾದ್ಯವಾಗಿದೆ.
1970 ರಲ್ಲಿ ತಮಿಳುನಾಡಿನಿಂದ ತಂಡ ತಂಡವಾಗಿ ನಮ್ಮ ಊರಿನ ಮತ್ತು ಸುತ್ತ ಮುತ್ತಲಿನ ಕೆರೆ, ಹೊಳೆ ದಂಡೆಗಳಲ್ಲಿ ಕ್ಯಾಂಪ್ ಹಾಕಿ ರಾತ್ರಿ ಗ್ಯಾಸ್ ಲೈಟ್ ಬೆಳಕಿನಲ್ಲಿ ದೊಡ್ಡ ಗಾತ್ರದ ಬುಲ್ ಪ್ರಾಗ್ ಹಿಡಿದು ಖಾಲಿ ಆದ ಟಾರ್ ಡ್ರಂಗಳಲ್ಲಿ ತುಂಬಿ ಲಾರಿಗಳಲ್ಲಿ ಎಲ್ಲಿಗೋ ಒಯ್ಯುವುದು ನೋಡುತಿದ್ದೆವು.
ನಂತರ ಸ್ಥಳಿಯರು ಅವರಂತೆ ಈ ಕಪ್ಪೆಗಳನ್ನು ಹಿಡಿದು ತಮಿಳುನಾಡಿನ ಗುತ್ತಿಗೆ ದಾರನಿಗೆ ಮಾರುವ ಮೂಲಕ ಹೊಟ್ಟೆ ಪಾಡು ಕಂಡು ಹಿಡಿದಿದ್ದರು ಆಗೆಲ್ಲ ಅತ್ಯಂತ ಬಡತನದ ಕಷ್ಟದ ದಿನಗಳು ನಮ್ಮ ಊರಿನ ಅನೇಕರಿಗೆ ಈ ಉದ್ಯೋಗ ಖಾತ್ರಿ ನೀಡಿತ್ತು ಆದರೆ ಆ ದಿನಗಳಲ್ಲಿ ಕಪ್ಪೆ ಹಿಡಿಯುವುದು ನಿಕೃಷ್ಟ ಉದ್ಯೋಗ ಎಂಬ ಭಾವನೆ ಇದ್ದಿದ್ದರಿಂದ ಇವರೆಲ್ಲ ರಹಸ್ಯವಾಗಿ ಕಪ್ಪೆ ಶಿಕಾರಿ ಮಾಡುತ್ತಿದ್ದರು.
ನಂತರ ಅನೇಕ ವರ್ಷ ಈ ಕೆಲಸ ನಡೆಯುತ್ತಿತ್ತು ಆದರೆ ಇವರಾರು ಕಪ್ಪೆ ತಿನ್ನುವುದನ್ನು ಮಾತ್ರ ಕಲಿಯಲಿಲ್ಲ.
ಆ ಕಾಲದಲ್ಲಿ ರಾತ್ರಿ ಕೊಳ್ಳಿ ದೆವ್ವ ಓಡಾಡುತ್ತದೆ ಎಂದು ಭಯ ಪಡುವ ಜಾಗಗಳೆಲ್ಲ ಈ ಕಪ್ಪೆ ಶಿಕಾರಿಗಾರರ ಗ್ಯಾಸ್ ಲೈಟ್ ನಿಂದ ಕೊಳ್ಳಿ ದೆವ್ವಗಳೇ ನಾಪತ್ತೆ ಆಯಿತು.
ಈಗಲೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸುತ್ತ ಮುತ್ತ ಮತ್ತು ಕಾರವಾರದ ಪ್ರದೇಶದಲ್ಲಿ ಈ ಕಪ್ಪೆಗಳನ್ನು ಹಿಡಿದು ಗೋವಾದ ಸ್ಟಾರ್ ಹೋಟೆಲ್ ಗಳಿಗೆ ಸರಬರಾಜು ಮಾಡುತ್ತಾರೆ ಆದರೆ ಈ ಕಪ್ಪೆ ವಹಿವಾಟು ಪಶ್ಚಿಮ ಘಟ್ಟದಲ್ಲಿ ಅರಣ್ಯ ಇಲಾಖೆ ನಿರ್ಬಂದಿಸಿದ್ದರಿಂದ ರಹಸ್ಯವಾಗಿ ನಡೆದಿದೆ.
ಒಂದು ಕಿಲೋ ಬುಲ್ ಪ್ರಾಗ್ ಗೆ 5 ರಿಂದ 7 ಸಾವಿರ ಬೆಲೆ ಇದೆ, ಇದರ ಹಿಂಬಾಗದ ತೊಡೆಗಳಿಂದ ಮಾಡುವ ಖಾದ್ಯಗಳಿಗೆ ಗೋವಾಕ್ಕೆ ಬರುವ ರಷ್ಯಾ ಮತ್ತು ಚೀನಾದ ಪ್ರವಾಸಿಗಳಿಂದ ಭಾರೀ ಬೇಡಿಕೆ ಇದೆ.
ಇದೆಲ್ಲ ಈ ವರ್ಷದ ಮುಂಗಾರು ಮಳೆ ನಿರೀಕ್ಷೆಯ ಚರ್ಚೆಯಲ್ಲಿ ನೆನಪಾಯಿತು.
Comments
Post a Comment