#ಇನ್ನೆಷ್ಟು_ಶ್ರದ್ದಾಂಜಲಿ_ಬರೆಯಲಿ?
#ಕಾಸರಗೋಡು_ವಾಸಿ_ವಿಚಾರವಂತ_ಮಹಿಳೆ_ಭಾರತಿಭಟ್ಟರು
ಪರಸ್ಪರ ಪರಿಚಯ ಇಲ್ಲ ಆದರೆ ಪೇಸ್ ಬುಕ್ ನಲ್ಲಿ ಅತ್ಯಂತ ಆಪ್ತರು, ನಮ್ಮ ಸಮಾನ ವಿಚಾರಗಳು ನಮ್ಮನ್ನೆಲ್ಲ ಒ0ದು ಸಮಾನ ವೇದಿಕೆಗೆ ತಂದಿತ್ತು ದೂರದ ಕೇರಳದ ಕಮ್ಯುನಿಸ್ಟ್ ಪಕ್ಷದ ಆಡಳಿತ ಇವರಿಗೆ ಇಷ್ಟವಿತ್ತು ಹಾಗಾಗಿ ಅದರ ಪರವಾಗಿಯೇ ಅವರು ಬಹಿರಂಗ ಒಲವು ತೋರಿಸುತ್ತಿದ್ದರು.
ಮೇ 31ಕ್ಕೆ ಇವರ ಕೊನೆಯ ಪೋಸ್ಟ್ (ಅವತ್ತು ಅನೇಕ ಪೋಸ್ಟ್ ರೀ ಪೋಸ್ಟ್) ಮಾಡಿದ್ದು, ಅವರ FB ಗಿಂತ ನಮ್ಮೆಲ್ಲರ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಚಚಿ೯ಸುತ್ತಿದ್ದರು.
ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ಇವರು ಕಾಸರಗೋಡಿನಿಂದ ಬರೆಯುತ್ತಿದ್ದ ಲೇಖನ ಕಾಸರಗೋಡಿಗೆ ಮಂಗಳೂರು ಸಂಪರ್ಕ ಎಷ್ಟು ಮುಖ್ಯ ಎಂದು ಮತ್ತು ಅದನ್ನು ತೆರವು ಮಾಡುವ ಅನಿವಾಯ೯ತೆ ಹೇಳುತ್ತಿತ್ತು.
ನೇರ ನಿಷ್ಟುರವಾಗಿ ನ್ಯಾಯದ ಪರ ಬರೆಯುತ್ತಿದ್ದ #ಭಾರತಿ_ಭಟ್ಟರ ದೈಯ೯ ನನಗೆ ಇಷ್ಟವಾಗಿತ್ತು, ಇವತ್ತು ಇವರು ತಮ್ಮ ಇಹಲೋಕ ಯಾತ್ರೆ ತ್ಯಜಿಸಿದ ಸುದ್ದಿ ಪೇಸ್ ಬುಕ್ ನಲ್ಲಿ ನೋಡಿ ತುಂಬಾ ನೋವಾಯಿತು.
ಇವರ ಆತ್ಮಕ್ಕೆ ಸದ್ಗತಿ ಸ್ವರ್ಗ ಪ್ರಾಪ್ತಿ ನೀಡೆಂದು ದೇವರಲ್ಲಿ ಪ್ರಾರ್ಥಿಸಿದೆ
Comments
Post a Comment