Blog number 1623. ಪುಸ್ತಕ ಮುದ್ರಣ ಮಾರಾಟ ಈಗ ಸುಲಭ ಮತ್ತು ಲಾಭದಾಯಕವಾಗಲಿದೆ ಹೊಸ ಮುದ್ರಣ ತಂತ್ರಜ್ಞಾನದಲ್ಲಿ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಿಂದ.
#ನಿಮ್ಮ_ಪುಸ್ತಕ_ಮುದ್ರಣ_ಈಗ_ಸುಲಭ_ಮತ್ತು_ಲಾಭದಾಯಿಕ
#ಬರಹಗಾರರಿಗೆ_ದೊಡ್ಡ_ಸವಾಲು
#ಬರೆದ_ಪುಸ್ತಕ_ಪ್ರಕಟ_ಮಾಡುವುದು.
#ಇದಕ್ಕೆ_ಪರಿಹಾರವಿದೆ_ನವೀನ_ಮುದ್ರಣ_ತಂತ್ರಜ್ಞಾನ
#ಅಂತರಾಷ್ಟ್ರೀಯ_ಪಬ್ಲಿಷರಗಳಿಂದ
#ಇಂಗ್ಲೀಷ್_ಸೇರಿ_ಎಲ್ಲಾ_ಭಾರತೀಯ_ಭಾಷೆಗಳಲ್ಲಿ_ಸಾಧ್ಯವಿದೆ.
ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಪ್ರತಿಷ್ಟಿತ ಪ್ರಕಾಶನಗಳು ಮುದ್ರಿಸಿ ಮಾರಾಟ ಮಾಡಲು ಮುಂದೆ ಬರುತ್ತದೆ ಮತ್ತು ಲಾಭಾಂಶವನ್ನು ಬರಹಗಾರರ ಖಾತೆಗೆ ಜಮಾ ಮಾಡುತ್ತದೆ.
ಆದರೆ ಹೊಸ ಬರಹಗಾರರಿಗೆ ಪ್ರಾರಂಭದಲ್ಲೇ ಈ ಅವಕಾಶ ಸಿಗಲು ಸಾಧ್ಯವಿಲ್ಲ ಆದ್ದರಿಂದ ಅನೇಕ ಬರಹಗಾರರ ಪುಸ್ತಕ ಮುದ್ರಿಸಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಬರಹಗಾರರೇ ಪುಸ್ತಕ ಮುದ್ರಿಸಿ ಮಾರಿಕೊಳ್ಳಬೇಕು ಅಥವ ಸರಕಾರದ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜುದಾರರ ಮೊರೆ ಹೋಗಬೇಕು.
200 ರಿಂದ 250 ಪುಟಗಳ ಪುಸ್ತಕ ಬರಹಗಾರರೇ ಪ್ರಕಟಿಸಲು 70 ರಿಂದ 80 ಸಾವಿರ ಹಣ ವಿನಿಯೋಗಿಸ ಬೇಕು ಮತ್ತು ಕನಿಷ್ಟ 1000 ಪ್ರತಿ ಮುದ್ರಿಸ ಬೇಕು.
ನಂತರ ಮುದ್ರಿತ ಈ ಪುಸ್ತಕ ಮಾರಾಟದ ಜವಾಬ್ದಾರಿ ಬರಹಗಾರರದ್ದೆ.
ಅಥವ ಸರಕಾರಿ ಗ್ರಂಥಾಲಯಗಳಿಗೆ ಪ್ರತಿ ವರ್ಷ ಪುಸ್ತಕ ಮಾರಾಟ ಮಾಡುವ ಪ್ರಕಾಶಕರನ್ನ ಹಿಡಿಯಬೇಕು ಇವರು ಒಂದು ಸಾವಿರ ಪ್ರತಿ ಮುದ್ರಿಸಿ ಅದರಲ್ಲಿ 100 ಪ್ರತಿ ಬರಹಗಾರರಿಗೆ ಸಂಭಾವನೆ ಅಥವ ಗೌರವ ಪ್ರತಿ ಆಗಿ ನೀಡಿ ಉಳಿದ 900 ಪ್ರತಿ ಅವರು ರಾಜ್ಯ ಗ್ರಂಥಾಲಯಗಳಿಗೆ ಮಾರಿಕೊಳ್ಳುತ್ತಾರೆ ಇದರಲ್ಲಿ ಬೇರಾವುದೇ ಲಾಭಾಂಶ ದೊರೆಯುವುದಿಲ್ಲ.
ಬರಹಗಾರರಿಗೆ ಅಥವ ಯಾವುದೇ ಓದುಗರಿಗೆ ನಂತರ ಒಂದು ಪ್ರತಿ ಬೇಕೆಂದರೂ ಸಿಗುವುದಿಲ್ಲ ಮತ್ತು ಪುನರ್ ಮುದ್ರಣ ಕೂಡ ಅಸಾಧ್ಯ.
ಈಗಿನ ಹೊಸ ತಂತ್ರಜ್ಞಾನದಲ್ಲಿ ಆದುನಿಕ ಮುದ್ರಣ ಯಂತ್ರದಲ್ಲಿ ಕೇವಲ ಹತ್ತು ಪುಸ್ತಕ ಮಾತ್ರ ಮುದ್ರಣ ಮಾಡಿ ಬೈಂಡಿಂಗ್ ಎಲ್ಲಾ ಮಾಡುವ ಯಂತ್ರಗಳು ಬಂದಿದೆ ಆದರೆ ಈ ದುಭಾರಿ ಈ ಮುದ್ರಣ ಯಂತ್ರ ಭಾರತದಲ್ಲಿ ಮೊದಲಿಗೆ ಇರಲಿಲ್ಲ ಈಗ ಆಮದಾಗಿ ಅಲ್ಲಲ್ಲಿ ಸ್ಥಾಪನೆ ಆಗುತ್ತಿದೆ ಇದರಿಂದ ಅನೇಕ ವಿದೇಶಿ ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಬಿಸಿದೆ.
ಇದರಿಂದ ಹೊಸ ಬರಹಗಾರರಿಗೆ ಅವರು ಬರೆದ ಪುಸ್ತಕಗಳು ಸುಲಭವಾಗಿ ಪ್ರಕಟವಾಗಿ ಆ ಸಂಸ್ಥೆಗಳು ನೇರವಾಗಿ ಮಾರಾಟದ ಜೊತೆಗೆ ಅಮೇಜಾನ್ / ಪ್ಲಿಪ್ ಕಾರ್ಟ್ ಎಂಬ ಆನ್ ಲೈನ್ ಪ್ಲಾಟ್ ಪಾರಂಗಳಲ್ಲೂ ಮಾರಾಟ ಮಾಡುತ್ತದೆ ಮತ್ತು ಕಿಂಡಲ್ ಗಳಲ್ಲಿ ಇ- ಪುಸ್ತಕವೂ ವಾಚಕರಿಗೆ ಸಿಗುತ್ತದೆ.
ಇದಕ್ಕಾಗಿ ಶೇಕಡಾ 30% ಲಾಭಾಂಶ ಬರಹಗಾರರಿಗೆ ನೀಡುವ 10 ವರ್ಷದ ಕರಾರು ಬರಹಗಾರ ಮತ್ತು ಪ್ರಕಾಶರ ನಡುವೆ ಮಾಡಿಕೊಳ್ಳುತ್ತದೆ.
ಪುಸ್ತಕ ನಿರಂತರ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಬರಹಗಾರರಿಗೆ 10 ಪುಸ್ತಕಗಳನ್ನು ಗೌರವ ಪ್ರತಿ ನೀಡುತ್ತಾರೆ, ಹೆಚ್ಚು ಪುಸ್ತಕ ಬೇಕಾದರೆ ಕಡಿಮೆ ದರದಲ್ಲಿ ಕೊಡುತ್ತಾರೆ.
ಪುಸ್ತಕದ ಮುಖ ಪುಟ ವಿನ್ಯಾಸ,ISBN ನಂಬರ್ ನೊಂದಾವಣೆ, ಮುದ್ರಣ - ಮಾರಾಟ ಎಲ್ಲಾ ಪ್ರಕಾಶರೇ ಮಾಡುತ್ತಾರೆ.
ಬರಹಗಾರ ತನ್ನ ಕೃತಿಯನ್ನು ಸಂಸ್ಥೆಗೆ e-mail ಮಾಡಬೇಕು ಅವರು ಪೇಜ್ ವಿನ್ಯಾಸ ಮಾಡಿ ಕಳಿಸುತ್ತಾರೆ ಅದರ ಕರೆಕ್ಷನ್ ಬರಹಗಾರರೇ ಮನೆಯಲ್ಲೇ ಕುಳಿತು ಕರೆಕ್ಷನ್ ಮಾಡಿ ಮೈಲ್ ನಲ್ಲಿ ಕಳಿಸಬಹುದು, ಅಂತಿಮವಾಗಿ ಬರಹಗಾರರ ಒಪ್ಪಿಗೆ ಪಡೆದು ಪ್ರಕಾಶಕರು ಪುಸ್ತಕ ಮುದ್ರಣ ಮಾಡುತ್ತಾರೆ.
ನನ್ನ ಕನ್ನಡದ ಕಾದಂಬರಿ ಬೆಸ್ತರ ರಾಣಿ ಚಂಪಕಾದ ಇಂಗ್ಲೀಷ್ ಅನುವಾದ Champak forgotten queen of Keladi Kingdom ಪುಸ್ತಕ ಪ್ರಕಾಶಕರು IIP (ITERATIVE INTERNATIONAL PUBLISHER) ಇದರ ಕೇಂದ್ರ ಕಚೇರಿ ಅಮೇರಿಕಾದ ಮಿಚಿಗನ್ ರಾಜ್ಯದಲ್ಲಿದೆ.
ಈ ಸಂಸ್ಥೆಯ ಅಂಗ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಈಗಾಗಲೇ ನೂರಾರು ಪುಸ್ತಕ ಪ್ರಕಾಶನ ಮಾಡಿದೆ ನನ್ನ ಮುಂದಿನ #ಆನಂದಪುರಂ_ಇತಿಹಾಸ ಪುಸ್ತಕ ಎರೆಡು ಭಾಗವಾಗಿ ಈ ಸಂಸ್ಥೆ ಪ್ರಕಾಶನ ಮಾಡಲಿದೆ.
#ಆಸಕ್ತ_ಲೇಖಕರು_ತಮ್ಮ_ಪುಸ್ತಕ_ಮುದ್ರಣಕ್ಕಾಗಿ
ಹೆಚ್ಚಿನ ಮಾಹಿತಿಗೆ ಸಂಪರ್ಕ ಈ ಕೆಳ ಕಂಡ ಸಂಖ್ಯೆ
+91 88679 14971 ಸಂಪರ್ಕಿಸ ಬಹುದು.
Comments
Post a Comment