Blog number 1574. ಕಳೆದ ವರ್ಷ ಸಾಗರ ತಾಲೂಕಿನ ಮಸೀದಿಗಳಲ್ಲಿ ಪ್ರಾರ್ಥನೆ ನಂತರ ಸಂವಿಧಾನ ಪೀಠಿಕೆ ಸಾಮೂಹಿಕ ಪಠಣ ಮಾಡುವ ಕಾರ್ಯಕ್ರಮ ವಕೀಲರಾದ ಮೊಹಮ್ಮದ್ ಜಿಕ್ರಿಯಾ ಪ್ರಾರಂಬಿಸಿದ್ದರು.
#ಸಂವಿದಾನದ_ಪೀಠಿಕೆ_ಓದು_ನಿತ್ಯ_ಶಾಲಾ_ಪ್ರಾರ್ಥನೆ_ನಂತರ_ಈಗ_ಕಡ್ಡಾಯ
#ಸಾಗರದ_ವಕೀಲರಾದ_ಜಿಕ್ರಿಯಾ_ಒಂದು_ವರ್ಷದ_ಹಿಂದೆ_ಈ_ಪ್ರಯತ್ನ_ಮಾಡಿದ್ದರು.
#ಕಳೆದ_ವರ್ಷ_ಸಾಗರ_ತಾಲ್ಲೂಕಿನ_ಮಸೀದಿಗಳಲ್ಲಿ_ಇದನ್ನು_ಓದಿದ್ದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಾಗರದ ವಕೀಲರಾದ ಜಿಕ್ರಿಯಾ ಅವರು ನನಗೆ ಪೋನಾಯಿಸಿ ಆನಂದಪುರಂ ಮಸೀದಿ ಕೆಳದಿಯ ಯಾವ ಅರಸರು ನಿರ್ಮಿಸಿದ್ದು ಅಂತ ಮಾಹಿತಿ ಕೇಳಿದ್ದರು.
ನಾನು ಅವರಿಗೆ 1632ರಲ್ಲಿ ಕೆಳದಿ ರಾಜ ವೀರಭದ್ರ ನಾಯಕರು ಆನಂದಪುರಂ ಮಸೀದಿ ನಿರ್ಮಿಸಿದ್ದ ಬಗ್ಗೆ, ಟಿಪ್ಪು ಸುಲ್ತಾನರು ಈ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ ಬಗ್ಗೆ, ಮೈಸೂರು ರಾಜರು ಜಮೀನು ದಾನ ನೀಡಿದ ತಾಮ್ರಪತ್ರ, ಪ್ರದಾನ ಮಂತ್ರಿಗಳಾದ ಜವಾಹರಲಾಲ್ ನೆಹರು ತಮ್ಮ ಪುತ್ರಿ ಇಂದಿರಾ ಗಾಂಧಿ ಜೊತೆ ಜೋಗ್ ಫಾಲ್ಸ್ ವೀಕ್ಷಣೆಗೆ ಹೋಗುವಾಗ ಈ ಮಸೀದಿಗೆ ಬೇಟಿ ನೀಡಿ ಈ ಮಸೀದಿ ಬಾವಿಯ ನೀರು ಸೇವಿಸಿದ ಬಗ್ಗೆ ತಿಳಿಸಿ ಇದೆಲ್ಲ ಮಾಹಿತಿ ಏಕೆ ಅಂದಾಗ ಅವರು ತಾಲ್ಲೂಕಿನ ಎಲ್ಲಾ ಮಸೀದಿಗಳಲ್ಲಿ ನಮ್ಮ ದೇಶದ ಸಂವಿದಾನದ ಪೀಠಿಕೆ ಶುಕ್ರವಾರದ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಪಠಿಸುವ ಕಾರ್ಯಕ್ರಮ ಹಮ್ಮಿ ಕೊಂಡ ಬಗ್ಗೆ ತಿಳಿಸಿದ್ದರು.
ಈಗ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ನಮ್ಮ ಸಂವಿದಾನದ ಪೀಠಿಕೆಯನ್ನು ಪ್ರಾರ್ಥನೆ ನಂತರ ಕಡ್ಡಾಯವಾಗಿ ಪಠಣ ಮಾಡಬೇಕೆಂಬ ಆದೇಶ ಹೊರಡಿಸಿದೆ.
ಒಂದು ವರ್ಷದ ಹಿಂದೆಯೇ ಸಾಗರ ತಾಲೂಕಿನ ಮಸೀದಿಗಳಲ್ಲಿ ಈ ಕಾರ್ಯ ನಿರ್ವಹಿಸುವ ಮೂಲಕ ಸಾಗರದ ವಕೀಲರಾದ ಮೊಹಮ್ಮದ್ ಜಿಕ್ರಿಯ ರಾಜ್ಯಕ್ಕೆ ಮಾದರಿ ಆಗಿದ್ದಾರೆ.
ಈಗ ರಾಜ್ಯ ಸರ್ಕಾರವೂ ಇದನ್ನು ರಾಜ್ಯದ ಶಾಲೆಗಳಲ್ಲಿ ಪ್ರಾರಂಬಿಸಿರುವುದು ಕಾಕತಾಳಿಯ ಆದರೂ ಇದನ್ನು ಒಂದು ವರ್ಷದ ಹಿಂದೆಯೇ ಸಾಗರದ ವಕೀಲರು ಪ್ರಾರಂಬಿಸಿದ್ದು ವಿಶೇಷ ಮತ್ತು ಆಶ್ಚಯ೯ವೇ ಸರಿ.
ವಕೀಲರಾದ ಮೊಹಮದ್ ಜಿಕ್ರಿಯರಿಗೆ ಅಭಿನಂದಿಸಲೇ ಬೇಕು.
Comments
Post a Comment